ಭಾನುವಾರ ಮುಂಜಾನೆ ಕಾಡಾನೆಯೊಂದು ಮನೆಯ ಸಮೀಪ ಬರುತ್ತಿದ್ದಂತೆ ಮನೆಯೊಳಗಿದ್ದ ನಾಯಿ ಬೆನ್ನಟ್ಟಲು ಮುಂದಾಗಿದೆ. ಆಗ ರೊಚ್ಚಿಗೆದ್ದ ಕಾಡಾನೆ ಘರ್ಜನೆಯೊಂದಿಗೆ ಹಿಮ್ಮೆಟ್ಟಿಸುತ್ತ ಮನೆಯಂಗಳಕ್ಕೆ ಬಂದಿದ್ದು ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿಯುತ್ತಿದ್ದ ವ್ಯಕ್ತಿಯ ಬಳಿಗೆ ನುಗ್ಗಿದೆ. ಆಗ ಗಾಬರಿಯಿಂದ ಮನೆಯೊಳಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ, ಇದೀಗ ಕಾಡಾನೆ ವೀಡಿಯೊ ಸೆರೆ ಹಿಡಿಯುತ್ತಿದ್ದವರು ತಪ್ಪಿಸಿಕೊಂಡಿರುವ ಭಯಾನಕ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಹರಿದಾಡುತ್ತಿದೆ.

ಕನ್ನಡಪ್ರಭ ವಾರ್ತೆ ಬೇಲೂರುನಾಯಿಯನ್ನು ಹಿಮ್ಮೆಟ್ಟಿಸಲು ಮನೆಯಂಗಳಕ್ಕೆ ಕಾಡಾನೆ ಲಗ್ಗೆ ಹಾಕಿದಾಗ ವಿಡಿಯೋ ಸೆರೆ ಹಿಡಿಯುತ್ತಿದ್ದ ವ್ಯಕ್ತಿಯನ್ನು ನೋಡಿ ಅವನತ್ತ ನುಗ್ಗಿದ್ದು ಸ್ವಲ್ಪದರಲ್ಲೇ ಬಚಾವ್ ಆದ ಘಟನೆ ನಡೆದಿದೆ.ಭಾನುವಾರ ಮುಂಜಾನೆ ಕಾಡಾನೆಯೊಂದು ಮನೆಯ ಸಮೀಪ ಬರುತ್ತಿದ್ದಂತೆ ಮನೆಯೊಳಗಿದ್ದ ನಾಯಿ ಬೆನ್ನಟ್ಟಲು ಮುಂದಾಗಿದೆ. ಆಗ ರೊಚ್ಚಿಗೆದ್ದ ಕಾಡಾನೆ ಘರ್ಜನೆಯೊಂದಿಗೆ ಹಿಮ್ಮೆಟ್ಟಿಸುತ್ತ ಮನೆಯಂಗಳಕ್ಕೆ ಬಂದಿದ್ದು ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿಯುತ್ತಿದ್ದ ವ್ಯಕ್ತಿಯ ಬಳಿಗೆ ನುಗ್ಗಿದೆ. ಆಗ ಗಾಬರಿಯಿಂದ ಮನೆಯೊಳಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ, ಇದೀಗ ಕಾಡಾನೆ ವೀಡಿಯೊ ಸೆರೆ ಹಿಡಿಯುತ್ತಿದ್ದವರು ತಪ್ಪಿಸಿಕೊಂಡಿರುವ ಭಯಾನಕ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಹರಿದಾಡುತ್ತಿದೆ.ಕೆಲವೊಮ್ಮೆ ರೊಚ್ಚಿಗೆದ್ದ ಕಾಡಾನೆಗಳು ಮನುಷ್ಯರನ್ನು ಕಂಡು ದಾಳಿಗೆ ಮುಂದಾಗುತ್ತವೆ. ಆದ್ದರಿಂದ ಅವುಗಳೊಂದಿಗೆ ಚೆಲ್ಲಾಟವಾಡಬಾರದು ಎಂಬ ಅಂಶವನ್ನು ಇಟ್ಟುಕೊಂಡು ಇತ್ತೀಚೆಗೆ ಸಾರ್ವಜನಿಕರು ಕಾಡಾನೆಗಳ ಹತ್ತಿರ ತೆರಳಿ ವಿಡಿಯೋ ಹಾಗೂ ಫೋಟೋಗಳನ್ನು ಸೆರೆಹಿಡಿಯುವ ದುಸ್ಸಾಹಸಕ್ಕೆ ಕೈಹಾಕಬಾರದು ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ಆದರೂ ಕೆಲವರು ಕಾಡು ಪ್ರಾಣಿಗಳಿಂದ ಜೀವಕ್ಕೆ ಆಪತ್ತು ತರುವ ರೀತಿಯಲ್ಲಿ ವರ್ತಿಸುತ್ತಿರುವ ಘಟನೆ ಆಗಿಂದಾಗ್ಗೆ ಬೆಳಕಿಗೆ ಬರುತ್ತಲೇ ಇದೆ.