ದಸರಾ ವಸ್ತು ಪ್ರದರ್ಶನಕ್ಕೆ ಒಟ್ಟಾರೆ 15 ಲಕ್ಷ ಮಂದಿ ಭೇಟಿ

| Published : Jan 13 2024, 01:34 AM IST

ದಸರಾ ವಸ್ತು ಪ್ರದರ್ಶನಕ್ಕೆ ಒಟ್ಟಾರೆ 15 ಲಕ್ಷ ಮಂದಿ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

- ಶಾಸಕ ಟಿ.ಎಸ್. ಶ್ರೀವತ್ಸ - 90 ದಿನಗಳಿಂದ ನಡೆದ ಪ್ರದರ್ಶನಕ್ಕೆ ತೆರೆ

- ಶಾಸಕ ಟಿ.ಎಸ್. ಶ್ರೀವತ್ಸ

- 90 ದಿನಗಳಿಂದ ನಡೆದ ಪ್ರದರ್ಶನಕ್ಕೆ ತೆರೆ---

ಕನ್ನಡಪ್ರಭ ವಾರ್ತೆ ಮೈಸೂರು

90 ದಿನಗಳ ದಸರಾ ವಸ್ತು ಪ್ರದರ್ಶನಕ್ಕೆ ಸುಮಾರು 15 ಲಕ್ಷ ಜನ ಭೇಟಿ ನೀಡಿದ್ದು, ದಸರಾ ವಸ್ತು ಪ್ರದರ್ಶನ ಯಶಸ್ವಿಯಾಗಿದೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.

ವಸ್ತು ಪ್ರದರ್ಶನ ಆವರಣದಲ್ಲಿ ಶುಕ್ರವಾರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ದಸರಾ ವಸ್ತು ಪ್ರದರ್ಶನಕ್ಕೆ ಹೆಸರು ವಾಸಿ. ಆವರಣದಲ್ಲಿ ವ್ಯಾಪಾರ ವಹಿವಾಟು ಉತ್ತಮವಾಗಿ ನಡೆದಿದೆ. ದೇಶದ ಮೂಲೆ ಮೂಲೆಯಿಂದ ಜನರು ವಸ್ತು ಪ್ರದರ್ಶನಕ್ಕೆ ಬೇಟಿ ನೀಡಿದ್ದಾರೆ. ಇಲ್ಲಿ ಮಳಿಗೆ ತೆರೆದಿದ್ದವರು ಆದಾಯ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

2023 ರ ದಸರಾ ವಸ್ತು ಪ್ರದರ್ಶನದಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ನಿಗಮ ಮಂಡಳಿಗಳು ಹಾಗೂ ಜಿಪಂಗಳಿಂದ ತೆರೆದ ಮಳಿಗೆಗಳಲ್ಲಿ ಬಹುಮಾನಕ್ಕೆ ಆಯ್ಕೆಯಾದ ಮಳಿಗೆಗಳಿಗೆ ಬಹುಮಾನ ವಿತರಿಸಲಾಯಿತು. ಉತ್ತಮವಾಗಿ ಚಿತ್ರ ಬಿಡಿಸಿದ ಮಕ್ಕಳಿಗೆ, ವಿಶೇಷ ವಿಭಾಗದಲ್ಲಿ ಕಲಾಕೃತಿ ನಿರ್ಮಾಣ, ಪೆನ್ಸಿಲ್ ಶೇಡಿಂಗ್ ವಿಭಾಗದಲ್ಲಿ ಬಹುಮಾನ ವಿತರಣೆ, ಮಹಿಳಾ ವಿಭಾಗದ ಸಾಂಪ್ರದಾಯಿಕ ಕಲೆ, ಪ್ರಕೃತಿ ಚಿತ್ರಣ ವಿಭಾಗದಲ್ಲಿ ಉತ್ತಮ ಕಲೆ ಪ್ರದರ್ಶಿಸಿದವರಿಗೆ ಬಹುಮಾನ ವಿತರಿಸಲಾಯಿತು.

ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಒ ರಾಜೇಶ್ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತ ರಾವ್ ಪಾಟೀಲ್, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.