ತರೀಕೆರೆ-ಅಜ್ಜಂಪುರ ತಾಲೂಕುಗಳಿಂದ ಒಟ್ಟು 2315 ವಿದ್ಯಾರ್ಥಿಗಳು

| Published : Mar 24 2024, 01:31 AM IST

ಸಾರಾಂಶ

ಎಸ್ ಎಸ್ ಎಲ್ ಸಿ ಪರೀಕ್ಷೆ ಮಾರ್ಚ್ 25 ರಂದು ಪ್ರಾರಂಭವಾಗಲಿದ್ದು, ತರೀಕೆರೆ ಶೈಕ್ಷಣಿಕ ವಲಯಗಳ 09 ಪರೀಕ್ಷಾ ಕೇಂದ್ರಗಳಲ್ಲಿ 2315 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಗೋವಿಂದಪ್ಪ ಮಾಹಿತಿ ನೀಡಿದ್ದಾರೆ.

ನಾಳೆಯಿಂದ ಎಸ್ಎಸ್ಎಲ್ ಸಿ ಪರೀಕ್ಷೆ । 9 ಪರೀಕ್ಷಾ ಕೇಂದ್ರಗಳು: ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದಪ್ಪ ಮಾಹಿತಿ

ಕನ್ನಡಪ್ರಭ ವಾರ್ತೆ, ತರೀಕೆರೆ

ಎಸ್ ಎಸ್ ಎಲ್ ಸಿ ಪರೀಕ್ಷೆ ಮಾರ್ಚ್ 25 ರಂದು ಪ್ರಾರಂಭವಾಗಲಿದ್ದು, ತರೀಕೆರೆ ಶೈಕ್ಷಣಿಕ ವಲಯಗಳ 09 ಪರೀಕ್ಷಾ ಕೇಂದ್ರಗಳಲ್ಲಿ 2315 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಗೋವಿಂದಪ್ಪ ಮಾಹಿತಿ ನೀಡಿದ್ದಾರೆ. ತರೀಕೆರೆ ಶೈಕ್ಷಣಿಕ ವಲಯದಲ್ಲಿ ಒಟ್ಟು 44 ಶಾಲೆಗಳ ಬಾಲಕಿಯರು, ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿ ಗಳು ಸೇರಿ ಒಟ್ಟು 2315 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. 9 ಪರೀಕ್ಷಾ ಅಧೀಕ್ಷಕರು, ಕಸ್ತೋಡಿಯನ್ಸ್ ಮೊಬೈಲ್ ಸ್ವಾಧೀನಾಧಿಕಾರಿಗಳು ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ, ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಇರುತ್ತಾರೆ ಎಂದು ತಿಳಿಸಿದ್ದಾರೆ.

ತರೀಕೆರೆ ಶೈಕ್ಷಣಿಕ ವಲಯದಲ್ಲಿ. ಬಾಲಕರ ಪದವಿ ಪೂರ್ವ ಕಾಲೇಜು ತರೀಕೆರೆ, ಬಾಲಕಿಯರ ಪದವಿ ಪೂರ್ವ ಕಾಲೇಜು ತರೀಕೆರೆ, ಶೆಟ್ರು ಸಿದ್ದಪ್ಪ ಪದವಿಪೂರ್ವ ಕಾಲೇಜು ಅಜ್ಜಂಪುರ, ಕೆಪಿಎಸ್ ಶಿವನಿ, ಸರ್ಕಾರಿ ಪ್ರೌಢಶಾಲೆ, ಗಡಿಹಳ್ಳಿ, ಶ್ರೀ ಸುಜಾತ ಪ್ರೌಢಶಾಲೆ ಹುಣಸಘಟ್ಟ, ಸರ್ಕಾರಿ ಪ್ರೌಢಶಾಲೆ ಬಾವಿಕೆರೆ, ಶ್ರೀ ಗ್ರಾಮ ಜ್ಯೋತಿ ಪ್ರೌಢಶಾಲೆ ಲಕ್ಕವಳ್ಳಿ, ಕನ್ನಡ ನೂತನ ಅನುದಾನಿತ ಪ್ರೌಢಶಾಲೆ ಅಜ್ಜಂಪುರ ಈ ಶಾಲೆಗಳನ್ನು ಪರೀಕ್ಷೆ ಕೇಂದ್ರಗಳಾಗಿ ಗುರುತಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಪ್ರತಿ ಪರೀಕ್ಷೆಗಳಿಗೆ ಒಬ್ಬ ಸ್ಥಾನಿಕ ಜಾಗೃತ ದಳದ ಅಧಿಕಾರಿಗಳನ್ನು ನೇಮಕ ಮಾಡಲಾಗಿರುತ್ತದೆ. ಪ್ರತಿ ಕೊಠಡಿಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆಯನ್ನು ಪ್ರದರ್ಶಿಸಲಾಗಿರುತ್ತದೆ, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರ ಕಣ್ಗಾವಲಿನಲ್ಲಿ ವಿದ್ಯಾರ್ಥಿಗಳು ನಿರ್ಭೀತವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಬಾರಿ ತಾಲೂಕು ಹಂತ ಮತ್ತು ಜಿಲ್ಲಾ ಹಂತಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಚಟುವಟಿಕೆಗಳನ್ನು ಪರಿಶೀಲಿಸುವ ಉದ್ದೇಶದಿಂದ ವೆಬ್ ಕಾಸ್ಟಿಂಗ್ ಮಾಡಿ ತಂಡಗಳ ರಚನೆ ಮುಖಾಂತರ ಪರೀಕ್ಷಾ ಕಾರ್ಯ ವೀಕ್ಷಣೆಗೆ ಅನುವು ಮಾಡಿಕೊಡ ಲಾಗಿರುತ್ತದೆ. ಎಲ್ಲಾ ರೀತಿಯಲ್ಲಿ ಪರೀಕ್ಷೆ ಸುವ್ಯವಸ್ಥಿತವಾಗಿ ನಡೆಸಲು ಅಗತ್ಯ ಕ್ರಮಗಳನ್ನು ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಹಂತದಲ್ಲಿ ಸಹಾಯವಾಣಿಯ ಮುಖಾಂತರ ಯಾವುದೇ ವಿದ್ಯಾರ್ಥಿ ಪರೀಕ್ಷೆಗೆ ವಂಚಿತ ನಾಗದೇ ಇರುವ ರೀತಿಯಲ್ಲಿ ಸರ್ವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.