ಸಾರಾಂಶ
ಹಾವೇರಿ: ಜಿಲ್ಲೆಯ ಬ್ಯಾಂಕುಗಳ ಖಾತೆಗಳಲ್ಲಿನ ಹಕ್ಕು ಪಡೆಯದ ಠೇವಣಿಗಳ ಇತ್ಯರ್ಥಕ್ಕಾಗಿ ಆಪ್ಕಿ ಪೂಂಜಿ, ಆಪ್ಕಾ ಅಧಿಕಾರ್(ನಿಮ್ಮ ಹಣ, ನಿಮ್ಮ ಹಕ್ಕು) ಅಭಿಯಾನವನ್ನು ಹಮ್ಮಿಕೊಳ್ಳುವ ಕುರಿತು ಬ್ಯಾಂಕುಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ನಿರ್ದೇಶನ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತ ಸರ್ಕಾರವು ನಿಮ್ಮ ಹಣ ನಿಮ್ಮ ಹಕ್ಕು ಎಂಬ ಶೀರ್ಷಿಕೆಯ ಸಮಗ್ರ ಅಭಿಯಾನವನ್ನು ಪ್ರಾರಂಭಿಸಿದೆ. ಗ್ರಾಹಕರು ಅವರ ಹಕ್ಕು ಪಡೆಯದ ನಾಗರಿಕ ಮಾಲೀಕರಿಗೆ ಹಿಂದಿರುಗಿಸುವ ಪ್ರಾಥಮಿಕ ಉದ್ದೇಶವನ್ನು ಹೊಂದಿದೆ ಎಂದರು. ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯಿಂದ ಸಂಯೋಜಿಸಲ್ಪಟ್ಟ ಈ ಉಪಕ್ರಮವು ಆರ್‌ಬಿಐ, ಸೆಬಿ ಸೇರಿದಂತೆ ನಿಯಂತ್ರಕ ಸಂಸ್ಥೆಗಳ ಸಹಯೋಗದೊಂದಿಗೆ ಕಳೆದ ಅ.1ರಿಂದ ಆರಂಭಗೊಂಡಿದ್ದು, ಡಿ.31ರ ವರೆಗೆ ಕಾರ್ಯನಿರ್ವಹಿಸುತ್ತದೆ. ಈ ಅಭಿಯಾನವು ವ್ಯಕ್ತಿಗಳು ತಮ್ಮ ಹಕ್ಕು ಪಡೆಯದ ಠೇವಣಿಗಳನ್ನು ಮತ್ತು ಬ್ಯಾಂಕುಗಳು, ವಿಮಾ ಕಂಪನಿಗಳು, ವಿಂಚಣಿ ನಿಧಿಗಳು ಮತ್ತು ಮಾರುಕಟ್ಟೆ ಮಧ್ಯವರ್ತಿಗಳಂತಹ ವಿವಿಧ ಸಂಸ್ಥೆಗಳಿಂದ ಪ್ರಸ್ತುತ ಹೊಂದಿರುವ ಇತರ ನಿಷ್ಕ್ರಿಯ ಹಣಕಾಸು ಸ್ವತ್ತುಗಳನ್ನು ಹಿಂಪಡೆಯಲು ಸಹಾಯ ಮಾಡಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು. ಹಾವೇರಿ ಜಿಲ್ಲೆಯಲ್ಲಿ 1,55,001 ಖಾತೆಗಳಲ್ಲಿ ರು.29.65 ಕೋಟಿ ಮೊತ್ತದ ಠೇವಣಿ ಇದೆ. ಸಾರ್ವಜನಿಕರು ಮತ್ತು ಸಂಸ್ಥೆಗಳು ನಡೆಸುವ ಶಿಬಿರಗಳಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಹಕ್ಕು ಪಡೆಯದ ಹಣಕಾಸು ಸ್ವತ್ತುಗಳನ್ನು ಅವುಗಳ ನಿಜವಾದ ಮಾಲೀಕರಿಗೆ ಹಿಂದಿರುಗಿಸುವುದು ಮತ್ತು ಬ್ಯಾಂಕುಗಳು, ವಿಮಾ ಕಂಪನಿಗಳು ವಿಂಚಣಿ ನಿಧಿಗಳು ಮತ್ತು ಮಾರುಕಟ್ಟೆ ಮಧ್ಯವರ್ತಿಗಳು ಹೊಂದಿರುವ ಹಕ್ಕು ಪಡೆಯದ ಠೇವಣಿಗಳು ಮತ್ತು ಇತರ ನಿಷ್ಕ್ರೀಯ ಹಣಕಾಸು ಸ್ವತ್ತುಗಳನ್ನು ಮರಳಿ ಪಡೆಯಲು ನಾಗರಿಕರಿಗೆ ಸಹಾಯ ಮಾಡುವುದು ಈ ಅಭಿಯಾನದ ಉದ್ದೇಶವಾಗಿದೆ. ಭಾರತ ಸರ್ಕಾರದಿಂದ ಪ್ರಾರಂಭಿಸಲಾದ ಅಭಿಯಾನ, ಹಣಕಾಸು ಸೇವೆಗಳ ಇಲಾಖೆಯಿಂದ ಸಂಯೋಜಿಸಲ್ಪಟ್ಟಿದೆ. ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ, ಸೆಬಿ ಸಹಯೋಗದೊಂದಿಗೆ ಕಾರ್ಯಗತಗೊಳಿಸಲಾಗಿದೆ. ಅಭಿಯಾನ ಕಳೆದ ಅ.1ರಿಂದ ಆರಂಭಗೊಂಡಿದ್ದು, ಡಿ.31ರ ವರೆಗೆ ಜರುಗಲಿದೆ. ಜಿಲ್ಲಾ ಮಟ್ಟದಲ್ಲಿ ಸಮನ್ವಯ ಸಾಧಿಸಲು ಮತ್ತು ಶಿಬಿರಗಳನ್ನು ಬ್ಯಾಂಕ್ ಮತ್ತು ಎಲ್‌ಐಸಿ ಶಾಖೆಗಳಲ್ಲಿ ಅಭಿಯಾನ ಆಯೋಜಿಸಲಾಗಿದೆ. ಸಾರ್ವಜನಿಕರು ಈ ಅಭಿಯಾನದ ಸದುಪಯೊಗ ಪಡಿಸಿಕೊಳ್ಳಬೇಕೆಂದು ಬ್ಯಾಂಕ್ ಆಫ್ ಬರೋಡಾ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ (ಲೀಡ್ ಬ್ಯಾಂಕ್) ಪ್ರಧಾನ ವ್ಯವಸ್ಥಾಪಕ ಪ್ರಭುದೇವ ಎನ್.ಜಿ. ಅವರು ತಿಳಿಸಿದರು.