ಸಂಗೀತ, ಸಾಹಿತ್ಯಕ್ಕೆ ಆಕಾಶವಾಣಿ ಕೊಡುಗೆ ದೊಡ್ಡದು: ಗಣಪತಿ ಭಟ್ ಹಾಸಣಗಿ

| Published : Mar 12 2024, 02:03 AM IST

ಸಂಗೀತ, ಸಾಹಿತ್ಯಕ್ಕೆ ಆಕಾಶವಾಣಿ ಕೊಡುಗೆ ದೊಡ್ಡದು: ಗಣಪತಿ ಭಟ್ ಹಾಸಣಗಿ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡ ಆಕಾಶವಾಣಿಯಿಂದ ಸಾವಿರಾರು ಕಲಾವಿದರು ಬೆಳೆದಿರುವುದು ಚಾರಿತ್ರಿಕ ಸಂಗತಿ. ಕನ್ನಡ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವಲ್ಲಿ ಆಕಾಶವಾಣಿ ಪಾತ್ರ ಯಾರೂ ಮರೆಯಲಾರರು.

ಧಾರವಾಡ:

ನಾಡಿನ ಸಂಗೀತ ಹಾಗೂ ಸಾಹಿತ್ಯ ಪರಂಪರೆಯನ್ನು ಉಳಿಸಿ ಬೆಳೆಸಿದ ಶ್ರೇಯಸ್ಸು ಆಕಾಶವಾಣಿಗೆ ಸಲ್ಲುತ್ತದೆ ಎಂದು ತಾನಸೇನ್ ಸಮ್ಮಾನ್ ಪುರಸ್ಕೃತ ಹಿರಿಯ ಸಂಗೀತ ಕಲಾವಿದ ಗಣಪತಿ ಭಟ್ ಹಾಸಣಗಿ ಹೇಳಿದರು.

ಆಕಾಶವಾಣಿ ತನ್ನ ಅಮೃತ ಮಹೋತ್ಸವ ಸಂದರ್ಭದಲ್ಲಿ ಭಾರತೀಯ ಸಂಗೀತ ವಿದ್ಯಾಲಯದ ಸಹಯೋಗದೊಂದಿಗೆ ಇಲ್ಲಿಯ ಸೃಜನಾ ರಂಗಮಂದಿರದಲ್ಲಿ ಏರ್ಪಡಿಸಿದ್ದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಕಾಶವಾಣಿ ಮೂಲಕ ಸಂಗೀತ, ಸಾಹಿತ್ಯ, ರಂಗಭೂಮಿ ಅತ್ಯುನ್ನತ ಸ್ಥಾನ ಮುಟ್ಟಿದೆ ಎಂದರು.

ಗಣಪತಿ ಭಟ್ ಅವರ ಶಾಸ್ತ್ರೀಯ ಗಾಯನ ಹಾಗೂ ಉಸ್ತಾದ್ ಛೋಟೆ ರಹಮತ್ ಖಾನ್ ಮತ್ತು ಸರ್ಫರಾಜ್ ಖಾನ್ ಅವರ ಸಾರಂಗಿ ಜುಗಲಬಂದಿಯನ್ನು ಒಳಗೊಂಡ ಸಂಗೀತ ಸಂಜೆಯನ್ನು ಉದ್ಘಾಟಿಸಿದ ಹಿರಿಯ ವೈದ್ಯ ಡಾ. ಆನಂದ ಪಾಂಡುರಂಗಿ, ಧಾರವಾಡ ಆಕಾಶವಾಣಿಯಿಂದ ಸಾವಿರಾರು ಕಲಾವಿದರು ಬೆಳೆದಿರುವುದು ಚಾರಿತ್ರಿಕ ಸಂಗತಿ. ಕನ್ನಡ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವಲ್ಲಿ ಆಕಾಶವಾಣಿ ಪಾತ್ರ ಯಾರೂ ಮರೆಯಲಾರರು ಎಂದು ಹೇಳಿದರು.

ಭಾರತೀಯ ಸಂಗೀತ ವಿದ್ಯಾಲಯದ ಅಧ್ಯಕ್ಷರಾದ ವೈದ್ಯೆ ಡಾ. ಸೌಭಾಗ್ಯ ಕುಲಕರ್ಣಿ, ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಡಾ. ಬಸು ಬೇವಿನಗಿಡದ ಮಾತನಾಡಿದರು. ಗಾಯನಕ್ಕೆ ರಾಜೇಂದ್ರ ನಾಕೋಡ, ನಿಸಾರ್ ಅಹಮದ್ ತಬಲಾ ಹಾಗೂ ಸುಧಾಂಶು ಕುಲಕರ್ಣಿ ಅವರು ಹಾರ್ಮೋನಿಯಂ ಸಾಥ್ ನೀಡಿದರು. ಆರಂಭದಲ್ಲಿ ಹಿರಿಯ ಗಾಯಕ ಸದಾಶಿವ ಐಹೊಳಿ ಪ್ರಾರ್ಥಿಸಿದರು. ಕಾರ್ಯಕ್ರಮ ಅಧಿಕಾರಿ ಶರಣಬಸವ ಚೋಳಿನ ಸ್ವಾಗತಿಸಿದರು. ಮಾಯಾ ರಾಮನ್ ನಿರೂಪಿಸಿದರು. ಶಫೀಕ್ ಖಾನ್, ಸಾತಲಿಂಗಪ್ಪ ಕಲ್ಲೂರ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಡಾ. ಎಸ್.ಎಂ. ಶಿವಪ್ರಸಾದ, ಡಾ. ಚೇತನ ನಾಯಕ, ಸಿ.ಯು. ಬೆಳ್ಳಕ್ಕಿ, ಸತೀಶ ಪರ್ವತಿಕರ, ಅಕ್ಕಮಹಾದೇವಿ ಹಿರೇಮಠ, ಬಿ.ಎಸ್. ಮಠ, ರಾಧಾ ದೇಸಾಯಿ, ಶ್ರೀಧರ ಗಸ್ತಿ, ಉಮೇಶ ಮುನವಳ್ಳಿ ಇದ್ದರು.