ಪುಸ್ತಕ ಸರಳವಾದ ಪತ್ರಿಕಾ ಭಾಷೆಯ ಶೈಲಿಯಲ್ಲಿ ಪತ್ರಿಕೋದ್ಯಮದ ಅನುಭವಗಳ ಸಾರವಾಗಿ ಹೊರಬಂದಿದೆ. 96 ಬರಹಗಳ ಗುಚ್ಛವೇ ಈ ಪುಸ್ತಕ. ಗಣೇಶ ಅಮೀನಗಡ ಅವರು ಪತ್ರಿಕೋದ್ಯಮ ಪಯಣವನ್ನು ತಮ್ಮ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
‘ಪತ್ರಕರ್ತನ ಅನುಭವಗಳು’ ಸಮಾಜದ ಭಿನ್ನ ವಿಚಾರಗಳ ದರ್ಶನ ಮಾಡಿಸುವ ಕೃತಿ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ನಂಜಯ್ಯ ಹೊಂಗನೂರು ಅಭಿಪ್ರಾಯಪಟ್ಟರು.ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಕವಿತಾ ಪ್ರಕಾಶನ ಸಹಯೋಗದಲ್ಲಿ ಗುರುವಾರ ಬಿಎಂಶ್ರೀ ಸಭಾಂಗಣದಲ್ಲಿ ಏರ್ಪಡಿಸಿದ್ದ ಗಣೇಶ ಅಮೀನಗಡ ಅವರ ‘ಪತ್ರಕರ್ತನ ಅನುಭವಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ. ಪುಸ್ತಕ ಸರಳವಾದ ಪತ್ರಿಕಾ ಭಾಷೆಯ ಶೈಲಿಯಲ್ಲಿ ಪತ್ರಿಕೋದ್ಯಮದ ಅನುಭವಗಳ ಸಾರವಾಗಿ ಹೊರಬಂದಿದೆ. 96 ಬರಹಗಳ ಗುಚ್ಛವೇ ಈ ಪುಸ್ತಕ ಎಂದು ಹೇಳಿದರು.
ಕೃತಿ ಕುರಿತು ಹಿರಿಯ ಪತ್ರಕರ್ತ ಚೀ.ಜ. ರಾಜೀವ್ ಮಾತನಾಡಿ, ಗಣೇಶ ಅಮೀನಗಡ ಅವರು ಪತ್ರಿಕೋದ್ಯಮ ಪಯಣವನ್ನು ತಮ್ಮ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಪ್ರೊ.ಎನ್.ಮಮತಾ ಮಾತನಾಡಿ, ‘ಪತ್ರಕರ್ತನ ಅನುಭವಗಳು’ ಕೃತಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕೈಪಿಡಿಯಾಗಲಿದೆ ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕೃತಿ ಬಿಡುಗಡೆ ಮಾಡಿದರು. ಖ್ಯಾತ ಗಾಯಕ ಎಚ್. ಜನಾರ್ದನ ಹಾಡುಗಳನ್ನು ಪ್ರಸ್ತುತಪಡಿಸಿದರು. ಲೇಖಕ ಗಣೇಶ ಅಮೀನಗಡ ಸ್ವಾಗತಿಸಿ, ವಂದಿಸಿದರು.ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗ, ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳು, ಸಂಶೋಧಕರು, ಸಾಹಿತ್ಯಾಸ್ತಕರು ಇದ್ದರು.ಸರ್ಕಾರ ಕನ್ನಡದ ಹೆಸರಲ್ಲಿ ತುಟಿಗೆ ತುಪ್ಪ ಹಚ್ಚುವುದು ಬಿಡಲಿ: ಮ.ಗು.ಸದಾನಂದಯ್ಯಕನ್ನಡಪ್ರಭ ವಾರ್ತೆ ಮೈಸೂರುಜನರಿಗೆ ಕನ್ನಡ ಹೆಸರಿನಲ್ಲಿ ತುಟಿಗೆ ತುಪ್ಪ ಹಚ್ಚುವುದನ್ನು ಬಿಟ್ಟು ಸರಿಯಾದ ಕೆಲಸ ಕನ್ನಡದ ಬಗ್ಗೆ ಆಗಲಿ ಎಂದು ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಮ.ಗು.ಸದಾನಂದಯ್ಯ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಂದಿನ ವರ್ಷ ವಿಶ್ವ ಕನ್ನಡ ಸಮ್ಮೇಳನ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ. ಕನ್ನಡ ಶಾಸ್ತ್ರೀಯ ಭಾಷೆ ಘೋಷಣೆಯಾಗಿ 23 ವರ್ಷಗಳು ಕಳೆದರೂ ಸ್ವಾಯತ್ತತೆ ದೊರೆಯದೆ ಇರುವುದು ಇವರ ಗಮನಕ್ಕೆ ಬಂದಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.ಕನ್ನಡ ಭಾಷೆಯ ಉಳಿವು ಬೆಳವಣಿಗೆ ಬಗ್ಗೆ ಜೋರಾಗಿ ಘರ್ಜಿಸುವ ಸರ್ಕಾರ, ಕೆಪಿಎಸ್ ಹೆಸರಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದು, ಕನ್ನಡ ಶಾಲೆಗಳ ಭೌಗೋಳಿಕ ಅಭಿವೃದ್ಧಿಪಡಿಸದಿರುವುದು ಮತ್ತು ಕಲಿಕೆಯ ಬಗ್ಗೆ ಶಿಕ್ಷಕರ ನೇಮಕ ಮಾಡದೇ ಇರುವುದು, ಬ್ಯಾಂಕ್ ಮತ್ತು ಇತರ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರೆಯದೇ ಇರುವುದು ಇವುಗಳನ್ನ ಆದ್ಯತೆಯ ಮೇರೆಗೆ ಕಾರ್ಯ ನಿರ್ವಹಿಸುವುದನ್ನು ಬಿಟ್ಟು ಬರೀ ಉತ್ಸವ ಮೆರವಣಿಗಳನ್ನೇ ಮಾಡುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ವಿಷಾದದ ಸಂಗತಿ ಎಂದಿದ್ದಾರೆ.ಕನಿಷ್ಠ ಐದನೇ ತರಗತಿಯವರೆಗೆ ಪ್ರಾದೇಶಿಕ ಭಾಷೆಯಲ್ಲಿಯೇ ಶಿಕ್ಷಣ ನೆಡೆಯಬೇಕೆಂದು ರಾಷ್ಟ್ರೀಯ ಶಿಕ್ಷಣ ನೀತಿಯ ಕಲಂನಲ್ಲಿ ಇದ್ದರೂ ಇದನ್ನು ಅನುಷ್ಠಾನಕ್ಕೆ ತರುವಲ್ಲಿ ಹಿಂದೇಟು ಹಾಕುತ್ತಿರುವುದು ಸರ್ಕಾರದ ನಿಲುವು ಕನ್ನಡದ ಬಗ್ಗೆ ಏನು ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.