ಚನ್ನಪಟ್ಟಣ: ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಶ್ರೀಮಂತವಾಗಿದೆ. ನಾಡು-ನುಡಿ-ನೆಲ-ಜಲ- ಭಾಷೆಗೆ ಧಕ್ಕೆಯಾದಾಗ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಭಾವಿಪ ತಾಲೂಕು ಅಧ್ಯಕ್ಷ ಡಿ.ಪುಟ್ಟಸ್ವಾಮಿ ಹೇಳಿದರು.

ಚನ್ನಪಟ್ಟಣ: ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಶ್ರೀಮಂತವಾಗಿದೆ. ನಾಡು-ನುಡಿ-ನೆಲ-ಜಲ- ಭಾಷೆಗೆ ಧಕ್ಕೆಯಾದಾಗ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಭಾವಿಪ ತಾಲೂಕು ಅಧ್ಯಕ್ಷ ಡಿ.ಪುಟ್ಟಸ್ವಾಮಿ ಹೇಳಿದರು.

ನಗರದ ಶ್ರೀ ಕೊಲ್ಲಾಪುರದಮ್ಮ ದೇವಸ್ಥಾನದ ಡಾ.ರಾಜ್‌ಕುಮಾರ್ ಬಯಲುರಂಗ ಮಂದಿರದಲ್ಲಿ ಡಾ.ರಾಜ್ ಕಲಾ ಬಳಗ, ಶ್ರೀ ಕೆಂಗಲ್ ಆಂಜನೇಯ ಸಾಂಸ್ಕೃತಿಕ ಕಲಾ ಟ್ರಸ್ಟ್ ಹಾಗೂ ಗುರುಶ್ರೀ ಫೌಂಡೇಶನ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ೭೦ನೇ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಡಾ.ರಾಜ್ ಕಲಾ ಬಳಗದ ಅಧ್ಯಕ್ಷ ಎಲೇಕೇರಿ ಎಚ್.ಮಂಜುನಾಥ್ ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡ ಭಾಷೆ, ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ತುಂಬ ನೋವಿನ ಸಂಗತಿ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಕನ್ನಡ ಶಾಲೆಗಳು ಉಳಿಯಬೇಕಾದರೆ ಪ್ರತಿಯೊಬ್ಬರೂ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಗೌರವಾಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಚಲನಚಿತ್ರ ನಿರ್ದೇಶಕ ವಾಸು, ಗುರುಶ್ರೀ ಟ್ರಸ್ಟ್ ಅಧ್ಯಕ್ಷ ಪಿ.ಗುರುಮಾದಯ್ಯ ಮಾತನಾಡಿದರು. ನಾಗವಾರ ಶಂಭೂಗೌಡ, ಬಸವರಾಜು, ಮಹೇಶ್‌ಕುಮಾರ್,ಪುಟ್ಟರಾಜು, ಕೂಡ್ಲೂರು ವೆಂಕಟೇಶ್, ಪ್ರೇಮ ಕೆ. ಪೂರ್ಣಿಮಾ, ವಿನುತಾ ಯೋಗಾನಂದ, ಶಿವಲಿಂಗಯ್ಯ, ವಸಂತಕುಮಾರ್, ರಮೇಶ್, ದಯಾನಂದ, ಲಿಂಗರಾಜು, ಕಿರಣ್ ಕುಮಾರ್ ಇತರರಿದ್ದರು.

ಪೊಟೋ೧೨ಸಿಪಿಟಿ೨:

ಚನ್ನಪಟ್ಟಣದ ಶ್ರೀ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದ ಡಾ.ರಾಜ್‌ಕುಮಾರ್ ಬಯಲುರಂಗ ಮಂದಿರದಲ್ಲಿ ಆಯೋಜಿಸಿದ್ದ ೭೦ನೇ ಕನ್ನಡ ರಾಜ್ಯೋತ್ಸವದಲ್ಲಿ ಎಲೇಕೇರಿ ಮಂಜುನಾಥ್ ಮಾತನಾಡಿದರು.