ಸಾರಾಂಶ
ಮಲೇಶಿಯಾದ ಕೌಲಾಂಪುರದಲ್ಲಿ ಈಚೆಗೆ ನಡೆದ ಗ್ಲೋಬಲ್ ಯೋಗಾ ಕಾನ್ಫರೆನ್ಸ್‌ನಲ್ಲಿ ಬೆಳಗಾವಿ ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಯೋಗ ಮತ್ತು ಪ್ರಕೃತಿ ಚಿಕಿತ್ಸಕರಾದ ಆರತಿ ಸಂಕೇಶ್ವರಿ ಅವರಿಗೆ ಯೋಗ ದೇಶಿಕಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಳಗಾವಿ: ಮಲೇಶಿಯಾದ ಕೌಲಾಂಪುರದಲ್ಲಿ ಈಚೆಗೆ ನಡೆದ ಗ್ಲೋಬಲ್ ಯೋಗಾ ಕಾನ್ಫರೆನ್ಸ್‌ನಲ್ಲಿ ಬೆಳಗಾವಿ ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಯೋಗ ಮತ್ತು ಪ್ರಕೃತಿ ಚಿಕಿತ್ಸಕರಾದ ಆರತಿ ಸಂಕೇಶ್ವರಿ ಅವರಿಗೆ ಯೋಗ ದೇಶಿಕಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ.ಎಂ.ದಯಾನಂದ, ಡಾ.ಎಂ.ವಿ.ಜಾಲಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.