ಪಾರ್ಟಿಗೆ ಹೋಗಿದ್ದ ಯುವಕ ಕೊಲೆ: ಓಬಜ್ಜಿಹಳ್ಳಿ ಬಳಿ ಶವ ಪತ್ತೆ

| Published : May 17 2024, 12:36 AM IST

ಸಾರಾಂಶ

ರಾತ್ರಿ ಪಾರ್ಟಿಗೆಂದು ತೆರಳಿದ್ದ ಯುವಕನೊಬ್ಬನನ್ನು ಚಾಕುವಿನಿಂದ ಬರ್ಬರವಾಗಿ ಇರಿದು, ಹತ್ಯೆ ಮಾಡಿರುವ ಘಟನೆ ದಾವಣಗೆರೆ ತಾಲೂಕಿನ ಓಬಜ್ಜಿಹಳ್ಳಿ ಗ್ರಾಮದ ಹೊರವಲಯದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ದಾವಣಗೆರೆ ನಗರದ ಬೂದಾಳ್ ರಸ್ತೆಯ ವಾಸಿ ಸಂದೀಪ್ (25) ಕೊಲೆಯಾದ ಯುವಕ. ಕಳೆದ ರಾತ್ರಿ ಸ್ನೇಹಿತರು ಪಾರ್ಟಿಗೆಂದು ಕರೆದೊಯ್ದಿದ್ದರು.

ಕನ್ನಡಪ್ರಭ ವಾರ್ತೆ, ದಾವಣಗೆರೆ

ರಾತ್ರಿ ಪಾರ್ಟಿಗೆಂದು ತೆರಳಿದ್ದ ಯುವಕನೊಬ್ಬನನ್ನು ಚಾಕುವಿನಿಂದ ಬರ್ಬರವಾಗಿ ಇರಿದು, ಹತ್ಯೆ ಮಾಡಿರುವ ಘಟನೆ ತಾಲೂಕಿನ ಓಬಜ್ಜಿಹಳ್ಳಿ ಗ್ರಾಮದ ಹೊರವಲಯದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ದಾವಣಗೆರೆ ನಗರದ ಬೂದಾಳ್ ರಸ್ತೆಯ ವಾಸಿ ಸಂದೀಪ್ (25) ಕೊಲೆಯಾದ ಯುವಕ. ಕಳೆದ ರಾತ್ರಿ ಸ್ನೇಹಿತರು ಪಾರ್ಟಿಗೆಂದು ಕರೆದೊಯ್ದಿದ್ದರು. ರಾತ್ರೋರಾತ್ರಿ ಆತನನ್ನು ವಿರೋಧಿ ಗುಂಪಿನವರು ಚಾಕುವಿನಿಂದ ಇರಿದು ಕೊಂದಿದ್ದಾರೆಂದು ಹೇಳಲಾಗುತ್ತಿದೆ. ಸಂದೀಪನನ್ನು ಯಾರು ಕೊಂದರು? ಯಾಕೆ ಕೊಂದಿದ್ದಾರೆಂಬುದು ಸ್ಪಷ್ಟವಾಗಿಲ್ಲ. ಮೃತ ಸಂದೀಪ್ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಆತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಗ್ರಾಮಾಂತರ ವೃತ್ತ ನಿರೀಕ್ಷಕ ಕಿರಣಕುಮಾರ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಕೊಲೆ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್‌ ಘಟನಾ ಸ್ಥಳಕ್ಕೆ ಭೇಟಿ, ಅಧಿಕಾರಿಗಳಿಗೆ ಆರೋಪಿಗಳ ಪತ್ತೆಗಾಗಿ ಸೂಕ್ತ ನಿರ್ದೇಶನ ನೀಡಿದರು.

ಗ್ರಾಮಾಂತರ ಡಿವೈಎಸ್ಪಿ ಪ್ರಶಾಂತ ಸಿದ್ದನಗೌಡರ್‌, ಗ್ರಾಮಾಂತರ ಸಿಪಿಐ ಕಿರಣಕುಮಾರ ಇತರರು ಇದ್ದರು. ಸಂದೀಪ್ ಕೊಲೆಗಾರರ ಪತ್ತೆಗಾಗಿ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- - - -16ಕೆಡಿವಿಜಿ9: ದಾವಣಗೆರೆ ತಾಲೂಕು ಓಬಜ್ಜಿಹಳ್ಳಿ ಬಳಿ ಕಳೆದ ರಾತ್ರಿ ಸಂದೀಪ್ ಕೊಲೆಯಾದ ಸ್ಥಳಕ್ಕೆ ಎಸ್‌ಪಿ ಉಮಾ ಪ್ರಶಾಂತ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. -16ಕೆಡಿವಿಜಿ10: ಓಬಜ್ಜಿಹಳ್ಳಿ ಬಳಿ ಕೊಲೆಯಾಗಿರುವ ಸಂದೀಪ್.