ಕೇಜ್ರಿವಾಲ್ ಬಂಧನ ಖಂಡಿಸಿ ಆಪ್‌ ಪ್ರತಿಭಟನೆ

| Published : Mar 23 2024, 01:08 AM IST

ಕೇಜ್ರಿವಾಲ್ ಬಂಧನ ಖಂಡಿಸಿ ಆಪ್‌ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಾರಿ ನಿರ್ದೇಶನಾಲಯ ಕೇವಲ ಒಂದು ನೆಪವಾಗಿದೆ. ಮೋದಿ ಸರ್ಕಾರದ ಸರ್ವಾಧಿಕಾರದ ಪರಮಾವಧಿಯಾಗಿದೆ.

ಕಾರವಾರ: ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅರವಿಂದ ಕೇಜ್ರಿವಾಲ್ ಅವರನ್ನು ಕಾನೂನುಬಾಹಿರವಾಗಿ ಬಂಧಿಸಿರುವುದನ್ನು ಖಂಡಿಸಿ ಶುಕ್ರವಾರ ಇಲ್ಲಿನ ನಗರಸಭೆ ಉದ್ಯಾನವನದ ಗಾಂಧಿ ಪ್ರತಿಮೆ ಎದುರು ಆಪ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ದೆಹಲಿಯಲ್ಲಿ ಕೇಜ್ರಿವಾಲ್ ಆಡಳಿತದ ಖಾರ್ಯವೈಖರಿ ನೋಡಿ ಅಸೂಯೆ, ಭಯದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು ಮಾಡಿದ ಹೇಯ ಕೃತ್ಯವಾಗಿದೆ. ಸತತ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಜನಪರ ಆಡಳಿತ ನೀಡುತ್ತಿರುವ ಅರವಿಂದ ಕೇಜ್ರಿವಾಲ್ ಅವರನ್ನು ಕಟ್ಟಿ ಹಾಕುವ ಪೊಳ್ಳು ವಿಧಾನವಾಗಿದೆ. ಒಬ್ಬ ನಿರಪರಾಧಿಯನ್ನು ಅಪರಾಧಿ ಮಾಡಲು ಕೇಂದ್ರ ಸರ್ಕಾರ ಹೊರಟದೆ ಎಂದು ಆರೋಪಿಸಿದರು.

ಜಾರಿ ನಿರ್ದೇಶನಾಲಯ ಕೇವಲ ಒಂದು ನೆಪವಾಗಿದೆ. ಮೋದಿ ಸರ್ಕಾರದ ಸರ್ವಾಧಿಕಾರದ ಪರಮಾವಧಿಯಾಗಿದ್ದು, ಕುರುಡು ದೇಶ ಪ್ರೇಮದ ಹೆಸರಲ್ಲಿ, ಸ್ವಾರ್ಥ ರಾಜಕಾರಣ ಎಂಬುದಿದ್ದರೆ ಇದು ಸಾಕ್ಷಿಯಾಗಿದೆ. ಕೇಜ್ರಿವಾಲ್ ಸರ್ಕಾರವು ಅಭಿವೃದ್ಧಿ ನೀತಿ- ರೀತಿಗಳನ್ನು ಅನುಸರಿಸಿದರೆ, ಅದೇ ಮೋದಿ ಸರ್ಕಾರ ಕೈಲಾಗದವನು ಮೈ ಪರಚಿಕೊಂಡಂತೆ ಅಭಿವೃದ್ಧಿ ಮಾಡುವವರನ್ನೇ ನಿರ್ನಾಮ ಮಾಡಲು ಹೊರಟಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ ಎಂದು ಕಿಡಿಕಾರಿದರು.

ಆಮ್ ಆದ್ಮಿ ಪಕ್ಷದ ಉತ್ತರಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಯೊ ಲೂವಿಸ್, ಜಿಲ್ಲಾ ಕಾರ್ಯದರ್ಶಿ ಗುರುದೀಪ್ ಸಿಂಗ್, ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಅಲ್ತಾಫ್ ಶೇಖ್, ಯಾಕೂಬ್ ಆಲಿ, ಕಿಶೋರ ಸಾವಂತ ಇದ್ದರು.