ಬೆಳಗಾವಿ : ಪಿಜಿ ವಿದ್ಯಾರ್ಥಿ ಎಂದು ಹೇಳಿ ಬಿಮ್ಸ್ ಆಸ್ಪತ್ರೆಯಲ್ಲಿ ಯುವಕನೊಬ್ಬ ಹುಚ್ಚಾಟ

| N/A | Published : Feb 03 2025, 12:33 AM IST / Updated: Feb 03 2025, 12:09 PM IST

ಬೆಳಗಾವಿ : ಪಿಜಿ ವಿದ್ಯಾರ್ಥಿ ಎಂದು ಹೇಳಿ ಬಿಮ್ಸ್ ಆಸ್ಪತ್ರೆಯಲ್ಲಿ ಯುವಕನೊಬ್ಬ ಹುಚ್ಚಾಟ
Share this Article
  • FB
  • TW
  • Linkdin
  • Email

ಸಾರಾಂಶ

ಪಿಜಿ ವಿದ್ಯಾರ್ಥಿ ಎಂದು ಹೇಳಿ ಬಿಮ್ಸ್ ಆಸ್ಪತ್ರೆಯಲ್ಲಿ ಯುವಕನೊಬ್ಬ ಹುಚ್ಚಾಟ ನಡೆಸಿದ್ದು, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಬೆಳಗಾವಿ : ಪಿಜಿ ವಿದ್ಯಾರ್ಥಿ ಎಂದು ಹೇಳಿ ಬಿಮ್ಸ್ ಆಸ್ಪತ್ರೆಯಲ್ಲಿ ಯುವಕನೊಬ್ಬ ಹುಚ್ಚಾಟ ನಡೆಸಿದ್ದು, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರ ಮೂಲದ ನವಲು ಪಾಟೀಲ್ (28) ಆರೋಪಿ. ವೈದ್ಯಕೀಯ ವಿದ್ಯಾರ್ಥಿ ವೇಷ ಧರಿಸಿದ್ದ ಈತ ಬಿಮ್ಸ್ ಆಸ್ಪತ್ರೆಯ ಕ್ಲಾಸ್ ರೂಂ, ಹೆರಿಗೆ ವಾರ್ಡ್, ತುರ್ತು ಚಿಕಿತ್ಸಾ ವಿಭಾಗದಲ್ಲಿ ಓಡಾಟ ನಡೆಸಿದ್ದಾನೆ. ಬಿಮ್ಸ್ ಕ್ಲಾಸ್‌ ರೂಂನಲ್ಲಿ ಕುಳಿತು ವಿದ್ಯಾರ್ಥಿಗಳಿಗೆ ಆತಂಕ ಸೃಷ್ಟಿಸಿದ ಘಟನೆ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ನರ್ಸಿಂಗ್ ಸ್ಟಾಪ್, ವಿದ್ಯಾರ್ಥಿಗಳ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದು, ಯುವಕನ ವರ್ತನೆಗೆ ಬೇಸತ್ತು ಬಿಮ್ಸ್ ನಿರ್ದೇಶಕರಿಗೆ ನರ್ಸಿಂಗ್ ಸ್ಟಾಪ್‌ನವರು ದೂರು ನೀಡಿದ್ದಾರೆ. ಬಿಮ್ಸ್ ಆಡಳಿತ ಮಂಡಳಿ ವಿಚಾರಣೆಯ ವೇಳೆ ಈತ ನಕಲಿ ಪಿಜಿ ಸ್ಟುಡೆಂಟ್ ಎಂಬುದು ದೃಢವಾಗಿದೆ. ಬಿಮ್ಸ್ ನಿರ್ದೇಶಕ ಡಾ. ಅಶೋಕಕುಮಾರ್ ಶೆಟ್ಟಿ ಸಮ್ಮುಖದಲ್ಲಿ ವಿಚಾರಣೆ ನಡೆಸಿದ ಬಳಿಕ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.