ಅಬ್ಬೆತುಮಕೂರು ಭಕ್ತರ ಶ್ರದ್ಧಾಕೇಂದ್ರ: ನ್ಯಾ. ಪಾಟೀಲ್

| Published : Mar 20 2024, 01:17 AM IST

ಅಬ್ಬೆತುಮಕೂರು ಭಕ್ತರ ಶ್ರದ್ಧಾಕೇಂದ್ರ: ನ್ಯಾ. ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕ್ರತಿಕ ಜತೆಗೆ ಶೈಕ್ಷಣಿಕವಾಗಿಯೂ ಅಬ್ಬೆತುಮಕೂರು ಸಿದ್ಧಸಂಸ್ಥಾನ ಮಠ ತನ್ನದೇ ಆದ ಖ್ಯಾತಿಯಿಂದ ಈ ನಾಡಿನಲ್ಲಿ ಅನೇಕ ಭಕ್ತರ ಶ್ರದ್ಧಾಕೇಂದ್ರವಾಗಿದೆ ಎಂದು ಹಿರಿಯ ನ್ಯಾಯವಾದಿ ಎಸ್.ಬಿ. ಪಾಟಿಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕ್ರತಿಕ ಜತೆಗೆ ಶೈಕ್ಷಣಿಕವಾಗಿಯೂ ಅಬ್ಬೆತುಮಕೂರು ಸಿದ್ಧಸಂಸ್ಥಾನ ಮಠ ತನ್ನದೇ ಆದ ಖ್ಯಾತಿಯಿಂದ ಈ ನಾಡಿನಲ್ಲಿ ಅನೇಕ ಭಕ್ತರ ಶ್ರದ್ಧಾಕೇಂದ್ರವಾಗಿದೆ ಎಂದು ಹಿರಿಯ ನ್ಯಾಯವಾದಿ ಎಸ್.ಬಿ. ಪಾಟಿಲ್ ಹೇಳಿದರು.

ಸಮೀಪದ ಅಬ್ಬೆತುಮಕೂರಿನಲ್ಲಿ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವದ ನಿಮಿತ್ತ ಮೂರನೇ ದಿನದ ಕಾರ್ಯಕ್ರಮದಲ್ಲಿ ನಡೆದ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಬ್ಬೆತುಮಕೂರಿನ ವಿಶ್ವಾರಾಧ್ಯರ ಸಿದ್ದ ಸಂಸ್ಥಾನ ಮಠ ಪೀಠಾಧಿಪತಿಗಳ ಸಂಕಲ್ಪ ಶಕ್ತಿಯಿಂದ ಪ್ರವರ್ಧಮಾನಗೊಳ್ಳುತ್ತಿದೆ. ಡಾ. ಗಂಗಾಧರ ಸ್ವಾಮಿಗಳ ನೇತೃತ್ವದಲ್ಲಿ ಅಲ್ಪ ಅವಧಿಯಲ್ಲಿಯೇ ಕಲ್ಪತರುವಿನಂತೆ ಶ್ರೀಮಠ ಬೆಳೆದು ನಿಂತಿದೆ ಎಂದರು.

ನ್ಯಾಯವಾದಿ ಅನಂತರೆಡ್ಡಿ ಗುರಸುಣಗಿ ಮಾತನಾಡಿ, ನಾಟಕ ಸಾಮಾಜಿಕ ಪರಿವರ್ತನೆಗೆ ಕಾರಣಿಭೂತವಾಗುತ್ತದೆ. ರಂಗ ಕಲಾವಿದರು ತಮ್ಮ ನಟನೆಯ ಮೂಲಕ ಪಾತ್ರಕ್ಕೆ ಜೀವ ತುಂಬುವುದರ ಜತೆಗೆ ಜನತೆಗೆ ಉತ್ತಮವಾದ ಸಂದೇಶವನ್ನು ನೀಡುತ್ತಾರೆ. ಹೀಗಾಗಿ ನಾಟಕ ಜನರ ಬದುಕಿನ ಬದಲಾವಣೆಗೆ ಕಾರಣವಾಗುತ್ತದೆ ಎಂದರು.

ನೋಟರಿ ಎಸ್.ಬಿ. ನಾಯಕ ಮಾತನಾಡಿ, ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಸಮಾಜ ನಿರ್ಮಾಣದಲ್ಲಿ ರಂಗಭೂಮಿಯ ಪಾತ್ರ ಅತ್ಯಂತ ಮುಖ್ಯವಾದದು. ಅದಕ್ಕಾಗಿ ರಂಗಭೂಮಿ ಕಲಾವಿದರು ಅಭಿನಯಿಸುವ ನಾಟಕಗಳನ್ನು ತಪ್ಪದೇ ನೋಡಬೇಕೆಂದು ತಿಳಿಸಿದರು.

ಪೀಠಾಧಿಪತಿ ಡಾ. ಗಂಗಾಧರ ಸ್ವಾಮಿಗಳು, ಡಾ. ಸುಭಾಶ್ಚಂದ್ರ ಕೌಲಗಿ ಇದ್ದರು. ನಂತರ ಸಾಣೆಹಳ್ಳಿಯ ಶಿವಸಂಚಾರಿ ಕಲಾ ತಂಡದಿಂದ ಜತೆಗಿರುವನು ಚಂದಿರ ಎಂಬ ನಾಟಕ ಪ್ರದರ್ಶನಗೊಂಡಿತು.