ಅಂಗಡಿಗಳಿಗೆ ಆರೋಗ್ಯ ಅಧಿಕಾರಿಗಳ ತಂಡ ದಿಢೀರ್‌ ಭೇಟಿ: ಪರಿಶೀಲನೆ, ದಂಡ

| Published : Mar 15 2025, 01:01 AM IST

ಅಂಗಡಿಗಳಿಗೆ ಆರೋಗ್ಯ ಅಧಿಕಾರಿಗಳ ತಂಡ ದಿಢೀರ್‌ ಭೇಟಿ: ಪರಿಶೀಲನೆ, ದಂಡ
Share this Article
  • FB
  • TW
  • Linkdin
  • Email

ಸಾರಾಂಶ

ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ನಿರ್ದೇಶನದ ಮೇರೆಗೆ ಸುಂಟಿಕೊಪ್ಪ ಪಟ್ಟಣದ ಅಂಗಡಿ, ಹೊಟೇಲ್‌ಗಳಿಗೆ ಸುಂಟಿಕೊಪ್ಪ ಪೊಲೀಸ್ ಅಧಿಕಾರಿಯೊಂದಿಗೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಅನೀರಿಕ್ಷಿತ ಭೇಟಿ ನೀಡಿ ತಂಬಾಕು ಉತ್ಪನ್ನ ಮಾರಾಟ, ಸಿಒಟಿಪಿಎ ಕಾಯ್ದೆ ಉಲ್ಲಂಘನೆ ಬಗ್ಗೆ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಈ ಸಂದರ್ಭ ಸುಮಾರು 16 ಪ್ರಕರಣಗಳು ಪತ್ತೆಯಾಗಿದ್ದು, 1950 ರು. ದಂಡ ವಿಧಿಸಿ, ಸಾರ್ವಜನಿಕರ ಆರೋಗ್ಯ ರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.

ಮುಂದಿನ ದಿನಗಳಲ್ಲಿ ಇಂತಹ ಪ್ರಕರಣ ಕಂಡು ಬಂದಲ್ಲಿ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಸಲಾಯಿತು.ತಂಡದಲ್ಲಿ ಸುಂಟಿಕೊಪ್ಪ ಠಾಣೆಯ ಎಎಸ್‌ಐ ಸೈಮನ್ ಡಿಕುನ್ಹ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞ, ಆರೋಗ್ಯ ನಿರೀಕ್ಷಾಧಿಕಾರಿ ಲೋಕೇಶ್, ಜಿಲ್ಲಾ ತಂಬಾಕು ಸಂಯೋಜಕ ಪುನೀತ, ಜಿಲ್ಲಾ ತಂಬಾಕು ಕೋಶದ ಮಂಜುನಾಥ್ ಇದ್ದರು.