ಹಾನಗಲ್ಲ ತಾಲೂಕಿನ ಗುಂಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಂ.ಎನ್. ಚಿಲಕವಾಡ ಅವರ ನಿವೃತ್ತಿ ಸಮಾರಂಭದಲ್ಲಿ ಚಿಲಕವಾಡ ದಂಪತಿಯನ್ನು ಸನ್ಮಾನಿಸಲಾಯಿತು.

ಹಾನಗಲ್ಲ: ಪವಿತ್ರ ಶಿಕ್ಷಕ ವೃತ್ತಿಯನ್ನು ಮಕ್ಕಳ ಹಿತಕ್ಕೆ ಸಮರ್ಪಣೆ ಮಾಡಿಕೊಳ್ಳುವುದೇ ಗುರುವಿನ ಹಿರಿಮೆಯಾಗಿದ್ದಲ್ಲಿ ಮಾತ್ರ ಅದು ಸಾರ್ಥಕ ಸೇವೆಯಾಗಬಲ್ಲದು ಎಂದು ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ಹೇಳಿದರು.

ತಾಲೂಕಿನ ಗುಂಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಂ.ಎನ್. ಚಿಲಕವಾಡ ಅವರ ನಿವೃತ್ತಿ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕ ಎಂ.ಎನ್. ಚಿಲಕವಾಡ ಅವರು ಗ್ರಾಮೀಣ ಶಾಲೆಗಳಲ್ಲಿ ಹಲವು ದಶಕಗಳ ಸೇವೆ ಸಲ್ಲಿಸಿ, ವಿದ್ಯಾರ್ಥಿಗಳು ಪಾಲಕರ ಗೌರವಕ್ಕೆ ಪಾತ್ರರಾಗಿದ್ದಾರೆ. ಶೈಕ್ಷಣಿಕ ಸಂಸ್ಥೆಗಳ ಹಿತಕ್ಕೆ ಪರಿಶ್ರಮಿಸಿದ್ದಾರೆ ಎಂದರು.

ಸಾಹಿತಿ ಉದಯ ನಾಸಿಕ ಮಾತನಾಡಿ, ಶೈಕ್ಷಣಿಕ ಹಿತಾಸಕ್ತಿ ಕಾಪಾಡುವಲ್ಲಿ ಶಿಕ್ಷಕರ ತ್ಯಾಗ ಬಹುದೊಡ್ಡದು. ಮಕ್ಕಳ ಪ್ರತಿಭೆಯನ್ನು ಪ್ರಜ್ವಲಗೊಳಿಸುವ ಶಿಕ್ಷಕ ಎಲ್ಲ ಕಾಲಕ್ಕೂ ಸಲ್ಲುವ ಗೌರವಕ್ಕೆ ಪಾತ್ರನಾಗುತ್ತಾನೆ ಎಂದರು.

ನಿವೃತ್ತಿ ಗೌರವ ಸ್ವೀಕರಿಸಿದ ಶಿಕ್ಷಕ ಎಂ.ಎನ್. ಚಿಲಕವಾಡ ಮಾತನಾಡಿ, ಮಕ್ಕಳಿಗೂ ಒಳ್ಳೆಯದನ್ನು ಕಲಿಸುವ, ಅದನ್ನೇ ರೂಢಿಗತಗೊಳಿಸುವುದು ಬಹು ಮುಖ್ಯ ಎಂದರು.

ಸೇವಾಲಾಲ ಬಂಜಾರ ಗುರುಪೀಠದ ತಿಪ್ಪೇಶ್ವರಸ್ವಾಮಿ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೀಲಾವತಿ ಚಿಲಕವಾಡ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಹಾದೇವಸ್ವಾಮಿ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್. ನಿಸೀಮಗೌಡರ, ಜಿಲ್ಲಾ ಗೃಹ ರಕ್ಷಕ ದಳ ಕಮಾಂಡೆಂಟ್, ಪ್ರಮೋದ ನಲವಾಗಲ, ಗಿರೀಶ ದೇಶಪಾಂಡೆ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಗುರುನಾಥ ಗವಾಣಿಕರ, ಸಂಜೂ ಪೂಜಾರ, ರಾಮಣ್ಣ ಲಮಾಣಿ, ನಾಗಪ್ಪ ದೊಡ್ಡಮನಿ, ಕುಮಾರ ತಗಡಿನಮನಿ, ವಿಜೇಂದ್ರ ಯತ್ನಳ್ಳಿ, ಯು.ಡಿ. ಸವಣೂರ, ಎನ್.ಎಸ್. ಅಗಸನಹಳ್ಳಿ, ಬಿ.ಎಚ್. ಹಿರೇಮಠ, ಸಿದ್ದು ಗೌರಣ್ಣನವರ, ಆರ್.ಎಫ್. ತಿರುಮಲೆ, ಅಶೋಕ ದಾಸರ, ಎಚ್.ಎನ್. ಪಾಟೀಲ, ಗಂಗಾಧರ ಒಡ್ಡರ, ಗಂಗಾಧರ ನೆಗಳೂರ, ಬಸವರಾಜ ಕರೆಪ್ಯಾಟಿ, ಎನ್.ಬಿ. ಉಗಳವಾಡಿ, ರೇಖಾ ಎಚ್., ಕೊಲ್ಲಪ್ಪ ವಡ್ಡರ, ಮುಖ್ಯೋಪಾಧ್ಯಾಯ ಪವಾರ, ಉಮೇಶ ಅಂಗಡಿ, ಪುಟ್ಟಪ್ಪ ಉಳ್ಳಾಗಡ್ಡಿ, ರಮೇಶಗೌಡ ಪಾಟೀಲ, ಎಸ್.ಆರ್. ತುಪ್ಪದ ಪಾಲ್ಗೊಂಡಿದ್ದರು.

ಶಿಕ್ಷಕಿ ಎಂ. ಅಕ್ಕಮಹಾದೇವಿ ಸ್ವಾಗತಿಸಿದರು. ಮಾಲತೇಶ ಬೆಳಗಾಲ ಕಾರ್ಯಕ್ರಮ ನಿರೂಪಿಸಿದರು. ಅಕ್ಕಮಹಾದೇವಿ ಧಾರವಾಡ ವಂದಿಸಿದರು.