ಅರೇಹಳ್ಳಿ ಹೋಬಳಿಯ ಕಣಗುಪ್ಪೆಯ ರಾಜಶೆಟ್ಟಿ (65) ರೈತ ಕಾಡಾನೆಯ ದಾಂಧಲೆಗೆ ಬಲಿಯಾಗಿದ್ದಾರೆ. ರಾಜಶೆಟ್ಟಿ ತೋಟಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಜರುಗಿದೆ. ಮೃತ ರಾಜಶೇಖರ್ ಎಂದಿನಂತೆ ಇಂದು ಕೂಡಾ ಮುಂಜಾನೆ ತೋಟದ ಕೆಲಸಕ್ಕೆಂದು ಮನೆಯಿಂದ ತೆರಳಿದ್ದರು. ತೋಟದಲ್ಲಿ ಕೆಲಸ ಮಾಡಲು ಮುಂದಾದಾಗ, ಹಿಂದಿನಿಂದ ಬಂದ ಕಾಡಾನೆಯೊಂದು ದಾಳಿ ನಡೆಸಿದೆ. ದಾಳಿಯ ವೇಳೆ ಕಾಡಾನೆ ತನ್ನ ಸೊಂಡಿಲಿನಿಂದ ಎತ್ತಿ ಬಿಸಾಡಿದೆ. ನಂತರ ಕಾಲಿನಿಂದ ಮನಸ್ಸಿಗೆ ಬಂದಂತೆ ಬೇಕಾಬಿಟ್ಟಿ ತುಳಿದು ಹತ್ಯೆ ಮಾಡಿ ಕಾಫಿ ಗಿಡದ ಬಡ್ಡೆಯೊಳಗೆ ಎಸೆದಿರುವುದಾಗಿ ತಿಳಿದುಬಂದಿದೆ.
ಕನ್ನಡಪ್ರಭ ವಾರ್ತೆ ಬೇಲೂರುಕಾಡಾನೆಯೊಂದು ಕಣಗುಪ್ಪೆ ರೈತ ರಾಜಶೆಟ್ಟಿ ಮೇಲೆ ಮನಬಂದಂತೆ ದಾಳಿ ನಡೆಸಿ ಕಾಲಿನಲ್ಲಿ ಹೊಸಕಿ ಹಾಕಿ ಮೃತದೇಹವನ್ನು ಕಾಫಿ ಗಿಡದ ಒಳಗೆ ಎಸೆದಿರುವ ಘಟನೆ ಭಾನುವಾರ ನಡೆದಿದೆ. ತಾಲೂಕಿನ ಅರೇಹಳ್ಳಿ ಹೋಬಳಿಯ ಕಣಗುಪ್ಪೆಯ ರಾಜಶೆಟ್ಟಿ (65) ರೈತ ಕಾಡಾನೆಯ ದಾಂಧಲೆಗೆ ಬಲಿಯಾಗಿದ್ದಾರೆ. ರಾಜಶೆಟ್ಟಿ ತೋಟಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಜರುಗಿದೆ. ಮೃತ ರಾಜಶೇಖರ್ ಎಂದಿನಂತೆ ಇಂದು ಕೂಡಾ ಮುಂಜಾನೆ ತೋಟದ ಕೆಲಸಕ್ಕೆಂದು ಮನೆಯಿಂದ ತೆರಳಿದ್ದರು. ತೋಟದಲ್ಲಿ ಕೆಲಸ ಮಾಡಲು ಮುಂದಾದಾಗ, ಹಿಂದಿನಿಂದ ಬಂದ ಕಾಡಾನೆಯೊಂದು ದಾಳಿ ನಡೆಸಿದೆ. ದಾಳಿಯ ವೇಳೆ ಕಾಡಾನೆ ತನ್ನ ಸೊಂಡಿಲಿನಿಂದ ಎತ್ತಿ ಬಿಸಾಡಿದೆ. ನಂತರ ಕಾಲಿನಿಂದ ಮನಸ್ಸಿಗೆ ಬಂದಂತೆ ಬೇಕಾಬಿಟ್ಟಿ ತುಳಿದು ಹತ್ಯೆ ಮಾಡಿ ಕಾಫಿ ಗಿಡದ ಬಡ್ಡೆಯೊಳಗೆ ಎಸೆದಿರುವುದಾಗಿ ತಿಳಿದುಬಂದಿದೆ. ಘಟನೆಯ ಬಳಿಕ ರಾಜಶೆಟ್ಟಿಯ ಮೃತದೇಹದ ಸ್ವಲ್ಪ ದೂರದಲ್ಲೇ ಕಾಡಾನೆ ಕೆಲವು ಕಾಲ ನಿಂತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.
ಸುದ್ದಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಬೇಲೂರು ವಲಯ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.ನಿಲ್ಲದ ಆನೆ ಮಾನವ ಸಂಘರ್ಷ :ಈ ಘಟನೆಯಿಂದ ಗ್ರಾಮಸ್ಥರಲ್ಲಿ ಭೀತಿ ವಾತಾವರಣ ನಿರ್ಮಾಣವಾಗಿದೆ. ಇನ್ನು ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಇತ್ತೀಚೆಗೆ ಇದೇ ರೀತಿಯ ಘಟನೆಗಳು ನಡೆದಿವೆ. ಮಾನವ - ವನ್ಯಮೃಗ ಸಂಘರ್ಷವನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ತಾಲೂಕಿನಲ್ಲಿ ಕಾಡಾನೆ ದಾಳಿಯಿಂದ ವ್ಯಕ್ತಿ ಮೃತಪಟ್ಟ ಘಟನೆ ಅತ್ಯಂತ ದುರದೃಷ್ಟಕರ. ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ ಮತ್ತು ಆಲೂರು ಭಾಗಗಳಲ್ಲಿ ಮಾನವ-ಆನೆ ಸಂಘರ್ಷ ದಶಕಗಳಿಂದಲೂ ದೊಡ್ಡ ಸಮಸ್ಯೆಯಾಗಿದೆ.ಆನೆಗಳ ವಾಸಸ್ಥಾನ ಕಾಫಿ ತೋಟ:
ಮಲೆನಾಡು ಅರೆ ಮಲೆನಾಡು ಭಾಗದಲ್ಲಿ ದಟ್ಟವಾದ ಕಾಫಿ ತೋಟಗಳಿರುವುದರಿಂದ ಆನೆಗಳು ಅಲ್ಲಿಯೇ ಬೀಡುಬಿಡುತ್ತವೆ. ಈ ಭಾಗದಲ್ಲಿ ತೊಂದರೆಯಾದರೆ ಸಕಲೇಶಪುರ ಅಥವಾ ಮೂಡಿಗೆರೆಗೆ ತೆರಳುತ್ತವೆ. ನಂತರ ಅಲ್ಲಿಂದ ಓಡಿಸಿದರೆ ಪುನಹ ಬೇಲೂರು ತಾಲೂಕಿಗೆ ಹಿಂದಿರುಗುತ್ತವೆ. ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಇದು ಪ್ರಾಣ ಸಂಕಟವಾಗಿ ಪರಿಣಮಿಸಿದೆ.ಗ್ರಾಮಸ್ಥರಿಂದ ಪ್ರತಿಭಟನೆ :ರೈತ ಸಂಘಟನೆಗಳು ಮತ್ತು ಮೃತರ ಕುಟುಂಬಸ್ಥರು ಪ್ರಮುಖ ರಸ್ತೆಗಳನ್ನು ತಡೆದು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಅಥವಾ ಅರಣ್ಯ ಸಂರಕ್ಷಣಾಧಿಕಾರಿಗಳು ಸ್ಥಳಕ್ಕೆ ಬಂದು ಶಾಶ್ವತ ಪರಿಹಾರದ ಭರವಸೆ ನೀಡುವವರೆಗೂ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಶಾಸಕ ಎಚ್ ಕೆ ಸುರೇಶ್, ಜಿಲ್ಲಾಧಿಕಾರಿ ಲತಾ ಕುಮಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತ, ಎ ಸಿ ಎಫ್ ಸೌರವ್ ಕುಮಾರ್, ಮೋಹನ್ ಕುಮಾರ್ ಇತರರು ಗ್ರಾಮಸ್ಥರನ್ನು ಸಮಾಧಾನಪಡಿಸಿದರು.* ಬಾಕ್ಸ್: 6 ತಿಂಗಳಲ್ಲಿ ಎರಡನೇ ಸಾವು ಕಳೆದ 6 ತಿಂಗಳ ಹಿಂದೆ ಇದೇ ಗ್ರಾಮದಲ್ಲಿ ಕಾಡಾನೆ ದಾಳಿಗೆ ದ್ಯಾವಮ್ಮ ಎಂಬುವರು ಮೃತಪಟ್ಟಿದ್ದರು. ಈ ವೇಳೆ ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕೆಂದು ಅರೆಹಳ್ಳಿ ರಸ್ತೆ ತಡೆ ಚಳವಳಿ ಮಾಡಿ ಪ್ರತಿಭಟನೆ ಮಾಡಲಾಗಿತ್ತು . ಅದಾದ ಬಳಿಕ ರೈತರ ಕಣ್ಣೊರೆಸುವ ನಿಟ್ಟಿನಲ್ಲಿ 4 ಕಾಡಾನೆಗಳನ್ನು ಹಿಡಿಯವು ಮೂಲಕ ಸರ್ಕಾರ ಸುಮ್ಮನಾಗಿತ್ತು. ಆದರೆ ಈ ಭಾಗದಲ್ಲಿ 40ಕ್ಕೂ ಹೆಚ್ಚು ಕಾಡಾನೆಗಳು ಹಿಂಡು ಹಿಂಡಾಗಿ ಸಂಚಾರ ಮಾಡುತ್ತವೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಈ ಪ್ರಕರಣದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದು, ರೈತರ ಬದುಕಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.