ಸಾರಾಂಶ
ಪ್ರತಿಯೊಬ್ಬರು ಪ್ಲಾಸ್ಟಿಕ್ ತ್ಯಜಿಸಬೇಕು ಹಾಗೂ ಪರಿಸರ ಸ್ನೇಹಿ ವಸ್ತುಗಳನ್ನು ಉಪಯೋಗಿಸಿಬೇಕು. ಪರಿಸರ ಚೆನ್ನಾಗಿದ್ದರೆ ನಾವು ಉತ್ತಮ ಆಮ್ಲಜನಕ ಪಡೆದು ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಮನೆ ಅಂಗಳ, ಹಿತ್ತಲಿನಲ್ಲಿ ಹಾಗೂ ಹೊಲ ಗದ್ದೆಗಳಲ್ಲಿ ಹೆಚ್ಚು ಗಿಡಗಳನ್ನು ನೆಟ್ಟಿ ಮರವನ್ನು ಬೆಳೆಸುವುದು ಉತ್ತಮ.
ಕನ್ನಡಪ್ರಭ ವಾರ್ತೆ ಹಲಗೂರು
ಪರಿಸರ ಹಾಗೂ ಮನುಷ್ಯನ ಆರೋಗ್ಯಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ತ್ಯಜಿಸಬೇಕು ಎಂದು ಕರ್ನಾಟಕ ಪಬ್ಲಿಕ್ ಶಾಲೆ ಶಿಕ್ಷಕ ಎನ್.ಎಂ.ಪುಟ್ಟಸ್ವಾಮಿ ತಿಳಿಸಿದರು.ಶಾಲಾ ಆವರಣದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಗಿಡಕ್ಕೆ ನೀರು ಹಾಕುವ ಮೂಲಕ ಪರಿಸರ ದಿನಾಚರಣೆ ಚಾಲನೆ ನೀಡಿ ಮಾತನಾಡಿ, ಪರಿಸರ ಮನುಷ್ಯನಿಗೆ ತುಂಬಾ ಅವಶ್ಯಕ. ಆದರೆ, ಮಾನವನ ಕ್ರೌರ್ಯದಿಂದ ಪರಿಸರ ನಾಶವಾಗಿ ತಮ್ಮ ವಿನಾಶಕ್ಕೆ ದಾರಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಯೊಬ್ಬರು ಪ್ಲಾಸ್ಟಿಕ್ ತ್ಯಜಿಸಬೇಕು ಹಾಗೂ ಪರಿಸರ ಸ್ನೇಹಿ ವಸ್ತುಗಳನ್ನು ಉಪಯೋಗಿಸಿಬೇಕು. ಪರಿಸರ ಚೆನ್ನಾಗಿದ್ದರೆ ನಾವು ಉತ್ತಮ ಆಮ್ಲಜನಕ ಪಡೆದು ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಮನೆ ಅಂಗಳ, ಹಿತ್ತಲಿನಲ್ಲಿ ಹಾಗೂ ಹೊಲ ಗದ್ದೆಗಳಲ್ಲಿ ಹೆಚ್ಚು ಗಿಡಗಳನ್ನು ನೆಟ್ಟಿ ಮರವನ್ನು ಬೆಳೆಸುವುದು ಉತ್ತಮ ಎಂದು ಸಲಹೆ ನೀಡಿದರು.ಕಳೆದ ಸಾಲಿನಲ್ಲಿ ನಾವು ವೃಕ್ಷಾರೋಪ ಕಾರ್ಯಕ್ರಮ ರೂಪಿಸಿ ಬೀಜದುಂಡೆಗಳನ್ನು ಮಾಡಿ ಜೂನ್ ಮತ್ತು ಜುಲೈ ತಿಂಗಳ ಮಳೆಗಾಲದಲ್ಲಿ ಬಸವನ ಬೆಟ್ಟದಲ್ಲಿ 2 ಲಕ್ಷಕ್ಕೂ ಹೆಚ್ಚು ಹಾಕಿದ್ದೆವು. ಈಗ ಗಿಡಗಳು ಬೆಳೆದಿವೆ. ಕಾಡು ದಟ್ಟವಾಗಿ ಬೆಳೆದರೆ ಉತ್ತಮ ಆಮ್ಲಜನಕ ಮುಂದಿನ ಪೀಳಿಗೆಗೂ ಸಹ ಚೆನ್ನಾಗಿ ದೊರಕುತ್ತದೆ ಎಂದರು.
ಪರಿಸರ ದಿನಾಚರಣೆಯನ್ನು ವರ್ಷಕ್ಕೊಮ್ಮೆ ಮಾಡುವುದಕ್ಕಿಂತ ದಿನ ನಿತ್ಯ ಪರಿಸರದ ಬಗ್ಗೆ ಜಾಗೃತಿ ವಹಿಸಿ ಗಿಡಗಳನ್ನು ಬೆಳೆಸಿ ಮರವನ್ನಾಗಿ ಮಾಡಿದರೆ ಮಾತ್ರ ಅದಕ್ಕೆ ಒಂದು ಅರ್ಥ ಬರುತ್ತದೆ. ಈಗಿನಿಂದಲೇ ವಿದ್ಯಾರ್ಥಿಗಳು ಪರಿಸರ ಉಳಿಸಿ ಬೆಳೆಸಲು ಸಂಕಲ್ಪ ಮಾಡಬೇಕು ಎಂದರು.ಈ ವೇಳೆ ಉಪ ಪ್ರಾಂಶುಪಾಲರಾದ ಅನುರಾಧ, ಶಿಕ್ಷಕರಾದ ಬಿ.ಕೆ. ಕರಿಯಪ್ಪ, ಎಸ್. ತ್ಯಾಗರಾಜ್, ಎಸ್. ಕಿರಣ್ ಕುಮಾರ್, ರೇಷ್ಮಾ ಶಶಿಧರ್, ಗುಲ್ನಾಜ್ ಪರ್ವೀನ್, ದುಶ್ಯಂತ್ ಸೇರಿದಂತೆ ಇತರರು ಇದ್ದರು.