ಕಳ್ಳನಿಂದ ಮಹಿಳೆ ಮೇಲೆ ರಾಡಿನಿಂದ ಹಲ್ಲೆ

| Published : Jan 29 2025, 01:36 AM IST

ಸಾರಾಂಶ

ಕೆಲಸಕ್ಕೆ ತೆರಳುತ್ತಿದ್ದ ಮಹಿಳೆ ಮೇಲೆ ಕಳ್ಳನೊಬ್ಬ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ, ಗಾಯಗೊಳಿಸಿ ಪರಾರಿಯಾಗಿರುವ ಘಟನೆ ತಾಲೂಕಿನ ಬಿಳಿದೇವಾಲಯ ರೇಷ್ಮೆ ಬಿತ್ತನೆ ಕೋಠಿಯಲ್ಲಿ ಮಂಗಳವಾರ ಪಟ್ಟಣದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಕುಣಿಗಲ್

ಕೆಲಸಕ್ಕೆ ತೆರಳುತ್ತಿದ್ದ ಮಹಿಳೆ ಮೇಲೆ ಕಳ್ಳನೊಬ್ಬ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ, ಗಾಯಗೊಳಿಸಿ ಪರಾರಿಯಾಗಿರುವ ಘಟನೆ ತಾಲೂಕಿನ ಬಿಳಿದೇವಾಲಯ ರೇಷ್ಮೆ ಬಿತ್ತನೆ ಕೋಠಿಯಲ್ಲಿ ಮಂಗಳವಾರ ಪಟ್ಟಣದಲ್ಲಿ ನಡೆದಿದೆ.

ಕುಣಿಗಲ್ ಟೌನ್ ಕೆ.ಆರ್ ಎಸ್ ಅಗ್ರಹಾರ ವಾಸಿ ಶ್ವೇತಾ( ೩೯) ಹಲ್ಲೆಗೆ ಒಳಗಾದ ಮಹಿಳೆ. ಶ್ವೇತಾ ಬಿಳಿದೇವಾಲಯ ರೇಷ್ಮೆ ಜಂಟಿ ನಿರ್ದೇಶಕರ ಕಚೇರಿಯ ಕೂಗಳತೆ ದೂರದಲ್ಲಿರುವ ರೇಷ್ಮೆಬಿತ್ತನೆ ಕೋಠಿಯಲ್ಲಿ ಹೊರಗುತ್ತಿಗೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಎಂದಿನಂತೆ ಬೆಳಗ್ಗೆ ೮ ಗಂಟೆ ಸಮಯದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಕಚೇರಿ ಮುಂಭಾಗದಲ್ಲಿ ಅಡ್ಡಗಟ್ಟಿದ ಅಪರಿಚಿತ ವ್ಯಕ್ತಿ ಶ್ವೇತಾಳ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರ ಕಸಿಯಲು ಯತ್ನಿಸಿದ್ದಾನೆ. ಆದರೆ ಅಕೆ ಕೇವಲ ಕರಿಮಣಿ ಸರವನ್ನು ಮಾತ್ರ ಹಾಕಿಕೊಂಡು ಬಂದಿದ್ದರಿಂದ ನಿರಾಸೆಗೊಂಡ ವ್ಯಕ್ತಿ ಅಕೆಯ ಮೇಲೆ ಕಬ್ಬಿಣದ ರಾಡಿನಿಂದ ತಲೆಗೆ ಹಲ್ಲೆ ನಡೆಸಿದ್ದಾನೆ. ಘಟನೆ ನಂತರ ರಕ್ತ ಸ್ರಾವದ ನಡುವೆಯೂ ಆಲೆ ಮುಖ್ಯ ರಸ್ತೆಗೆ ಬಂದು ಆಟೋದಲ್ಲಿ ಕುಣಿಗಲ್ ಆಸ್ಪತ್ರೆಗೆ ಬಂದು ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಂತರ ಪೋಲಿಸರು ಆಸ್ಪತ್ರೆಗೆ ಆಗಮಿಸಿ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.