ಶಿಕ್ಷಕರ ಬಹುದಿನದ ಕನಸು ನನಸು

| Published : Feb 15 2024, 01:39 AM IST

ಸಾರಾಂಶ

ಶಿಕ್ಷಕರ ಬೇಡಿಕೆಯಂತೆ ಗುರುಭವನ ನಿರ್ಮಾಣವಾಗುತ್ತಿದ್ದು, ಶೈಕ್ಷಣಿಕ ಕಾರ್ಯಗಳಿಗೆ ನೆರವಾಗಲಿದೆ ಎಂದು ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಶಿಕ್ಷಕರ ಬೇಡಿಕೆಯಂತೆ ಗುರುಭವನ ನಿರ್ಮಾಣವಾಗುತ್ತಿದ್ದು, ಶೈಕ್ಷಣಿಕ ಕಾರ್ಯಗಳಿಗೆ ನೆರವಾಗಲಿದೆ ಎಂದು ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.

ಅವರು ಪಟ್ಟಣದ ಮಿನಿ ವಿಧಾನಸೌಧ ಮುಂಭಾಗದಲ್ಲಿ ನಡೆದ ಗುರುಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಹಲವು ದಶಕದ ಕನಸು ಈಗ ನನಸಾಗಿದ್ದು, ಜನಪ್ರತಿನಿಧಿಗಳ, ಗಣ್ಯರ, ಶಿಕ್ಷಕರ ಸಹಾಯ - ಸಹಕಾರ ನಿರಂತರವಾಗಿದ್ದಾಗ ಮಾತ್ರ ಭವ್ಯವಾದ ಕಟ್ಟಡ ಸಮರ್ಪಣೆಯಾಗಲು ಸಾಧ್ಯವಾಗಲಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ ಮಾತನಾಡಿ, ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಹಾಗೂ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ ಬೆಂಗಳೂರು ಇವರ ಸಹಯೋಗದಲ್ಲಿ ಸರ್ಕಾರದ ನೆರವಿನೊಂದಿಗೆ ತಾಲೂಕಿನ ಶಿಕ್ಷಕರ ವಂತಿಗೆ ಹಣ ಕೂಡ್ರಿಕರಿಸಿ ನೆನಗುದಿಗೆ ಬಿದ್ದಂತ ಶಿಕ್ಷಕರ ಕನಸಿನ ಕೂಸು ಗುರುಭವನ ಕಾಮಗಾರಿ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ ಎಂದರು. ಶಾಸಕ ಮಹಾಂತೇಶ ಕೌಜಲಗಿ, ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ರಾಮದುರ್ಗ ಬಿಇಒ ಆರ್.ಟಿ.ಬಳಿಗಾರ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಚ್.ಕಸಾಳೆ, ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಇಸ್ಮಾಯಿಲ್ ತಿಗಡಿ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಪಾಟೀಲ, ಅಹಿಂದ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ.ತಮ್ಮಣ್ಣವರ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್.ಫಕ್ಕೀರಸ್ವಾಮಿಮಠ, ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಡಿ.ಗಂಗಣ್ಣವರ, ದೈಹಿಕ ಶಿಕ್ಷಕರ ಸಂಘ ತಾಲೂಕಾಧ್ಯಕ್ಷ ಎಸ್.ಐ.ಮಿರ್ಜನ್ನವರ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲೂಕಾಧ್ಯಕ್ಷ್ಯೆ ಎಂ.ಎಂ.ಸುತಗಟ್ಟಿ, ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘದ ತಾಲೂಕಧ್ಯಕ್ಷ್ಯೆ ಹೇಮಾ ಕುಲಕರ್ಣಿ, ರಮೇಶ ದೊಡಗೌಡ್ರ ಸೇರಿದಂತೆ ಅನೇಕ ಶಿಕ್ಷಕರು ಇದ್ದರು. ಶಿಕ್ಷಕರ ವಿವಿಧ ಸಂಘಟನೆಯ ಸದಸ್ಯರು ಇದ್ದರು. ಶಿಕ್ಷಕ ರಾಜು ಹಕ್ಕಿ ಸ್ವಾಗತಿಸಿದರು. ಶಿಕ್ಷಕ ಮಹೇಶ ಯರಗಟ್ಟಿ ನಿರೂಪಿಸಿದರು.