ಸಾರಾಂಶ
ಪಟ್ಟಣದಲ್ಲಿ ಪಕ್ಷದ ಕಚೇರಿ ಉದ್ಘಾಟಿಸಿ
ಕನ್ನಡಪ್ರಭ ವಾರ್ತೆ, ಅಜ್ಜಂಪುರಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 11 ಕ್ಷೇತ್ರಗಳಲ್ಲೂ ಆಮ್ ಆದ್ಮಿ ಅಭ್ಯರ್ಥಿಗಳನ್ನು ಸೂಚಿಸುವ ಗುರಿ ಹೊಂದಿದ್ದು ಅದಕ್ಕಾಗಿ ಅಜ್ಜಂಪುರದ ಹೃದಯ ಭಾಗದಲ್ಲಿ ಪಕ್ಷದ ಕಚೇರಿ ತೆರೆದಿದ್ದೇವೆ ಎಂದು ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್ ತಿಳಿಸಿದರು.
ಪಟ್ಟಣದಲ್ಲಿ ಆಮ್ ಆದ್ಮಿ ಪಕ್ಷದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿ, ರಾಜ್ಯದ ಮೂರು ತಾಲೂಕುಗಳಲ್ಲಿ ಪಟ್ಟಣ ಪಂಚಾಯತ್ ಚುನಾವಣೆ ನಡೆಯುತ್ತಿದ್ದು ನಮ್ಮ ಪಕ್ಷ ಮೂರು ತಾಲೂಕುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ಕಳೆದ ಹತ್ತು ದಿನಗಳಿಂದ ಸರ್ವೆ ಮಾಡಾಗಿದೆ ಎಂದು ಹೇಳಿದರು.ರಾಜ್ಯ ಕಾರ್ಯದರ್ಶಿ ಗುರುಮೂರ್ತಿ ಮಾತನಾಡಿ ದೆಹಲಿ ಮತ್ತು ಪಂಜಾಬ್ ನಲ್ಲಿ ನಮ್ಮ ಪಕ್ಷದ ಸರ್ಕಾರ ಇದೆ. ನಮ್ಮ ಸರ್ಕಾರ ಉಚಿತ ಶಿಕ್ಷಣ, ಆರೋಗ್ಯ, ಸಾರಿಗೆ ಮತ್ತು ಸ್ವಚ್ಛತೆ ಕೊಡುಗೆ ನೀಡಿದೆ. ಪಕ್ಷಗಳು ನಕಲು ಮಾಡುತ್ತಿವೆ ರಸ್ತೆ ಟೋಲ್ ಗಳಲ್ಲಿ ಹಣ ಲೂಟಿ ಮಾಡುತ್ತಿದ್ದು ಇದನ್ನು ಮನಗಂಡು ಪಂಜಾಬ್ ರಾಜ್ಯದಲ್ಲಿ ನಮ್ಮ ಸರ್ಕಾರ ಉಚಿತ ಟೋಲ್ ಮಾಡಿದೆ ಪಕ್ಷ ಹೆಚ್ಚಿನದಾಗಿ ಯುವಕರಿಗೆ ಆದ್ಯತೆ ನೀಡಲಿದ್ದು ಈ ಬಾರಿ ಅಜ್ಜಂಪುರ ಪಟ್ಟಣದಲ್ಲಿ ಕೇವಲ ಒಂದೇ ಒಂದು ಅಭ್ಯರ್ಥಿ ಗೆದ್ದರೂ ನಾವು ಅಜ್ಜಂಪುರದಲ್ಲಿ ಸಾಮಾನ್ಯ ರೈತರು ಬೆಳೆದ ಉತ್ಪನ್ನಗಳನ್ನು ವ್ಯವಸ್ಥಿತವಾಗಿ ಮಾರಾಟ ಮಾಡಲು ಮಾರ್ಕೆಟ್ ಅಭಿವೃದ್ಧಿಪಡಿಸುತ್ತೇವೆ. ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ವ್ಯವಸ್ಥೆಗೆ ಆದ್ಯತೆ ನೀಡಿ, ಭ್ರಷ್ಟಾಚಾರ ನಿರ್ಮೂಲನೆ ನಮ್ಮ ಪಕ್ಷದ ಗುರಿಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ವಕ್ತಾರ ಅನಿಲ್ ನಾಚಪ್ಪ ಸಂಘಟನಾ ಕಾರ್ಯದರ್ಶಿ ಲೋಹಿತ್ ಮಹಿಳಾ ಸದಸ್ಯರಾದ ದೇವರ ಸನ್ ಹುಷಪ್ಪ ಮೋಹನ್ ಇತರ ಪಕ್ಷದ ಮುಖಂಡರು ಇದ್ದರು.