ಶಿಗ್ಗಾಂವಿ ತಾಲೂಕಿನ ಕುಂದೂರ ಗ್ರಾಮದಲ್ಲಿ ಗೃಹಲಕ್ಷ್ಮಿ ಹಣದಲ್ಲಿ ಹಸು ಖರೀದಿಸಿದ ಮಹಿಳೆ

| Published : Apr 22 2025, 01:50 AM IST

ಶಿಗ್ಗಾಂವಿ ತಾಲೂಕಿನ ಕುಂದೂರ ಗ್ರಾಮದಲ್ಲಿ ಗೃಹಲಕ್ಷ್ಮಿ ಹಣದಲ್ಲಿ ಹಸು ಖರೀದಿಸಿದ ಮಹಿಳೆ
Share this Article
  • FB
  • TW
  • Linkdin
  • Email

ಸಾರಾಂಶ

ಹಸು ಖರೀದಿಸಿದ ವಿಶಾಲಾಕ್ಷಿ ಅವರು, ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ನಮ್ಮ ಕುಟುಂಬಕ್ಕೆ ಊಟ ನೀಡುತ್ತಿದೆ. ನಮ್ಮ ಕುಟುಂಬದ ನಿರ್ವಹಣೆ ಹಸುವಿನಿಂದಲೇ ಆಗುತ್ತಿದೆ ಎಂದರು.

ಹಾವೇರಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವನ್ನು ಸಂಗ್ರಹಿಸಿ ಮಹಿಳೆಯೊಬ್ಬರು ಹಸುವನ್ನು ಖರೀದಿಸಿ ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುಂದೂರ ಗ್ರಾಮದ ವಿಶಾಲಾಕ್ಷಿ ಶೇಖರಗೌಡ ಹೊಸಮನಿ ಎಂಬ ಮಹಿಳೆ ಗೃಹಲಕ್ಷ್ಮಿ ಯೋಜನೆಯ 18 ಕಂತಿನಲ್ಲಿ ಬಂದ ₹36 ಸಾವಿರ ಹಣವನ್ನು ಕೂಡಿಟ್ಟು ಹಸು ಖರೀದಿಸಿ, ಹೈನುಗಾರಿಕೆ ಮಾಡುವ ಮೂಲಕ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.

ಹಸು ಖರೀದಿಸಿದ ವಿಶಾಲಾಕ್ಷಿ ಅವರು, ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ನಮ್ಮ ಕುಟುಂಬಕ್ಕೆ ಊಟ ನೀಡುತ್ತಿದೆ. ನಮ್ಮ ಕುಟುಂಬದ ನಿರ್ವಹಣೆ ಹಸುವಿನಿಂದಲೇ ಆಗುತ್ತಿದೆ ಎಂದರು.

ಗೃಹಲಕ್ಷ್ಮಿ ಯೋಜನೆ ಎಲ್ಲ ಮಹಿಳೆಯರಿಗೆ ಅನೂಕೂಲವಾಗಿದ್ದು, ಸಿಎಂ ಸಿದ್ದರಾಮಯ್ಯ, ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ಧನ್ಯವಾದನ್ನು ತಿಳಿಸುವ ಮೂಲಕ ಹರ್ಷ ವ್ಯಕ್ತಪಡಿಸಿದರು.ಜಾತ್ರೆ ಪ್ರಯುಕ್ತ ರಕ್ತದಾನ, ಕಬಡ್ಡಿ ಪಂದ್ಯಾವಳಿ

ಶಿಗ್ಗಾಂವಿ: ತಾಲೂಕಿನ ಬನ್ನೂರ ಗ್ರಾಮದಲ್ಲಿ ಏ. ೨೯ರಂದು ಜರುಗಲಿರುವ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ರಕ್ತದಾನ ಶಿಬಿರ ಮತ್ತು ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ ಎಂದು ಧರ್ಮಗೌಡ ಪೊಲೀಸಪಾಟೀಲ ತಿಳಿಸಿದರು.ತಾಲೂಕಿನ ಬನ್ನೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಅಭಿವೃದ್ಧಿ ಸಮಿತಿ ಬನ್ನೂರ ಇವರ ಆಶ್ರಯದಲ್ಲಿ ಏ. ೨೯ರಂದು ಬೆಳಗ್ಗೆ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ನಿವೃತ್ತ ವೈದ್ಯಾಧಿಕಾರಿ ಡಾ. ಹನುಮಂತಪ್ಪ ಪಿ.ಎಚ್., ಹಾವೇರಿಯ ರಕ್ತನಿಧಿ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ, ಅಕ್ಕಿಆಲೂರಿನ ರಕ್ತ ಸೈನಿಕ ಕರಬಸಪ್ಪ ಗೊಂದಿ, ಶಿಗ್ಗಾಂವಿ ಸಾರ್ವಜನಿಕ ಆಸ್ಪತ್ರೆಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಸೌಭಾಗ್ಯ ದೊಡ್ಡಮನಿ ಭಾಗವಹಿಸಲಿದ್ದಾರೆ. ಸಾಯಂಕಾಲ ೬೫ ಕೆಜಿ ಒಳಗಿನ ಯುವಕರಿಗೆ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಜಾತ್ರೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀಕಾಂತಗೌಡ ದುಂಡಿಗೌಡ್ರ, ಶಂಕರಗೌಡ ಪೊಲೀಸಗೌಡ್ರ, ಶಿದ್ದನಗೌಡ ಪೊಲೀಸಗೌಡ್ರ, ಗಂಗನಗೌಡ ಪೊಲೀಸಗೌಡ್ರ, ಬಸಪ್ಪ ನೀಲಪ್ಪ ಕುಲಕರ್ಣಿ, ಚನ್ನವೀರಗೌಡ ಪೊಲೀಸಪಾಟೀಲ, ಗೋಪಾಲಗೌಡ ಹೊನ್ನಗೌಡ್ರ, ಮೇಘರಾಜಗೌಡ ಪೊಲೀಸಗೌಡ್ರ, ತ್ರಿಲೋಕನಗೌಡ ಪಾಟೀಲ, ಶಂಕರಗೌಡ ಪೊಲೀಸಗೌಡ್ರ, ಅಭಿ ಹೊನ್ನಪ್ಪನವರ, ಮುತ್ತಪ್ಪ ಭಜಂತ್ರಿ ಸೇರಿದಂತೆ ಗ್ರಾಮಸ್ಥರು ಇದ್ದರು.