ಸಾರಾಂಶ
ಗ್ರಾಮದಲ್ಲಿ ಸಂಚರಿಸಿ ಮನೆಮನೆಗಳಿಂದ ಮಾಹಿತಿ ಸಂಗ್ರಹಿಸಿದ ಸಾಂಕ್ರಾಮಿಕ ರೋಗ ತಜ್ಞರ ತಂಡ, ಗ್ರಾಮದ ಜನತೆಯು ಬಳಸುತ್ತಿರುವ ಗ್ರಾಪಂನಿಂದ ಪೂರೈಕೆಯಾಗುವ ನೀರು ಹೊರತುಡಿಸಿ ಇತರೆ ಎಲ್ಲಾ ನೀರಿನ ಮೂಲಗಳನ್ನು ವೀಕ್ಷಿಸಿದರು. ನಂತರ ಜಲಮೂಲದ ನೀರನ್ನು ಪರೀಕ್ಷೆಗೆ ಒಳಪಡಿಸಲು ತಜ್ಞರ ತಂಡ ನಿರ್ಧರಿಸಿ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿತು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ವಾಂತಿ ಬೇಧಿಯಿಂದ ಇಬ್ಬರು ವಯೋವೃದ್ಧ ಮಹಿಳೆಯರು ಮೃತಪಟ್ಟು ಹಲವರು ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ತಾಲೂಕಿನ ಮಾರೇನಹಳ್ಳಿಗೆ ರಾಜ್ಯ ಸರ್ವೇಕ್ಷಣ ಸಾಂಕ್ರಾಮಿಕ ಸೋಂಕು ತಜ್ಞ ಡಾ.ಶ್ರೀನಿವಾಸ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್ ನೇತೃತ್ವದ ಆಧಿಕಾರಿಗಳ ತಂಡ ಭೇಟಿ ನೀಡಿ, ನೀರು ಪೂರೈಕೆ ಘಟಕ ಸೇರಿದಂತೆ ಗ್ರಾಮಸ್ಥರು ಕುಡಿಯಲು ಬಳಸುವ ನೀರಿನ ಮೂಲಗಳನ್ನು ಪರಿಶೀಲನೆ ನಡೆಸಿತು.ಗ್ರಾಮದಲ್ಲಿ ಗ್ರಾಪಂ ವತಿಯಿಂದ ಪೂರೈಕೆಯಾಗುವ ನೀರು ಕಲುಷಿತಗೊಂಡಿಲ್ಲ ಎಂಬ ಲ್ಯಾಬ್ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆಯು ವಾಂತಿ ಬೇಧಿ ಉಂಟಾಗಲು ಕಾರಣವನ್ನು ಪತ್ತೆ ಹಚ್ಚಲು ರಾಜ್ಯಮಟ್ಟದ ಸಾಂಕ್ರಾಮಿಕ ರೋಗ ತಜ್ಞರ ತಂಡವನ್ನು ಗ್ರಾಮಕ್ಕೆ ಕಳುಹಿಸಿದೆ.
ಗ್ರಾಮದಲ್ಲಿ ಸಂಚರಿಸಿ ಮನೆಮನೆಗಳಿಂದ ಮಾಹಿತಿ ಸಂಗ್ರಹಿಸಿದ ಸಾಂಕ್ರಾಮಿಕ ರೋಗ ತಜ್ಞರ ತಂಡ, ಗ್ರಾಮದ ಜನತೆಯು ಬಳಸುತ್ತಿರುವ ಗ್ರಾಪಂನಿಂದ ಪೂರೈಕೆಯಾಗುವ ನೀರು ಹೊರತುಡಿಸಿ ಇತರೆ ಎಲ್ಲಾ ನೀರಿನ ಮೂಲಗಳನ್ನು ವೀಕ್ಷಿಸಿದರು. ನಂತರ ಜಲಮೂಲದ ನೀರನ್ನು ಪರೀಕ್ಷೆಗೆ ಒಳಪಡಿಸಲು ತಜ್ಞರ ತಂಡ ನಿರ್ಧರಿಸಿ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿತು.ರಾಜ್ಯ ಸರ್ವೇಕ್ಷಣಾ ಸಾಂಕ್ರಾಮಿಕ ಸೋಂಕು ರೋಗ ತಜ್ಞ ಡಾ.ಶ್ರೀನಿವಾಸ್ ಮಾತನಾಡಿ, ಗ್ರಾಮಸ್ಥರಿಗೆ ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನೇ ಸೇವಿಸಬೇಕು ಎಂದು ತಿಳಿಸಿದರು. ಯಾವುದೇ ವಾಂತಿ, ಬೇಧಿಯಂತಹ ಲಕ್ಷ್ಮಣಗಳು, ಜ್ವರ, ಶೀತ, ನೆಗಡಿ, ಕೆಮ್ಮು ಅನಾರೋಗ್ಯ ಕಂಡು ಬಂದಲ್ಲಿ ತಕ್ಷಣ ಆರೋಗ್ಯ ಇಲಾಖೆ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತರ ಗಮನಕ್ಕೆ ತರಬೇಕು. ತಕ್ಷಣ ಚಿಕಿತ್ಸೆ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು ಎಂದು ಗ್ರಾಮಸ್ಥರಿಗೆ ಅರಿವು ಮೂಡಿಸಿದರು.
ತಾಲೂಕು ಆರೋಗ್ಯ ಆಡಳಿತ ಅಧಿಕಾರಿ ಡಾ.ಅಜಿತ್, ಭಾರತೀಪುರ ಕ್ರಾಸ್ ಗ್ರಾಪಂ ಅಧ್ಯಕ್ಷ ಕುಬೇರ, ಸದಸ್ಯರಾದ ಕೆಂಪರಾಜು, ನಾಗೇಶ್, ಕುಮಾರ್, ಲಕ್ಷ್ಮಮ್ಮ, ಆರೋಗ್ಯ ಇಲಾಖೆ ಶಿವಸ್ವಾಮಿ, ಧಮೇಂದ್ರ, ನವೀನ್, ರೇಖಾ, ಲೀಲಾವತಿ, ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.