ಜಿಲ್ಲೆಯಲ್ಲಿ ಆರ್‌ಟಿಸಿಗೆ ಆಧಾರ್‌: 3.03 ಲಕ್ಷ ಮಾತ್ರ ಜೋಡಣೆ

| Published : Jun 23 2024, 02:11 AM IST

ಜಿಲ್ಲೆಯಲ್ಲಿ ಆರ್‌ಟಿಸಿಗೆ ಆಧಾರ್‌: 3.03 ಲಕ್ಷ ಮಾತ್ರ ಜೋಡಣೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಬ್ಯಾಂಕ್‌ ಖಾತೆ ಜತೆಗೆ ಆಧಾರ ಕಾರ್ಡ್‌ ಜೋಡಣೆ ಕಾರ್ಯಕ್ಕೆ ಕೈ ಹಾಕಿ ಯಶಸ್ವಿಯಾಗಿರುವ ಸರ್ಕಾರ, ಈಗ ಪಹಣಿ (ಆರ್‌ಟಿಸಿ) ಯೊಂದಿಗೆ ಆಧಾರ್‌ ಜೋಡಣೆ ಕಾರ್ಯಕ್ಕೆ ಕೈ ಹಾಕಿದೆ. ಈ ಕೆಲಸ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿದೆ.

8.41 ಲಕ್ಷ ಮಂದಿ ಭೂ ಮಾಲೀಕರು, ಇನ್ನು 5.37 ಲಕ್ಷ ಆರ್‌ಟಿಸಿ ಜೋಡಣೆ ಬಾಕಿ

ಆರ್‌. ತಾರಾನಾಥ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬ್ಯಾಂಕ್‌ ಖಾತೆ ಜತೆಗೆ ಆಧಾರ ಕಾರ್ಡ್‌ ಜೋಡಣೆ ಕಾರ್ಯಕ್ಕೆ ಕೈ ಹಾಕಿ ಯಶಸ್ವಿಯಾಗಿರುವ ಸರ್ಕಾರ, ಈಗ ಪಹಣಿ (ಆರ್‌ಟಿಸಿ) ಯೊಂದಿಗೆ ಆಧಾರ್‌ ಜೋಡಣೆ ಕಾರ್ಯಕ್ಕೆ ಕೈ ಹಾಕಿದೆ. ಈ ಕೆಲಸ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿದೆ.

ಬ್ಯಾಂಕ್‌ಗಳಲ್ಲಿ ಸಾಲ ಕೇಳಲು ಹೋದರೆ ಮೊದಲಿಗೆ ಕೇಳುವುದು ಆಧಾರ್‌ ನಂಬರ್‌. ಕಾರಣ, ಯಾವುದಾದರೂ ಬ್ಯಾಂಕಿನಲ್ಲಿ ಈ ಹಿಂದೆ ಸಾಲ ಪಡೆಯಲಾಗಿದೆಯಾ, ಅದು ಸಕಾಲದಲ್ಲಿ ಮರು ಪಾವತಿ ಆಗಿದೆಯಾ, ಸಿಬಿಲ್‌ ಸ್ಕೋರ್‌ ನೋಡಿ ನಂತರ ಸಾಲ ಕೊಡುವ ಬಗ್ಗೆ ತೀರ್ಮಾನಕ್ಕೆ ಬರಲಾಗುತ್ತದೆ.

ಆರ್‌ಟಿಸಿಯೊಂದಿಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿದರೆ, ಎಲ್ಲೆಲ್ಲಿ ಎಷ್ಟೆಷ್ಟು ಜಮೀನು ಹೊಂದಲಾಗಿದೆ ಎಂಬ ಮಾಹಿತಿ ಪಡೆಯಲು ಇದರಿಂದ ಅನುಕೂಲವಾಗಲಿದೆ. ಜತೆಗೆ ಸಾಲ ಪಡೆದಿರುವುದು ಪಹಣಿಯಲ್ಲಿಯೇ ದಾಖಲಾಗುವುದರಿಂದ ಎಷ್ಟೆಷ್ಟು ಸಾಲ ಪಡೆದುಕೊಂಡಿದ್ದಾರೆಂಬ ಮಾಹಿತಿ ಕೂಡ ಸಿಗಲಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ 8,41,080 ಮಂದಿ ತಮ್ಮ ಹೆಸರಿನಲ್ಲಿ ಜಮೀನು ಹೊಂದಿದ್ದಾರೆ. ಅವರ ಆರ್‌ಟಿಸಿಯೊಂದಿಗೆ ಆಧಾರ್‌ ಲಿಂಕ್‌ ಮಾಡುವ ಪ್ರಕ್ರಿಯೆ ಮುಂದುವರೆದಿದ್ದು ಈವರೆಗೆ 3,03,272 ಜನರ ಪಹಣಿಯೊಂದಿಗೆ ಆಧಾರ್‌ ಲಿಂಕ್‌ ಮಾಡಬೇಕಾಗಿದೆ. ಅಂದರೆ, ಈವರೆಗೆ ಶೇ.44.35 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಇಲ್ಲಿನ 9 ತಾಲೂಕುಗಳ ಪೈಕಿ ತರೀಕೆರೆ, ಕಡೂರು, ಚಿಕ್ಕಮಗಳೂರು ಹಾಗೂ ಕಳಸ ತಾಲೂಕುಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ. ಶೃಂಗೇರಿ, ಕೊಪ್ಪ ಹಾಗೂ ಎನ್‌.ಆರ್‌.ಪುರ ತಾಲೂಕುಗಳಲ್ಲಿ ಸರಾಸರಿ ಶೇ. 56 ರಷ್ಟು ಪ್ರಗತಿ ಸಾಧಿಸಲಾಗಿದೆ.ಭೂ ಪರಿವರ್ತನೆ

ಜಿಲ್ಲೆಯಲ್ಲಿ ಈವರೆಗೆ 22490 ಮಂದಿ ಭೂ ಮಾಲೀಕರು ತಮ್ಮ ಜಾಗವನ್ನು ವಸತಿ, ವಾಣಿಜ್ಯ ಹಾಗೂ ಇತರೆ ಉದ್ದೇಶ ಗಳಿಗೆ ಭೂ ಪರಿವರ್ತನೆ ಮಾಡಿಕೊಂಡಿದ್ದಾರೆ. ಈ ಪೈಕಿ ಚಿಕ್ಕಮಗಳೂರು ತಾಲೂಕು ಮೊದಲನೇ ಸ್ಥಾನದಲ್ಲಿದ್ದರೆ, ಕಡೂರು ಎರಡನೇ ಸ್ಥಾನ, ಕೊಪ್ಪ ಮೂರನೇ ಸ್ಥಾನದಲ್ಲಿದೆ.

ಜಮೀನು ಹೊಂದಿರುವ 47,220 ಮಂದಿ ಮೃತಪಟ್ಟಿರುವುದು ಪರಿಶೀಲನೆ ಸಂದರ್ಭದಲ್ಲಿ ಗಮನಕ್ಕೆ ಬಂದಿದೆ. ಆ ಜಮೀನು ಅವರ ಕುಟುಂಬದವರಿಗೆ ಪೌತಿ ಆಗಬೇಕಾಗಿದೆ. ಆದರೆ, ಈ ಕೆಲಸ ನೆನಗುದಿಗೆ ಬಿದ್ದಿದೆ. ಹಲವು ಕುಟುಂಬ ದವರು ತಮ್ಮ ಹೆಸರಿನಲ್ಲಿ ಪೌತಿ ಮಾಡಿಕೊಳ್ಳಲು ಆಸಕ್ತಿ ತೋರುತ್ತಿಲ್ಲ, ಹಾಗಾಗಿ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ಇಂದಿಗೂ ಪಹಣಿ ಚಾಲ್ತಿಯಲ್ಲಿದೆ.

ಒಟ್ಟಾರೆ ಪಹಣಿ ಜತೆಗೆ ಆಧಾರ್‌ ಲಿಂಕ್‌ ಕಾರ್ಯ ಪೂರ್ಣಗೊಂಡರೆ ಸರ್ಕಾರದ ಕೈಗೆ ನಿಖರವಾದ ಮಾಹಿತಿ ಸಿಗಲಿದೆ.

---- ಬಾಕ್ಸ್‌ -----ತಾಲೂಕುಭೂ ಮಾಲೀಕರುಆಧಾರ್‌- ಆರ್‌ಟಿಸಿ ಜೋಡಣೆ

- - - - - - - - - - - - - - - - - - - -

ಶೃಂಗೇರಿ31654 14548

- - - - - - - - - - - - - - - - - - - -

ಕೊಪ್ಪ 56951 24778

- - - - - - - - - - - - - - - - - - - -

ಎನ್‌.ಆರ್‌.ಪುರ3044614967

- - - - - - - - - - - - - - - - - - - -

ತರೀಕೆರೆ8532131441

- - - - - - - - - - - - - - - - - - - -

ಕಡೂರು26936790361

- - - - - - - - - - - - - - - - - - - -

ಚಿಕ್ಕಮಗಳೂರು18824757427

- - - - - - - - - - - - - - - - - - - -

ಮೂಡಿಗೆರೆ 7249528491

- - - - - - - - - - - - - - - - - - - -

ಅಜ್ಜಂಪುರ9075235687

- - - - - - - - - - - - - - - - - - - -

ಕಳಸ 15847 5572

- - - - - - - - - - - - - - - - - - - -

ಒಟ್ಟು 841080 303272

- - - - - - - - - - - - - - - - - - - -