ದೊರೈರಾಜು ಹೆಸರಲ್ಲಿ ಪಂದ್ಯಾವಳಿ ಶ್ಲಾಘನೀಯ ವಿಚಾರ: ಶಾಸಕ ಎ. ಆರ್‌. ಕೃಷ್ಣಮೂರ್ತಿ

| Published : Jan 15 2024, 01:46 AM IST

ಸಾರಾಂಶ

1994ರಲ್ಲಿ ನಾನು ಪ್ರಥಮ ಶಾಸಕರಾಗಿದ್ದ ವೇಳೆ ದಿ.ಎನ್. ದೊರೈರಾಜು ಅವರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಅವರ ಜೊತೆ ನನ್ನ ಒಡನಾಟ ಇತ್ತು. ಅವರ ಪುತ್ರ ಚೇತನ್ ದೊರೈರಾಜು ಅವರು ತಂದೆಯ ಸ್ಮರಣಾರ್ಥ ಕೊಳ್ಳೇಗಾಲದಲ್ಲಿ ಕಬ್ಬಡಿ ಪಂದ್ಯಾವಳಿ ಆಯೋಜನೆ ಮಾಡಿರುವುದು ಶ್ಲಾಘನೀಯ ಕಾರ್ಯ ಅವರ ರಾಜಕೀಯ ಭವಿಷ್ಯ ಉತ್ತಮವಾಗಿ ಸಾಗಲಿ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ1994ರಲ್ಲಿ ನಾನು ಪ್ರಥಮ ಶಾಸಕರಾಗಿದ್ದ ವೇಳೆ ದಿ.ಎನ್. ದೊರೈರಾಜು ಅವರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಅವರ ಜೊತೆ ನನ್ನ ಒಡನಾಟ ಇತ್ತು. ಅವರ ಪುತ್ರ ಚೇತನ್ ದೊರೈರಾಜು ಅವರು ತಂದೆಯ ಸ್ಮರಣಾರ್ಥ ಕೊಳ್ಳೇಗಾಲದಲ್ಲಿ ಕಬ್ಬಡಿ ಪಂದ್ಯಾವಳಿ ಆಯೋಜನೆ ಮಾಡಿರುವುದು ಶ್ಲಾಘನೀಯ ಕಾರ್ಯ ಅವರ ರಾಜಕೀಯ ಭವಿಷ್ಯ ಉತ್ತಮವಾಗಿ ಸಾಗಲಿ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಹೇಳಿದರು. ಎಂಜಿಎಸ್‌ವಿ ಕಾಲೇಜು ಆವರಣದಲ್ಲಿ ಅಯೋಜಿಸಿದ್ದ ದೊರೆ ಬೆಳಕು ಹೊನಲು, ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ದಿ.ಎನ್.ದೊರೈರಾಜ್ ಅವರು ಅಭಿವೃದ್ಧಿ ಪರ ಕಾಳಜಿಯಿತ್ತು. ಅವರು ನೇರವಾದಿಯಾಗಿದ್ದರು, ಗೌರವಯುತವಾದ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು, ಅವರು ಅಧಿಕಾರದಲ್ಲಿದ್ದ ವೇಳೆ ಜನರಿಗೆ ಉತ್ತಮ ಸೇವೆಯನ್ನು ಒದಗಿಸಿದ್ದರು ಎಂದರು. ಮಾಜಿ ಶಾಸಕ ಆರ್.ನರೇಂದ್ರ ರಾಜುಗೌಡ ಮಾತನಾಡಿ, ದಿವಂಗತ ಎನ್.ದೊರೈರಾಜ್ ವಿದ್ಯಾರ್ಥಿ ನಾಯಕರಾಗಿ ಬೆಳೆದು ರಾಜಕೀಯ ಪ್ರವೇಶಿಸಿ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, 2 ಬಾರಿ ಉಪಾಧ್ಯಕ್ಷರಾಗಿ ಅನ್ಯಾಯಕೊಳಗಾದ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಅವರು ಅಧಿಕಾರಿಗಳಿಗೆ ಸಿಂಹಸಪ್ನವಾಗಿ ಕೆಲಸ ಮಾಡಿದ್ದರು, ಯಾರೇ ತಪ್ಪು ಮಾಡಿದರು ಖಂಡಿಸುತ್ತಿದ್ದರು. ಅವರ ಸೇವೆಯ ದಾರಿಯಲ್ಲಿ ಅವರ ಸುಪುತ್ರ ಚೇತನ್ ದೊರೈರಾಜ್ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.ಈಸಂದರ್ಭದಲ್ಲಿ ಪತ್ರಕರ್ತ ಎಂ.ಆರ್.ಸತ್ಯನಾರಾಯಣ, ಕೆಪಿಸಿಸಿ ಅಲ್ಪ ಸಂಖ್ಯಾತ ವಿಭಾಗ ರಾಜ್ಯ ಉಪಾಧ್ಯಕ್ಷ ರಫೀಕ್ ಅಹಮ್ಮದ್, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ದಿ.ಎನ್.ದೊರೈರಾಜ್ ಧರ್ಮಪತ್ನಿ ರಾಜಮ್ಮ, ಕೆ.ಎಂ.ಎಫ್ ನಿರ್ದೇಶಕ ಮಧುವನಹಳ್ಳಿ ನಂಜುಂಡಸ್ವಾಮಿ, ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ತೋಟೇಶ್, ನಗರಸಭಾ ಮಾಜಿ ಅಧ್ಯಕ್ಷ ಬಸ್ತಿಪುರ ಶಾಂತರಾಜು, ಅಂಬೇಡ್ಕರ್ ಪ್ರತಿಮೆ ನಿರ್ಮಾತೃ ಓಲೆ ಮಹದೇವ, ಕಾರ್ಯ ನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಡಿ.ಸಿದ್ದರಾಜು ಇನ್ನಿತರಿದ್ದರು.