ಅಬ್ಬೆತುಮಕೂರು ಸಿದ್ಧಿಪುರುಷ ವಿಶ್ವಾರಾಧ್ಯರ ರಥೋತ್ಸವ

| Published : Mar 15 2024, 01:18 AM IST

ಅಬ್ಬೆತುಮಕೂರು ಸಿದ್ಧಿಪುರುಷ ವಿಶ್ವಾರಾಧ್ಯರ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ಧಿ ಪುರುಷ ವಿಶ್ವಾರಾಧ್ಯರ ರಥೋತ್ಸವ ಶುಕ್ರವಾರ ಸಂಜೆ 6:30ಕ್ಕೆ ಸಡಗರದಿಂದ ನಡೆಯಲಿದೆ

ಯಾದಗಿರಿ: ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ಧಿ ಪುರುಷ ವಿಶ್ವಾರಾಧ್ಯರ ರಥೋತ್ಸವ ಶುಕ್ರವಾರ ಸಂಜೆ 6:30ಕ್ಕೆ ಸಡಗರದಿಂದ ನಡೆಯಲಿದೆ ಎಂದು ಮಠದ ವಕ್ತಾರ ಡಾ.ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಸೂರ್ಯೋದಯವಾಗುತ್ತಲೇ ವಿಶ್ವರಾಧ್ಯರ ಕರ್ತೃ ಗದ್ದುಗೆಗೆ ಗೋರಟಾ ಸಂಗೀತ ಬಳಗದವರಿಂದ ವಿಶೇಷ ರುದ್ರಾಭಿಷೇಕ ಜರುಗುವುದು. ನಂತರ ಹನ್ನೊಂದು ದಿವಸಗಳಿಂದ ಸಾಗಿಬಂದ ವಿಶ್ವಾರಾಧ್ಯ ಪುರಾಣ, ಪಲ್ಲಕ್ಕಿ ಉತ್ಸವದ ಮೆರವಣಿಗೆ ಮಂಗಲ ವಾದ್ಯಗಳೊಂದಿಗೆ ಪುರವಂತರ ಸೇವೆ ಸಮೇತ ಗ್ರಾಮದಲ್ಲಿ ನಡೆಯುವುದು. ಪ್ರವಚನಕಾರರಾದ ಅಮರೇಶ್ವರ ಯರಡೋಣಿ ಶಾಸ್ತ್ರಿಗಳು ಅವರು ಪೀಠಾಧಿಪತಿಗಳಾದ ಡಾ.ಗಂಗಾಧರ ಮಹಾಸ್ವಾಮಿಗಳ ನೇತೃತ್ವದಲ್ಲಿ ವಿಶ್ವಾರಾಧ್ಯರ ಪುರಾಣವನ್ನು ಮಂಗಲಗೊಳಿಸುವರು.

ತರುವಾಯ ಸ್ವಾಮಿಗಳು ತೇರಿಗೆ ವಿಶೇಷ ಪೂಜೆಯನ್ನು ನೆರವೇರಿಸಿ, ಕಳಸವನ್ನು ಆರೋಹಣ ಮಾಡುವರು. ಸಂಜೆ 6:30ಕ್ಕೆ ವಿಶ್ವರಾಧ್ಯರ ರಥೋತ್ಸವ ಜರುಗುವುದು. ನಂತರ ರಾತ್ರಿ 8ಕ್ಕೆ ಮಾನವಧರ್ಮ ಸಮಾವೇಶ ಜರುಗುವುದು.

ಸ್ವಾಮೀಜಿಗಳ ದಂಡು: ಕಾಶಿ ಪೀಠದ ಜಗದ್ಗುರುಗಳಾದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಬೆಂಗಳೂರು ವಿಭೂತಿ ಡಾ.ಮಹಾಂತಲಿಂಗಾ ಶಿವಾಚಾರ್ಯರು, ಡಾ.ಶಿವಾನಂದ ಮಹಾಸ್ವಾಮಿಗಳು ಸೊನ್ನ, ಶಹಾಪೂರ ಕುಂಬಾರಗೇರಿ ಹಿರೇಮಠದ ಸೂಗುರೇಶ್ವರ ಶಿವಾಚಾರ್ಯರು, ಸಿದ್ಧರಾಮಪುರದ ಚಿದಾನಂದ ತಾತನವರು, ಸೇಡಂನ ಸದಾಶಿವ ಸ್ವಾಮಿಗಳು, ಗೋಲಪಲ್ಲಿಯ ವರದಾನೇಶ್ವರ ಸ್ವಾಮಿಗಳು ಮತ್ತು ಸೇಡಂನ ಹಾಲಪ್ಪಯ್ಯ ಸ್ವಾಮಿಗಳು, ಗುಂಡಗುರ್ತಿಯ ರುದ್ರಮುನಿ ಶಿವಾಚಾರ್ಯರು, ಮುನಿಂದ್ರ ಸ್ವಾಮೀಜಿ ಹಲಕರ್ಟಿ, ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೆಡಗಿಮದ್ರಾ, ಶಿವಮೂರ್ತಿ ಸ್ವಾಮೀಜಿ ದೇವಾಪೂರ, ಕೊಟ್ಟೂರೇಶ್ವರ ಶಿವಾಚಾರ್ಯರು ಎಲ್ಹೇರಿ, ಶಹಾಪೂರದ ಬಸವಯ್ಯ ಶರಣರು, ಮುಂತಾದ ಪೂಜ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ.

ರಸಮಂಜರಿ ಕಾರ್ಯಕ್ರಮ: ಖ್ಯಾತ ಚಲನಚಿತ್ರ ನಟ ನಟಿಯರು ಹಾಗೂ ಮನೋಜ ಮದನ್ ಸೌಂಡ್ ಆ್ಯಂಡ್ ಮ್ಯೂಜಿಕ್ ಬೆಂಗಳೂರು ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಸಮಾವೇಶಕ್ಕೆ ಆಗಮಿಸುವ ಗಣ್ಯರು: ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ, ಸಚಿವ ಡಾ.ಎಂ.ಬಿ.ಪಾಟೀಲ್, ಡಾ.ಶರಣಪ್ರಕಾಶ ಪಾಟೀಲ್, ಪ್ರಿಯಾಂಕ ಖರ್ಗೆ, ಸಚಿವರು ಈಶ್ವರ ಖಂಡ್ರೆ, ಎನ್.ಎಸ್.ಬೋಸರಾಜು, ಕೆಕೆಆರ್‌ಡಿಬಿ ಡಾ.ಅಜಯಸಿಂಗ್, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಬಿ.ಆರ್. ಪಾಟೀಲ್, ಶಾಸಕರುಗಳಾದದ ಚೆನ್ನಾರಡ್ಡಿ ಪಾಟೀಲ ತುನ್ನೂರ, ಶರಣಗೌಡ ಕಂದಕೂರ, ಕರೆಮ್ಮ, ಬಸನಗೌಡ ದದ್ದಲ್, ಡಾ.ಶಿವರಾಜ ಪಾಟೀಲ, ಬಸವರಾಜ ಮತ್ತಿಮೂಡ, ಅಲ್ಲಮಪ್ರಭು ಪಾಟೀಲ್, ಎಂ.ವೈ.ಪಾಟೀಲ್, ಮಾಜಿ ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ, ರಾಜೂಗೌಡ (ನರಸಿಂಹನಾಯಕ), ರಾಜುಕುಮಾರ ಪಾಟೀಲ್ ತೇಲ್ಕೂರ, ಸಿದ್ದರಾಮ ಮೇತ್ರೆ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಗುರು ಪಾಟೀಲ ಶಿರವಾಳ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳುವರು.