ಸಾರಾಂಶ
ಕನ್ನಡಪ್ರಭ ವಾರ್ತೆ, ಉಡುಪಿ
ಅಯೋಧ್ಯೆ ರಾಮಮಂದಿರದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯುತ್ತಿರುವ ಮಂಡಲೋತ್ಸವದಲ್ಲಿ ಸೋಮವಾರ ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದರು.ಶ್ರೀ ಪೇಜಾವರ ಶ್ರೀಗಳು ಮಂಡಲೋತ್ಸವದ ಪ್ರಯುಕ್ತ ನಿತ್ಯ ನಡೆಯುತ್ತಿರುವ ಧಾರ್ಮಿಕ ವಿಧಿವಿಧಾನಗಳನ್ನು ವಿವರಿಸಿ ಸೋಮವಾರ ನಡೆದ ಹೋಮ ಹವನ ಕಲಶಾರಾಧನೆ ಕಲಶಾಭಿಷೇಕದ ರಜತ ಕುಂಭ ಪ್ರಸಾದ ನೀಡಿ ಶುಭ ಹಾರೈಸಿದರು.
ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ , ವಿಹಿಂಪ ಮುಖಂಡ ಗೋಪಾಲ್ ಜಿ, ಶ್ರೀರಾಮ ಮಂದಿರದ ಅರ್ಚಕರು ಉಪಸ್ಥಿತರಿದ್ದರು.-------
ಉಡುಪಿ: ಮನೆಮನೆ ಭಜನೆ ಅಭಿಯಾನಕ್ಕೆ ಚಾಲನೆಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಭಜನಾ ಕಲಾವಿದೆ ಮಾಯಾ ಕಾಮತ್ ಈಶ್ವರನಗರ ಅವರ ನೇತೃತ್ವದಲ್ಲಿ, ಮನೆ ಮನೆ ಭಜನೆ ಎಂಬ ಅಭಿಯಾನಕ್ಕೆ ಭಾನುವಾರ ನಗರದ ಸುಜಾತಾ ಗಣೇಶ್ ಅವರ ಮನೆ ಮಾತೃಶ್ರೀ ನಿಲಯದಲ್ಲಿ ಶಾಸಕ ಯಶ್ಪಾಲ್ ಎ. ಸುವರ್ಣ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಹಿಂದೆ ಎಲ್ಲ ಮನೆಗಳಲ್ಲಿ ಭಜನೆ ನಡೆಯುತಿತ್ತು. ಇಂದಿನ ಯುವ ಜನಾಂಗಕ್ಕೆ ಭಜನೆ ತರಬೇತಿ ನೀಡಿದರೆ ನಮ್ಮ ಸನಾತನ ಧರ್ಮ ಉಳಿಸಿ ಬೆಳಸಲು ಅದು ಸುಲಭ ಮಾರ್ಗವಾಗಲಿದೆ. ನಿತ್ಯ ನಿರಂತರ ಪ್ರತಿ ಮನೆಗಳಲ್ಲಿ ಭಜನೆ ಅಭಿಯಾನ ನಡೆಯಲಿ ಎಂದು ಶುಭಹಾರೈಸಿದರು.ಕರಾವಳಿ ರಕ್ಷಣಾ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶೈಲೇಂದ್ರ ಶೆಟ್ಟಿ, ಶ್ರೀ ಅಯ್ಯಪ್ಪ ಸೇವಾ ಸಮಾಜಂನ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ತಾರಾ ಉಮೇಶ್ ಆಚಾರ್ಯ, ಉಡುಪಿ ಜಿ.ಎಸ್.ಬಿ. ಮಹಿಳಾ ಮಂಡಳಿ ಅಧ್ಯಕ್ಷೆ ಸುಧಾ ಶೆಣೈ, ಈಶ್ವರನಗರದ ಮಹಾಮಾಯ ಭಜನಾಮಂಡಳಿಯ ಮೋಹಿನಿ ಭಟ್ ಮತ್ತಿತರರು ಇದ್ದರು.
ರಾಜ್ಯಶ್ರೀ ಸುಧಾರಾಮ್ ಶೆಟ್ಟಿ ಸ್ವಾಗತಿಸಿದರು, ನಡೆಸಿಕೊಟ್ಟರು. ಸವಿತಾ ಶೆಟ್ಟಿ ಈಶ್ವರನಗರ ನಿರ್ವಹಿಸಿದರು.