ಸಾರಾಂಶ
ಜಿಲ್ಲಾ ಬಂದ್ ಹಿನ್ನೆಲೆ ಪ್ರತಿಭಟನಾ ಸಭೆ । ಅಂಗಡಿಗಳು ಬಂದ್
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರುನಿರಂತರವಾಗಿ ಹಿಂದೂಗಳ ಮೇಲೆ ದಬ್ಬಾಳಿಕೆ, ಹಿಂದೂಗಳ ಮೇಲೆ ಹತ್ಯೆಗಳು ಇಂದು ನಡೆಯುತ್ತಿದ್ದು ಹಿಂದೂ ಸಮಾಜದ ಮೇಲಿನ ಇಂತಹ ದಬ್ಬಾಳಿಕೆಗೆ ತಕ್ಕ ಉತ್ತರ ನೀಡುವ ಸಮಯ ದೂರವಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಹೇಳಿದರು.
ಮಂಗಳೂರಿನ ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ವಿಹಿಂಪ ಹಾಗೂ ಬಜರಂಗದಳ ಸೋಮವಾರ ಕರೆ ನೀಡಿದ್ದ ಚಿಕ್ಕಮಗಳೂರು ಜಿಲ್ಲಾ ಬಂದ್ ಹಿನ್ನೆಲೆ ಪಟ್ಟಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.ಬಾಂಗ್ಲಾದಲ್ಲಿ ನಡೆದ ಹಿಂದೂಗಳ ನರಮೇಧವನ್ನು ಖಂಡಿಸಿ ಮನೆಗೆ ತೆರಳುವುದರೊಳಗೆ, ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆದಿದೆ. ಇದರ ಜೊತೆಗೆ ಕಾಶ್ಮೀರದಲ್ಲಿ ನಡೆದ ಘಟನೆ ಇಡೀ ಮನುಕುಲವೇ ತಲೆ ತಗ್ಗಿಸುವ ವಿಚಾರವಾಗಿದೆ. ಅಮಾಯಕ ಹಿಂದೂಗಳನ್ನು ಗುರುತಿಸಿ ನಡೆದ ಹತ್ಯೆ ಭೀಕರ ಘಟನೆಯಾಗಿದೆ. ಹಿಂದೂ ಎನ್ನುವ ಕಾರಣಕ್ಕೆ ಭಯೋತ್ಪಾದಕರು ಗುಂಡಿನ ದಾಳಿ ಮಾಡಿರುವುದು ಖಂಡನೀಯ ಎಂದರು.
ಮಂಗಳೂರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಹಿಂದೂ ಸಂಘಟನೆಯ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ. ದೇಶದಲ್ಲಿ ಸಂವಿಧಾನ, ಪೊಲೀಸ್ ಹಾಗೂ ಕಾನೂನು ವ್ಯವಸ್ಥೆ ಇದ್ದರೂ ಸಹ ಇಂತಹ ಘಟನೆ ನಡೆದಿರುವುದು ದುರ್ದೈವವಾಗಿದೆ ಎಂದು ಹೇಳಿದರು.ಅಬ್ದುಲ್ ರಜಾಕ್ ಎಂಬ ಮುಸ್ಲಿಂ ಅವಿವೇಕಿ ಸುಹಾಸ್ ಶೆಟ್ಟಿ ಕೊಲೆಯನ್ನು ಸಮರ್ಥಿಸಿಕೊಂಡಿರುವುದು ಖಂಡನೀಯವಾಗಿದ್ದು, ರಜಾಕ್‌ನಷ್ಟು ನೀಚ ವ್ಯಕ್ತಿ ಸುಹಾಸ್ ಶೆಟ್ಟಿ ಎಲ್ಲ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕಿದೆ. ಹಿಂದೂಗಳ ಹತ್ಯೆ ಖಂಡಿಸಿ ಮಲೆನಾಡು ಭಾಗದಲ್ಲಿ ಹಿಂದೂ ಸಂಘಟನೆಗಳು ಕರೆ ನೀಡಿರುವ ಬಂದ್‌ಗೆ ಎಲ್ಲಾ ವರ್ತಕರು ಒಗ್ಗೂಡಿ ಸ್ಪಂದಿಸಿದ್ದಾರೆ. ವಿಹಿಂಪ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆಯ ಪೋಸ್ಟ್ಗಳನ್ನು ಹಾಕಿದ್ದು, ಈ ಬಗ್ಗೆ ಸರ್ಕಾರ, ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಬಿಜೆಪಿ ಮುಖಂಡ ಟಿ.ಎಂ.ಉಮೇಶ್ ಮಾತನಾಡಿ, ಇದೇ ದೇಶದಲ್ಲಿ ಹುಟ್ಟಿ ಅನ್ನ ತಿಂದ ಮುಸ್ಲಿಂ ಭಯೋತ್ಪಾದಕರು ಹಿಂದೂಗಳನ್ನು ಗುರಿಯಾಗಿಸುವ ಘಟನೆಯನ್ನು ಯಾವುದೇ ಕಾರಣಕ್ಕೂ ಸಹಿಸಲು ಆಗುವುದಿಲ್ಲ. ಕೆಲ ಸರ್ಕಾರ, ರಾಜಕಾರಣಿಗಳು ಕೆಲವೇ ಜಾತಿ, ಜನಾಂಗವನ್ನು ಓಲೈಕೆ ಮಾಡುವುದು ಖಂಡನೀಯ ಎಂದರು.ಜೆಡಿಎಸ್ ಯುವ ಮುಖಂಡ ಅತಿಶಯ್, ಮುಖಂಡರಾದ ಪ್ರಭಾಕರ್ ಪ್ರಣಸ್ವಿ, ಬಿ.ಜಗದೀಶ್ಚಂದ್ರ, ಸಂದೀಪ್‌ಶೆಟ್ಟಿ, ಕೆ.ಆರ್.ದೀಪಕ್, ಅಣ್ಣಪ್ಪ ಹೇರೂರು, ರಕ್ಷಿತ್, ಮಹೇಶ್ಚಂದ್ರ, ಕೆ.ಟಿ.ಗೋವಿಂದೇಗೌಡ, ಮಂಜುಶೆಟ್ಟಿ, ಪ್ರದೀಪ್ ಕಿಚ್ಚಬ್ಬಿ, ಜಗದೀಶ್ ಅರಳೀಕೊಪ್ಪ, ಉಮೇಶ್, ಮಂಜು ಹೊಳೆಬಾಗಿಲು, ಆಟೋ ಸಂದೇಶ್, ವಿಲಾಸ್ ಕುಡ್ವ, ಅರುಣ್‌ಕುಮಾರ್, ಮಂಜು ಹಲಸೂರು ಮತ್ತಿತರರು ಹಾಜರಿದ್ದರು.
ವಿಹಿಂಪ, ಬಜರಂಗದಳದ ಬಂದ್ ಕರೆ ಹಿನ್ನೆಲೆ ಪಟ್ಟಣದ ಅಂಗಡಿ ಮುಂಗಟ್ಟುಗಳು ಬೆಳಗ್ಗಿನಿಂದ ಸ್ವಯಂಪ್ರೇರಿತವಾಗಿ ಸಂಪೂರ್ಣ ಮುಚ್ಚಿದ್ದವು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.