ರಸ್ತೆ ಮೇಲೆ ಮರ ಬಿದ್ದು ಸಂಚಾರ ಸ್ಥಗಿತ

| Published : Apr 17 2025, 12:07 AM IST

ಸಾರಾಂಶ

A tree fell on the road and traffic was disrupted

ತೀರ್ಥಹಳ್ಳಿ: ತೀರ್ಥಹಳ್ಳಿ-ಕೊಪ್ಪ ಮಾರ್ಗದ ಮೇಲಿನಕುರುವಳ್ಳಿಯಲ್ಲಿ ಬುಧವಾರ ಸಂಜೆ ಭಾರಿ ಗಾತ್ರದ ಮರವೊಂದು ವಿದ್ಯುತ್ ಲೈನ್ ಸೇರಿ ರಾಷ್ಟ್ರೀಯ ಹೆದ್ದಾರಿ ಮೇಲೆ ಬಿದ್ದು ಸಂಚಾರ ಸ್ಥಗಿತಗೊಂಡಿರುವುದಲ್ಲದೆ. ಈ ಮಾರ್ಗದಲ್ಲಿ ಬರುತ್ತಿದ್ದ ಬೈಕ್ ಸವಾರನ ಮೇಲೆ ಮರದ ಕೊಂಬೆ ಬಿದ್ದು, ಗಾಯಗಳಾಗಿವೆ. ಗಾಯಗೊಂಡಿರುವ ಬೈಕ್ ಸವಾರ ಪ್ರಕಾಶ್ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಮರದ ಕೆಳಗೆ ಸಿಕ್ಕಿ ಬಿದ್ದಿರುವ ಬೈಕಿಗೆ ಹಾನಿ ಸಂಭವಿಸಿದೆ. ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದ ಕಾರಣ ಮೂರು ಕಂಬಗಳು ತುಂಡಾಗಿದ್ದು ಪಟ್ಟಣದಲ್ಲಿ ಎರಡು ತಾಸು ವಿದ್ಯುತ್ ವ್ಯತ್ಯಯವಾಗಿತ್ತು. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಬುಕ್ಲಾಪುರದ ಮೇಲೆ ಬಿಡಲಾಗಿದ್ದು ನಂತರ ಮರವನ್ನು ಕಡಿದು ಹೆದ್ದಾರಿಯನ್ನು ತರವುಗೊಳಿಸಲಾಯ್ತು.

--ಫೋಟೋ: ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿಯಲ್ಲಿ ಭಾರಿ ಗಾತ್ರದ ಮರವೊಂದು ವಿದ್ಯುತ್ ಲೈನ್ ಸೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದರಿರುವ ಮರ.