ಆಟಿ ಆಚರಣೆ ಕರಾವಳಿ ಹವಾಗುಣಕ್ಕೆ ಪೂರಕ: ಮಂಜುಳಾ ಪ್ರವೀಣ್‌ ಶೆಟ್ಟಿ

| Published : Jul 30 2025, 12:50 AM IST

ಆಟಿ ಆಚರಣೆ ಕರಾವಳಿ ಹವಾಗುಣಕ್ಕೆ ಪೂರಕ: ಮಂಜುಳಾ ಪ್ರವೀಣ್‌ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ದೇವಾಡಿಗರ ಸಂಘದಿಂದ ಮಂಗಳೂರು ಮಣ್ಣಗುಡ್ಡದಲ್ಲಿ , ತುಳುನಾಡಿನ ಜನಜೀವನದ ಪರಿಚಯವನ್ನು ತಿಳಿ ಹೇಳುವ ಆಟಿ ತಿಂಗಳ ವಿಶೇಷತೆಯನ್ನು ಯುವ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.

ಕರ್ನಾಟಕ ರಾಜ್ಯ ದೇವಾಡಿಗರ ಸಂಘದಿಂದ ‘ಆಟಿಡೊಂಜಿ ದಿನ’

ಕನ್ನಡಪ್ರಭ ವಾರ್ತೆ ಮಂಗಳೂರುಹಿರಿಯರ ಮೂಲ ನಂಬಿಕೆಯಲ್ಲಿರುವ ಸತ್ವ ನಾವು ಅರ್ಥ ಮಾಡಿಕೊಳ್ಳಬೇಕು. ನಂಬಿಕೆಗಳ ಹಿನ್ನೆಲೆ ಅರಿತು ಬಾಳಬೇಕು. ಆಟಿ ತಿಂಗಳಿನ ಪ್ರತಿ ಆಚರಣೆಯೂ ಕರಾವಳಿಯ ಹವಾಗುಣ ಹಾಗೂ ಸಸ್ಯ ಸಂಪತ್ತಿನ ಬಳಕೆಗೆ ಪೂರಕವಾಗಿದೆ ಎಂದು ಸಾಂಸ್ಕೃತಿಕ ಚಿಂತಕಿ ಮಂಜುಳಾ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ದೇವಾಡಿಗರ ಸಂಘದಿಂದ ಮಂಗಳೂರು ಮಣ್ಣಗುಡ್ಡದಲ್ಲಿ ಭಾನುವಾರ, ತುಳುನಾಡಿನ ಜನಜೀವನದ ಪರಿಚಯವನ್ನು ತಿಳಿ ಹೇಳುವ ಆಟಿ ತಿಂಗಳ ವಿಶೇಷತೆಯನ್ನು ಯುವ ತಲೆಮಾರಿಗೆ ತಲುಪಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಯುವ ವಕೀಲ, ಕಂಕನಾಡಿ ಪಡೀಲ್‌ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಲತೀಶ್‌ ಶೆಟ್ಟಿ ಮಾತನಾಡಿ, ಅಳಿವಿನಂಚಿನಲ್ಲಿರುವ ತುಳು ಸಾಂಸ್ಕೃತಿಕ ಪರಂಪರೆ ಉಳಿಸಿ ಯುವ ತಲೆಮಾರಿಗೆ ವರ್ಗಾಯಿಸುವ ಮಹತ್ತರ ಜವಾಬ್ದಾರಿ ನಮ್ಮಲ್ಲಿದೆ ಎಂದರು.ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಅಧ್ಯಕ್ಷ ಅಶೋಕ್ ಮೊಯಿಲಿ ಮಾತನಾಡಿ, ಶತಮಾನೋತ್ಸವದ ಸಂಭ್ರಮದ ಹೊಸ್ತಿಲಲ್ಲಿರುವ ಕರ್ನಾಟಕ ರಾಜ್ಯ ದೇವಾಡಿಗ ಸಂಘವು ಒಗ್ಗಟ್ಟಿನ ಪ್ರತೀಕ ಹಾಗೂ ಪ್ರಗತಿಯ ದೀವಿಗೆಯಾಗಲಿ ಎಂದು ಆಶಿಸಿದರು.

ಪಾವಂಜೆ ದೇವಾಡಿಗ ಸಮಾಜ ಸಂಘದ ಅಧ್ಯಕ್ಷ ಅಣ್ಣಪ್ಪ ದೇವಾಡಿಗ, ಕ.ರಾ.ದೇ. ಸಂ.ಹಿರಿಯಡ್ಕ ಉಪಸಂಘದ ಅಧ್ಯಕ್ಷ ಎಚ್ ರಾಜೇಂದ್ರ ಕುಮಾರ್, ಷಷ್ಠಿ ರಥ ಸಮರ್ಪಣ ಸಮಿತಿ ಪೊಳಲಿಯ ಅಧ್ಯಕ್ಷ ಕೃಷ್ಣಪ್ಪ ದೇವಾಡಿಗ, ಶ್ರೇಷ್ಠ ವಾದ್ಯ ವಾದಕ, ತಯಾರಕ ಪುತ್ತೂರು ರಾಜರತ್ನಂ ದೇವಾಡಿಗ, ಮಂಗಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮಂಗಳೂರಿನ ಮಹಾಪ್ರಬಂಧಕಿ ಹರಿಣಾಕ್ಷಿ ಎಸ್ ರಾವ್, ಕಸ್ತೂರಿ ನಾಗೇಶ್ ಅತ್ತಾವರ, ಪುಷ್ಪ ಚಂದ್ರ ಪಳ್ಳಿ ಮತ್ತಿತರರು ಮಾತನಾಡಿದರು.ಉಪಾಧ್ಯಕ್ಷ ಕರುಣಾಕರ್ ಎಂ.ಎಚ್., ಕೋಶಾಧಿಕಾರಿ ಗೀತಾ ವಿ. ಕಲ್ಯಾಣ್ಪುರ್, ಮಹಿಳಾ ಸಂಘಟನಾ ಅಧ್ಯಕ್ಷೆ ಜ್ಯೋತಿ ಪ್ರವೀಣ್, ಯುವ ಸಂಘಟನಾ ಅಧ್ಯಕ್ಷ ಸುಮಿತ್ ದೇವಾಡಿಗ ಹಾಜರಿದ್ದರು. ವಿವಿಧ ಕ್ಷೇತ್ರಗಳ ಸಾಧಕರಾದ ಸಂತೋಷ್ ಎಸ್ ದೇವಾಡಿಗ ತಲಪಾಡಿ, ಪುರುಷೋತ್ತಮ ದೇವಾಡಿಗ ಕದ್ರಿ, ಕಮಲಾಕ್ಷ ದೇವಾಡಿಗ ವರ್ಕಾಡಿ, ಭವಾನಿ ದೇವಾಡಿಗ ಮಂಗಳಾದೇವಿ, ಗಂಗಾಧರ್ ದೇವಾಡಿಗ ಕದ್ರಿ, ವಿಕ್ರಂ ದೇವಾಡಿಗ ಚಿತ್ರಾಪುರ ಇವರನ್ನು ಸನ್ಮಾನಿಸಲಾಯಿತು.ಪ್ರಧಾನ ಕಾರ್ಯದರ್ಶಿ ವೀಣಾ ಗಣೇಶ್ ಸ್ವಾಗತಿಸಿದರು. ರಕ್ಷಿತ್ ಕೆಂಬಾರ್ ವಂದಿಸಿದರು. ಚಂದ್ರಹಾಸ್ ಕಣ್ವ ತೀರ್ಥ ನಿರೂಪಿಸಿದರು. ಉದಯಕುಮಾರ್ ಕಣ್ವತೀರ್ಥ, ರೋಹಿತಾಾಕ್ಷ ಮರೋಳಿ, ಸತೀಶ್ ಡಿ ಪಡೀಲ್, ಅವಿನಾಶ್, ಅಭಿಜಿತ್, ತಿಲಕ್, ಜ್ಯೋತಿ ಸುನಿಲ್, ಮಮತಾ ಪದ್ಮನಾಭ ದೇವಾಡಿಗ, ಉಮಾ ರವಿರಾಜ್ ಮತ್ತಿತರರು ಸಹಕರಿಸಿದರು.ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನೆರವೇರಿತು.ತುಳುನಾಡಿನ ಆಟಿ ತಿಂಗಳ ವಿಶೇಷ ಖಾದ್ಯ ತಿನಿಸುಗಳ ಸ್ಪರ್ಧೆ ಹಾಗೂ ವೈಯಕ್ತಿಕವಾಗಿ ಖಾದ್ಯ ವೈವಿಧ್ಯಗಳನ್ನು ತಂದವರಿಗೆ ಬಹುಮಾನ ನೀಡಲಾಯಿತು. ರಸಪ್ರಶ್ನೆ, ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.