ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡಲು ಸರಕು ಸಾಗಾಣಿಕೆಗೆ ಎಲೆಕ್ಟ್ರಿಕ್ ವಾಹನ ಬಳಸುತ್ತಿರುವ ಎಬಿಬಿ ಇಂಡಿಯಾ

| Published : Apr 26 2025, 12:45 AM IST

ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡಲು ಸರಕು ಸಾಗಾಣಿಕೆಗೆ ಎಲೆಕ್ಟ್ರಿಕ್ ವಾಹನ ಬಳಸುತ್ತಿರುವ ಎಬಿಬಿ ಇಂಡಿಯಾ
Share this Article
  • FB
  • TW
  • Linkdin
  • Email

ಸಾರಾಂಶ

ಎಬಿಬಿ ಇಂಡಿಯಾ ಸಂಸ್ಥೆಯು ತನ್ನ ನೆಲಮಂಗಲದಲ್ಲಿನ ಸ್ಮಾರ್ಟ್ ಪವರ್ ಕಾರ್ಖಾನೆ ಆವರಣದಲ್ಲಿ ಮತ್ತು ಹಂಚಿಪುರದ ವಿತರಣಾ ಕೇಂದ್ರದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಆರಂಭಿಸಿದೆ.

ಕನ್ನಡಪ್ರಭವಾರ್ತೆ ನೆಲಮಂಗಲ

ಪರಿಸರಕ್ಕೆ ಇಂಗಾಲ ಸೇರುವುದನ್ನು ಕಡಿಮೆ ಮಾಡಲು ಎಬಿಬಿ ಇಂಡಿಯಾ ಸಂಸ್ಥೆಯು ಇದೀಗ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಪ್ರಸ್ತುತ ಎಬಿಬಿ ಇಂಡಿಯಾ ಸಂಸ್ಥೆಯು ನಗರದೊಳಗಿನ ವಾಣಿಜ್ಯ ಸರಕು ಸಾಗಾಣಿಕಾ ವಿಭಾಗಕ್ಕೆ ಎಲೆಕ್ಟ್ರಿಕ್ ವಾಹನಗಳನ್ನು ನಿಯೋಜಿಸಿದೆ. ಈ ಯೋಜನೆಯನ್ನು ನೆಲಮಂಗಲದಲ್ಲಿನ ಸ್ಮಾರ್ಟ್ ಪವರ್ ಕಾರ್ಖಾನೆ ಆವರಣದಲ್ಲಿ ಮತ್ತು ಹಂಚಿಪುರದ ವಿತರಣಾ ಕೇಂದ್ರದಲ್ಲಿ ಅಧಿಕೃತವಾಗಿ ಆರಂಭಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಇಎಲ್ ಕಮರ್ಷಿಯಲ್ ಲೀಡ್ ಕಿರಣ್ ದತ್, ಎಂಯು ಮ್ಯಾನೇಜರ್ ಸಾಜು ಎಸ್ಆರ್, ಕ್ಲಸ್ಟರ್ ಮ್ಯಾನೇಜರ್ ಜೋತಿ ಪ್ರಕಾಶ್, ಇ ಎಲ್ ಎಸ್ ಪಿ ಹಬ್ ಮ್ಯಾನೇಜರ್ ಸೆರ್ಜಿಯೋ ಸಿಲ್ವೆಸ್ಟ್ರಿ, ಕಮರ್ಷಿಯಲ್ ಆಪರೇಷನ್ಸ್ ಮ್ಯಾನೇಜರ್ ಸೆರ್ಜಿಯೋ ಬಟ್ಟಿಚೆ ಮತ್ತು ಕಂದ ಡಿಬಿ ಮುಂತಾದ ಪ್ರಮುಖ ನಾಯಕರು ಉಪಸ್ಥಿತರಿದ್ದರು.ಇದೇ ವೇಳೆ, ಪೀಣ್ಯದಲ್ಲಿ ಎಬಿಬಿ ಇಂಡಿಯಾ ಸಂಸ್ಥೆಯು ತನ್ನ ಆಂತರಿಕ ಸರಕು ಸಾಗಾಣಿಕೆಗಾಗಿ ಮೊದಲ ಎಲೆಕ್ಟ್ರಿಕ್ ಟ್ರಕ್ ಅನ್ನು ಬಳಸಲಾರಂಭಿಸಿದ್ದು, ಒಂದು ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ. ಇದರ ಉದ್ಘಾಟನಾ ಸಂದರ್ಭದಲ್ಲಿ ಎಬಿಬಿ ಡ್ರೈವ್ ಪ್ರಾಡಕ್ಟ್ಸ್ ನ ಪ್ರೆಸಿಡೆಂಟ್ ಟುಯೊಮೊ ಹೊಯ್ಸ್ನಿಯೆಮಿ ಮತ್ತು ಲೋಕಲ್ ಡಿವಿಷನ್ ಮ್ಯಾನೇಜರ್ ಎಆರ್ ಮಧುಸೂದನ್ ಉಪಸ್ಥಿತರಿದ್ದರು.ಸರಕು ಸಾಗಾಣಿಕಾ ಕಾರ್ಯಾಚರಣೆಗಳಲ್ಲಿ ಇವಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಎಬಿಬಿ ಇಂಡಿಯಾ ಸಂಸ್ಥೆಯು ಸ್ಕೋಪ್-3 ಇಂಗಾಲ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಈ ಬದಲಾವಣೆಯು ಕಡಿಮೆ ಇಂಗಾಲದ, ಸುಸ್ಥಿರ ಸಮಾಜವನ್ನು ಸೃಷ್ಟಿಸುವ ಕಂಪನಿಯ ವಿಶಾಲ ಉದ್ದೇಶಕ್ಕೆ ಪೂರಕವಾಗಿ ಮೂಡಿ ಬಂದಿದೆ ಮತ್ತು ಪರಿಸರ ಸಂರಕ್ಷಣೆಗೆ ಎಬಿಬಿ ಸಂಸ್ಥೆಯ ನಿರಂತರ ಬದ್ಧತೆಯನ್ನು ಸಾರಿದೆ.