ಸಾರಾಂಶ
ಕೊಪ್ಪಳದ ಸಾಹಿತಿಗಳು ಮತ್ತು ಸದಭಿರುಚಿಯ ಅನೇಕರು ಗೊಂದಲಿಗ್ಯಾ ಕೃತಿ ಬರೆಯಲು ಒತ್ತಾಸೆಯಾಗಿ ನಿಂತರು. ಕನಕಗಿರಿಯ ನನ್ನ ವೃತ್ತಿ ಬದುಕು ನನ್ನನ್ನು ಉತ್ತಮ ಶಿಕ್ಷಕನನ್ನಾಗಿ ಮತ್ತು ಅಧ್ಯಯನಶೀಲನನ್ನಾಗಿ ಮಾಡಿತು. ಎಲ್ಲರ ಪ್ರೇರಣೆ ಒತ್ತಾಸೆ ಮತ್ತು ಸಹಕಾರದಿಂದ ಸಾಹಿತ್ಯ ಸೇವೆ ಮಾಡಿದ್ದೇನೆ ಎಂದು ಸಾಹಿತಿ ಎ.ಎಂ. ಮದರಿ ಹೇಳಿದರು.
ಕೊಪ್ಪಳ:
ಬಡತನ ಮತ್ತು ವಿಳಾಸವಿಲ್ಲದ ಅಲೆಮಾರಿ ಬದುಕು ನನ್ನನ್ನು ವಿದ್ಯಾವಂತನನ್ನಾಗಿ, ಸಾಹಿತಿಯಾಗಿ ಬೆಳೆಯಲು ಪ್ರೇರೇಪಿಸಿತು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಸಾಹಿತಿ ಎ.ಎಂ. ಮದರಿ ಹೇಳಿದರು.ನಗರದಲ್ಲಿ ಮುಜುಮದಾರ ಫೌಂಡೇಶನ್ ವತಿಯಿಂದ ಜರುಗಿದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೊಪ್ಪಳದ ಸಾಹಿತಿಗಳು ಮತ್ತು ಸದಭಿರುಚಿಯ ಅನೇಕರು ಗೊಂದಲಿಗ್ಯಾ ಕೃತಿ ಬರೆಯಲು ಒತ್ತಾಸೆಯಾಗಿ ನಿಂತರು. ಕನಕಗಿರಿಯ ನನ್ನ ವೃತ್ತಿ ಬದುಕು ನನ್ನನ್ನು ಉತ್ತಮ ಶಿಕ್ಷಕನನ್ನಾಗಿ ಮತ್ತು ಅಧ್ಯಯನಶೀಲನನ್ನಾಗಿ ಮಾಡಿತು. ಎಲ್ಲರ ಪ್ರೇರಣೆ ಒತ್ತಾಸೆ ಮತ್ತು ಸಹಕಾರದಿಂದ ಸಾಹಿತ್ಯ ಸೇವೆ ಮಾಡಿದ್ದೇನೆ ಎಂದರು.
ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಆಗಿ ಆಯ್ಕೆಯಾದ ಮಾಲಾ ಬಡಿಗೇರ ಮಾತನಾಡಿ, ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ನನಗೆ ಗಂಡನ ಸಹಕಾರದಿಂದ ಕೃತಿ ರಚನೆಯಲ್ಲಿ ತೊಡಗಿಸಿಕೊಳ್ಳುವಂತಾಯಿತು. ಕೊಪ್ಪಳದ ಸಾಹಿತಿಗಳು ನನ್ನನ್ನು ಬೆಳೆಸಿದ್ದಾರೆ. ಸರ್ವಾಧ್ಯಕ್ಷತೆ ನನಗೆ ಜವಾಬ್ದಾರಿ ಹೆಚ್ಚಿಸಿದೆ. ಎಲ್ಲ ಮಹಿಳೆಯರ ಪರವಾಗಿ ಇದನ್ನು ಒಪ್ಪಿಕೊಂಡಿರುವೆ ಎಂದು ಹೇಳಿದರು.ಶ್ರೀಗವಿಸಿದ್ದೇಶ್ವರ ಪ್ರೌಢಶಾಲೆ ಆಡಳಿತಾಧಿಕಾರಿ ಗವಿಸಿದ್ಧಪ್ಪ ಕೊಪ್ಪಳ ಮಾತನಾಡಿದರು. ಸಮನ್ವಯಕಾರರಾದ ಸಾವಿತ್ರಿ ಮುಜುಮದಾರ ಸನ್ಮಾನಿಸದರು.
ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಡಾ. ಮಹಾಂತೇಶ ಮಲ್ಲನಗೌಡರ, ದಾನಪ್ಪ ಕವಲೂರು, ವಿಜಯಲಕ್ಷ್ಮಿ ಕೊಟಗಿ, ಅಮರದೀಪ್, ಡಾ. ಪಾರ್ವತಿ, ಅಂದಪ್ಪ ಬೆಣಕಲ್, ಹ.ಯ. ಈಟಿ ಅಭಿನಂದನಾ ನುಡಿಗಳನ್ನಾಡಿದರು. ಪತ್ರಕರ್ತ ಶರಣಪ್ಪ ಬಾಚಲಾಪುರ, ವಿಜಯ ಅಮೃತರಾಜ್, ಶಾರದಾ ಶ್ರವಣಸಿಂಗ ರಜಪೂತ, ಡಾ. ಪ್ರವೀಣ ಪಾಟೀಲ್, ಮಲ್ಲಿಕಾರ್ಜುನ ಹಲಗೇರಿ, ಈಶ್ವರ ಹತ್ತಿ, ಬೀರನಾಯಕ, ಶಾಂತಪ್ಪ ಬೆಲ್ಲದ, ರೇಖಾ, ಸರಸ್ವತಿ, ರೇಣುಕಾ, ಸ್ನೇಹಲತಾ ಜೋಶಿ ಇದ್ದರು.