ವಿಚಾರಪೂರಕವಾದ ಬೆಲ್ಲದಾರತಿ ಪುಸ್ತಕ: ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಮೆಚ್ಚುಗೆ

| Published : Aug 25 2025, 01:00 AM IST

ವಿಚಾರಪೂರಕವಾದ ಬೆಲ್ಲದಾರತಿ ಪುಸ್ತಕ: ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಮೆಚ್ಚುಗೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಲ್ಲದಾರತಿ ಪುಸ್ತಕ ಅದ್ಬುತವಾಗಿ ಮೂಡಿ ಬಂದಿದೆ. ಪುಸ್ತಕದಲ್ಲಿನ ಒಳಗಿನ ತಿರುಳು ತುಂಬ ಭಾರವಾಗಿದೆ. ಇದನ್ನು ಒಳಗೆ ಇಟ್ಟುಕೊಂಡರೆ ಕಷ್ಟವಾಗುತ್ತದೆ. ಅದನ್ನು ಹೊರಗೆ ಚೆಲ್ಲುವಂತಾಗಬೇಕು. ಪುಸ್ತಕದಲ್ಲಿನ ವಿಚಾರಗಳು ಪ್ರಜ್ಞಾಪೂರ್ವಕ, ವಿಚಾರ ಪೂರಕವಾಗಿದೆ. ಸಮ್ಮೇಳನದ ನೆನಪಿಗಾಗಿ ಹೊರ ತಂದಿರುವುದು ತುಂಬ ಸಂತೋಷವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಜಿಲ್ಲೆಯ ಪ್ರತಿಯೊಬ್ಬರ ಸಹಕಾರ ಕಾರಣವಾಗಿದೆ. ಸಮ್ಮೇಳನದ ನೆನಪಿಗಾಗಿ ಹೊರ ತಂದಿರುವ ಬೆಲ್ಲದಾರತಿ ಪುಸ್ತಕ ವಿಚಾರಪೂರಕವಾಗಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣಸಂಚಿಕೆ ಬೆಲ್ಲದಾರತಿ ಬಿಡುಗಡೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚ ನೀಡಿದರು.

ಆರಂಭದಲ್ಲಿ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ಗೊಂದಲ, ತಲ್ಲಣದ ಗೂಡಿನ ನಡುವೆ ಗೊ.ರು.ಚನ್ನಬಸಪ್ಪ ಹೆಸರು ಬರುತ್ತಿದ್ದಂತೆ ಎಲ್ಲಾ ಸ್ಥಬ್ಧವಾಯಿತು. ಯಾವುದೇ ವಿರೋಧ- ಅಪಸ್ವರ ಇಲ್ಲದೆ ಶಕ್ತಿ, ಸನ್ನಡತೆಯ ಸಾಹಿತ್ಯದಲ್ಲಿ ಬರಹ, ಚಿತಂಕರಾಗಿದ್ದ ವಿದ್ವತ್ತಿನ ಚನ್ನಬಸಪ್ಪರನ್ನು ಪ್ರತಿಯೊಬ್ಬರು ಒಪ್ಪಿಕೊಂಡರು ಎಂದರು.

ಅದೇ ರೀತಿ ಶಾಸಕರಾಗಿ, ಈ ಹಿಂದೆ ಆರೋಗ್ಯ, ಸಾರಿಗೆ ಸಚಿವರಾಗಿ ಕೆಲಸ ಮಾಡಿ ಅನುಭವ ಸಾರವನ್ನು ಕೃಷಿ ಸಚಿವರಾಗಿ ಸಮ್ಮೇಳನ ಜವಾಬ್ದಾರಿ ಹೊತ್ತು ಉತ್ತಮವಾಗಿ ನಡೆಸಿಕೊಟ್ಟರು. ಇದಕ್ಕೆ ಜಿಲ್ಲೆಯ ಶಾಸಕರು, ಜಿಲ್ಲಾಡಳಿತ, ಸಾಹಿತಿಗಳು, ಸಂಘಟನೆಗಳ ಸಹಕಾರವೂ ಬಹುದೊಡ್ಡದಿದೆ ಎಂದರು.

ಬೆಲ್ಲದಾರತಿ ಪುಸ್ತಕ ಅದ್ಬುತವಾಗಿ ಮೂಡಿ ಬಂದಿದೆ. ಪುಸ್ತಕದಲ್ಲಿನ ಒಳಗಿನ ತಿರುಳು ತುಂಬ ಭಾರವಾಗಿದೆ. ಇದನ್ನು ಒಳಗೆ ಇಟ್ಟುಕೊಂಡರೆ ಕಷ್ಟವಾಗುತ್ತದೆ. ಅದನ್ನು ಹೊರಗೆ ಚೆಲ್ಲುವಂತಾಗಬೇಕು. ಪುಸ್ತಕದಲ್ಲಿನ ವಿಚಾರಗಳು ಪ್ರಜ್ಞಾಪೂರ್ವಕ, ವಿಚಾರ ಪೂರಕವಾಗಿದೆ. ಸಮ್ಮೇಳನದ ನೆನಪಿಗಾಗಿ ಹೊರ ತಂದಿರುವುದು ತುಂಬ ಸಂತೋಷವಾಗಿದೆ ಎಂದರು.

ಒಳಗಿನ ಬೇರು ಚೆನ್ನಾಗಿದ್ದರೆ ಹೊರಗೆ ಗಟ್ಟಿಯಾಗಿ ನಿಲ್ಲಲು ಸಾಧ್ಯ. ಅದೇ ರೀತಿ ಕಣ್ಣಿಗೆ ಕಾಣದಂತ ಹಲವು ಸಾಹಿತ್ಯ ಬೇರೆಗಳು ಹಾಳವಾಗಿ ಬೇರೂರಿದಾಗ ಮಾತ್ರ ಉತ್ತಮ ಸಾಹಿತಿಗಳು, ವಿಚಾರಗಳು ಹೊರ ಬಾರಲು ಸಾಧ್ಯ. ಇಂತಹ ಕೆಲಸವನ್ನು ಜಿಲ್ಲಾಡಳಿತ , ಸಾಹಿತಿಗಳು ಪುಸ್ತಕವನ್ನು ಹೊರತಂದು ಒಳ್ಳೆಯ ಕೆಲಸ ಮಾಡಿದೆ ಎಂದು ಹೇಳಿದರು.