ವಿದ್ಯಾರ್ಥಿ ಜೀವನ ಚಿನ್ನಕ್ಕಿಂತ ಅಮೂಲ್ಯ: ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಮುಳ್ಳೂರು ಸಿದ್ದಪ್ಪಾಜಿ

| Published : Aug 11 2024, 01:37 AM IST

ವಿದ್ಯಾರ್ಥಿ ಜೀವನ ಚಿನ್ನಕ್ಕಿಂತ ಅಮೂಲ್ಯ: ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಮುಳ್ಳೂರು ಸಿದ್ದಪ್ಪಾಜಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿ ಜೀವನ ಎಂಬುದು ಚಿನ್ನದಂತಹುದು ಅದನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಮೌಲ್ಯಯುತ ಜೀವನ ಸಾಧಿಸಬೇಕು ಎಂದು ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಮುಳ್ಳೂರು ಸಿದ್ದಪ್ಪಾಜಿ ಹೇಳಿದರು. ಕೊಳ್ಳೇಗಾಲದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ವಿದ್ಯಾರ್ಥಿ ಜೀವನ ಎಂಬುದು ಚಿನ್ನದಂತಹುದು ಅದನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಮೌಲ್ಯಯುತ ಜೀವನ ಸಾಧಿಸಬೇಕು ಎಂದು ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಮುಳ್ಳೂರು ಸಿದ್ದಪ್ಪಾಜಿ ಹೇಳಿದರು.

ವಿಶ್ವಕರ್ಮ ಸಮಾಜದ ವತಿಯಿಂದ ಪಟ್ಟಣದ ರಾಮಮಂದಿರದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸದಾ ಸಾಧನೆಯತ್ತ ದಾಪುಗಾಲಿಡಬೇಕು, ನಿರ್ದಿಷ್ಟ ಛಲ ಮತ್ತು ಗುರಿ ಇಲ್ಲಿ ಮುಖ್ಯ, ವಿದ್ಯಾರ್ಥಿ ಜೀವನ ಚಿನ್ನಕ್ಕಿಂತ ಅಮೂಲ್ಯವಾದುದು, ಹಾಗಾಗಿ ಈ ಜೀವನ ಸದ್ಬಳಕೆ ಮಾಡಿಕೊಂಡು ಭವ್ಯ ಭಾರತದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಿ ಎಂದರು. ಸಮಾಜದಲ್ಲಿ ಒಗ್ಗಟ್ಟಿನ ಕೊರತೆಯಿಂದಾಗಿ ನಾವು ಹಿಂದುಳಿಯುವಂತಾಗಿದ್ದು, ಮುಂದಿನ ದಿನಗಳಲ್ಲಿ ನಾವೆಲ್ಲರೂ ಸಮಾಜದ ಅಭ್ಯುದಯ್ಕಾಗಿ ಒಗ್ಗಟ್ಟಾಗಬೇಕಿದೆ ಎಂದು ಕರೆ ನೀಡಿದರು. ಇದೆ ವೇಳೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಇಂಜಿನಿಯರಿಂಗ್, ಮೆಡಿಕಲ್, ಮಾಸ್ಟರ್ ವ್ಯಾಸಂಗದಲ್ಲಿ ಶೇ.70 ಕ್ಕೂ ಹೆಚ್ಚು ಅಂಕ ಪಡೆದ 34 ವಿದ್ಯಾರ್ಥಿಗಳಿಗೆ ಪ್ರತಿಭಾ ಹಾಗೂ ಹಿರಿಯ ಸಮಾಜ ಸೇವಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಶ್ವಕರ್ಮ ಸಮಾಜ ಅಧ್ಯಕ್ಷ ಕೆ.ಪಿ.ಸಿದ್ದರಾಜು, ಮಾಜಿ ಅಧ್ಯಕ್ಷ ಆರ್.ರವಿ, ಮೈಸೂರಿನ ನಾರಾಯಣ ಹೃದಯಾಲಯ ಹೃದ್ರೋಗ ತಜ್ಞ ಡಾ.ಕೇಶವಮೂರ್ತಿ, ಮಾನಸ ಶಿಕ್ಷಣ ಸಂಸ್ಥೆ ಡಾ.ದತ್ತೇಶ್ ಕುಮಾರ್, ಮೈಸೂರಿನ ಹರಿ ವಿದ್ಯಾಲಯ ಸಹ ಶಿಕ್ಷಕ ವಿ.ಗಣೇಶ್, ಮಿಮಿಕ್ರಿ ರಮೇಶ್ ಬಾಬು, ವಿಶ್ವಕರ್ಮ ಸಮಾಜ ಖಜಾಂಚಿ ಸಂಪತ್ ಕುಮಾರ್ ಇನ್ನಿತರರಿದ್ದರು.