ಸಾರಾಂಶ
ಚನ್ನಪಟ್ಟಣ: ಮಹಾಶಿವರಾತ್ರಿ ಪ್ರಯುಕ್ತ ತಾಲೂಕಿನ ತಗಚಗೆರೆ ಶ್ರೀ ಕೆಗ್ಗೆರೆ ಲಿಂಗೇಶ್ವರಸ್ವಾಮಿ ರಥೋತ್ಸವದಲ್ಲಿ ಯುವತಿಯೊಬ್ಬಳು ಒಳ್ಳೆಯ ವರನಿಗಾಗಿ ಬೇಡಿಕೆ ಇಟ್ಟಿದ್ದು, ತನ್ನ ಇಷ್ಟಾರ್ಥ ಸಿದ್ಧಗಾಗಿ ದೇವರಿಗೆ ಬಾಳೆಹಣ್ಣಿನ ಮೇಲೆ ಕೋರಿಕೆ ಬರೆದು ಸಲ್ಲಿಸಿದ್ದು, ಈ ಸುದ್ದಿ ಬಾರಿ ವೈರಲ್ ಆಗಿದೆ.

ಮಹಾಶಿವರಾತ್ರಿ ಪ್ರಯುಕ್ತ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ಶ್ರೀ ಕೆಗ್ಗೆರೆ ಲಿಂಗೇಶ್ವರಸ್ವಾಮಿ ರಥೋತ್ಸವ ನಡೆಯುತ್ತದೆ. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಜವನ ಹಾಗೂ ತಮ್ಮ ಕೋರಿಕೆಯನ್ನು ಬಾಳೆಹಣ್ಣಿನ ಮೇಲೆ ತಮ್ಮ ಬೇಡಿಕೆ ಬರೆದು ಎಸೆಯುವುದು ಈ ರಥೋತ್ಸವದ ವಿಶೇಷ.ಈ ಬಾರಿಯ ರಥೋತ್ಸವದಲ್ಲಿ ಸಾಕಷ್ಟು ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬಾಳೆಹಣ್ಣಿನ ಮೇಲೆ ತಮ್ಮ ಬೇಡಿಕೆಯನ್ನು ಬರೆದಿದ್ದಾರೆ. ಅದರಲ್ಲಿ ನಮ್ಮ ಮಗನಿಗೆ ಒಳ್ಳೆಯ ಬುದ್ಧಿ ಕೊಡು ಭಗವಂತ, ನಮ್ಮ ಹುಡುಗಿಗೆ ಒಳ್ಳೆಯ ಹುಡುಗಿ ಸಿಗಲಿ ಭಗವಂತ ಎಂಬ ಸಾಕಷ್ಟು ಬೇಡಿಕೆಗಳು ಬಂದಿವೆ.
ಆದರೆ, ಇದೇ ವೇಳೆ ಯುವತಿಯೊಬ್ಬಳು ನನಗೆ ಒಳ್ಳೆಯ ವರ ಸಿಗಲಿ, ಬೇಗ ಮದುವೆಯಾಗಲಿ ಎಂಬ ಬರೆದು ಬಾಳೆಹಣ್ಣನ್ನು ರಥೋತ್ಸವದ ವೇಳೆ ಎಸೆದಿರುವುದು ವಿಶೇಷವೆನಿಸಿದೆ. ಇತ್ತೀಚಿನ ದಿನಗಳಲ್ಲಿ ಪ್ರೇಮ ವಿವಾಹಗಳು ಜಾಸ್ತಿಯಾಗಿದ್ದು, ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ. ಇದಲ್ಲದೇ ಹುಡುಗರಿಗೆ ಹೆಣ್ಣು ಸಿಗದೇ ಸಂಘಗಳನ್ನು ಕಟ್ಟಿಕೊಂಡು ಯಾತ್ರೆ ಹೊರಟಿರುವ ಹೊತ್ತಿನಲ್ಲಿ ಯುವತಿ ಒಳ್ಳೆಯ ವರ ಸಿಗಲಿ ಎಂದು ಭಗವಂತನಲ್ಲಿ ಬೇಡಿಕೆ ಇಟ್ಟಿರುವುದು ಮಾದರಿಯಾಗಿದೆ ಎಂಬುದು ಗ್ರಾಮಸ್ಥರ ಮಾತಾಗಿದೆ. ಪೊಟೋ೧೦ಸಿಪಿಟಿ೧:ಬಾಳೆಹಣ್ಣಿನ ಮೇಲೆ ಒಳ್ಳೆಯ ಹುಡುಗ ಸಿಗಲಿ ಎಂದು ಬರೆದಿರುವ ಯುವತಿ.
ಪೊಟೋ೧೦ಸಿಪಿಟಿ೨: ಮಹಾಶಿವರಾತ್ರಿ ಪ್ರಯುಕ್ತ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ಶ್ರೀ ಕೆಗ್ಗೆರೆ ಲಿಂಗೇಶ್ವರಸ್ವಾಮಿ ರಥೋತ್ಸವ.