ಚಿಕ್ಕಮಗಳೂರುಹೆಣ್ಣಿನಲ್ಲಿ ಅಪಾರ ಶಕ್ತಿಯಿದೆ. ಮನೆ ಮನ ದೀಪ ಬೆಳಗಿಸುವ, ವಿವಿಧ ಕ್ಷೇತ್ರಗಳಲ್ಲಿ ಸಾಧಿಸುವ ಛಲ ಹಾಗೂ ಮನೆ ಮಂದಿಯ ಆರೋಗ್ಯವನ್ನು ಸದೃಢವಾಗಿ ಕಾಪಾಡುವ ಅಗಾಧವಾದ ಕ್ಷಮತೆ ಹೆಣ್ಣಿನಲ್ಲಿದೆ ಎಂದು ನಾದ ಚೈತನ್ಯ ಸಂಸ್ಥಾಪಕಿ ರೇಖಾ ಪ್ರೇಮ್‌ಕುಮಾರ್ ಹೇಳಿದರು.

- ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಹೆಣ್ಣಿನಲ್ಲಿ ಅಪಾರ ಶಕ್ತಿಯಿದೆ. ಮನೆ ಮನ ದೀಪ ಬೆಳಗಿಸುವ, ವಿವಿಧ ಕ್ಷೇತ್ರಗಳಲ್ಲಿ ಸಾಧಿಸುವ ಛಲ ಹಾಗೂ ಮನೆ ಮಂದಿಯ ಆರೋಗ್ಯವನ್ನು ಸದೃಢವಾಗಿ ಕಾಪಾಡುವ ಅಗಾಧವಾದ ಕ್ಷಮತೆ ಹೆಣ್ಣಿನಲ್ಲಿದೆ ಎಂದು ನಾದ ಚೈತನ್ಯ ಸಂಸ್ಥಾಪಕಿ ರೇಖಾ ಪ್ರೇಮ್‌ಕುಮಾರ್ ಹೇಳಿದರು.

ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಕಾಲೇಜು ಶಿಕ್ಷಣ ಇಲಾಖೆ, ರೇಂಜರ್ಸ್‌ ಮತ್ತು ರಾಷ್ಟ್ರೀಯ ಸೇವಾ ಯೋಜನೆಗಳ ಸಹಯೋಗದಲ್ಲಿ ಆಯೋಜಿಸಿದ್ಧ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಮಹಿಳೆಯರು ಕುಟುಂಬದ ಜೊತೆಗೆ ಸಮಾಜದ ಕಣ್ಣು. ಸಮಾಜದ ಪ್ರತಿ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿ ಕೊಂಡು ಪುರುಷರಂತೆ ಸರಿಸಮಾನವಾಗಿ ಬದುಕುತ್ತಿದ್ದಾಳೆ. ವಿವಿಧ ದೃಷ್ಟಿಕೋನದಲ್ಲಿ ಜೀವಿಸುತ್ತಿರುವ ಹೆಣ್ಣಿಗೆ ಸಮಾಜದಲ್ಲಿ ವಿವಿಧ ಅವಕಾಶಗಳಿದ್ದು, ಬುದ್ದಿ ಶಕ್ತಿ ಹಾಗೂ ವಿವೇಕದಿಂದ ಉಪಯೋಗಿ ಸಿಕೊಳ್ಳಬೇಕು ಎಂದು ತಿಳಿಸಿದರು.ವಿದ್ಯಾರ್ಥಿನಿಯರ ವ್ಯಕ್ತಿತ್ವ ವಿಕಸನ ಬಲಿಷ್ಟಗೊಳಿಸಲು ಕಾಲೇಜು ವ್ಯಾಸಂಗ ಪೂರಕ. ಶಿಸ್ತು ಬದ್ಧ ಕಲಿಕೆ, ಕೌಶಲ್ಯಯುತ ಗುಣಗಳನ್ನು ಅಳವಡಿಸಿಕೊಂಡು ಸಾಗಿದರೆ ಬದುಕು ಮುಂಚೂಣಿಗೆ ಕೊಂಡೊಯ್ಯುತ್ತದೆ. ಇತ್ತೀಚೆಗೆ ಮಹಿಳೆ ಆಟೋ ರೀಕ್ಷಾದಿಂದ, ಅಂತರೀಕ್ಷಾದವರೆಗೂ ಪಾದಾರ್ಪಣೆ ಮಾಡಿ ದೊಡ್ಡ ಕ್ರಾಂತಿಯನ್ನೇ ಮೂಡಿಸಿದ್ದಾರೆ ಎಂದರು.ಕಲಿಕೆ ವಯಸ್ಸಿನಲ್ಲಿ ಬುದ್ದಿವಂತಿಕೆ, ಸಂಯಮ, ವಿವೇಕದಿಂದ ಕೂಡಿರಬೇಕು. ಸಾಮಾಜಿಕ ಜಾಲ ತಾಣದಲ್ಲಿ ಪ್ರಪಂಚದ ಆಗು ಹೋಗುಗಳ ವಿಷಯ ಅರಿತುಕೊಳ್ಳಬೇಕೇ ಹೊರತು ಸಮಯ ಕಳೆಯಲು ಬಳಸಬಾರದು. ವಿದ್ಯಾರ್ಜನೆ ಜೊತೆಗೆ ಉದ್ಯಮಿಗಳಾಗಿ, ಉದ್ಯೋಗ ಸೃಷ್ಟಿಸುವ ಕಾಯಕಕ್ಕೆ ಮುಂದಾಗಬೇಕು ಎಂದು ತಿಳಿಸಿದರು.ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಸಂಗತಿ ಬಳಸಿಕೊಂಡು ಜ್ಞಾನ ಸಂಪಾದಿಸಬೇಕು. ಪ್ರತಿನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸ ಹಾಗೂ ರಾಜ್ಯಮಟ್ಟದ ಮುದ್ರಣಗೊಳ್ಳುವ ವಿಶೇಷ ಲೇಖನಗಳ ಅಧ್ಯಯನ ವಿರಬೇಕು. ಅವಕಾಶದ ಬಾಗಿಲು ಎಂಬುದು ಸುಲಭವಾಗಿ ಸಿಗುವುದಿಲ್ಲ. ಅಪಾರ ಜ್ಞಾನದ ಅವಶ್ಯಕತೆಯಿದ್ದು, ಬಾಗಿಲು ತೆರೆದಾಗ ತಯಾರಿರಬೇಕು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಡಾ. ಮೂಡಲಗಿರಿಯ್ಯ, ಸಮಾಜದಲ್ಲಿ ಹೆಣ್ಣಿನ ವ್ಯವಸ್ಥೆ ಕ್ರೌರ್ಯ ಹಾಗೂ ಹಿಂಸಾತ್ಮಕವಾಗಿದೆ. ಆ ನಿಟ್ಟಿನಲ್ಲಿ ಹೆಣ್ಣು ಗಟ್ಟಿಯಾಗಲು ಸಮಗ್ರ ವಿದ್ಯಾ ಭ್ಯಾಸಕ್ಕೆ ಒಳಗಾಗಬೇಕು. ಜ್ಞಾನ ವೃದ್ಧಿಸಿ, ವಿವೇಕ ಹೆಚ್ಚಿಸಿ ಕುಟುಂಬದ ಜೊತೆಗೆ ಸಮಾಜದ ಕಣ್ಣಾಗಬೇಕು ಎಂದು ಹೇಳಿದರು.ಪ್ರಪಂಚ ಹಾಗೂ ಪುರುಷ ಜನಾಂಗದ ಅಭಿವೃದ್ಧಿ ಹೆಣ್ಣಿನ ಅವಶ್ಯಕತೆ ಬಹಳಷ್ಟಿದೆ. ಸಮಾಜಕ್ಕೆ ಹೆಣ್ಣು ಬಲ, ಧೈರ್ಯ ಹಾಗೂ ದಿಕ್ಕಿನಂತೆ. ಕುಟುಂಬದ ಪರಿಕಲ್ಪನೆ ಹೆಣ್ಣಿಂದ ಸಾಧ್ಯ. ಜಗತ್ತಿನಲ್ಲಿ ಹೆಣ್ಣಿಲ್ಲದಿದ್ದರೆ ಏನನ್ನು ಸಾಧಿಸಲಾಗದು. ಪುರುಷರ ಅಹಂನ್ನು ತಗ್ಗಿ ಬಗ್ಗಿಸುವ ಶಕ್ತಿ ಹೆಣ್ಣಿಗಿದೆ. ಪ್ರೀತಿ ಜನನಕ್ಕೂ ಹೆಣ್ಣೆ ಮೂಲ ಎಂಬುದು ಮನಗಾಣಬೇಕು ಎಂದರು.ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥ ಜಿ.ಮಹೇಶ್ವರಪ್ಪ, ವಾಣಿಜ್ಯಶಾಸ್ತ್ರ ಮುಖ್ಯಸ್ಥ ನಟೇಶ್, ಸಿಬ್ಬಂದಿ ಲೋಕೇಗೌಡ, ಸಮಾಜಶಾಸ್ತ್ರ ಮುಖ್ಯಸ್ಥ ಶಿವರಾಜ್, ರಾಜ್ಯಶಾಸ್ತ್ರ ಪ್ರಾಧ್ಯಾಪಕ ಎ.ಸಿ. ಪುಟ್ಟಸ್ವಾಮಿ, ಕಾಲೇಜು ಶಿಕ್ಷಣ ಇಲಾಖೆಯ ಕಚೇರಿ ವ್ಯವಸ್ಥಾಪಕಿ ಹೇಮಮಾಲಿನಿ ಉಪಸ್ಥಿತರಿದ್ದರು. 24 ಕೆಸಿಕೆಎಂ 2ಚಿಕ್ಕಮಗಳೂರಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ಧ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ರೇಖಾ ಪ್ರೇಮ್‌ಕುಮಾರ್ ಉದ್ಘಾಟಿಸಿ ಮಾತನಾಡಿದರು.