ರಾಷ್ಟ್ರೀಯವಾದಿ ವ್ಯಕ್ತಿಯಾಗಿದ್ದ ಕಲಾಂ: ಈಶ್ವರಸಿಂಗ್‌

| Published : Jul 28 2024, 02:02 AM IST

ಸಾರಾಂಶ

Abdul Kalam Memorial by BJP Minority Morcha

ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದಿಂದ ಅಬ್ದುಲ್‌ ಕಲಾಂ ಸ್ಮರಣೆಕನ್ನಡ ಪ್ರಭವಾರ್ತೆ ಬೀದರ್‌

ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ ಕಲಾಂ ಅವರು ಭಾರತದ ಇತಿಹಾಸದ ಪುಟದಲ್ಲಿ ಮುಸ್ಲಿಂ ವ್ಯಕ್ತಿಯಾಗದೆ ರಾಷ್ಟ್ರೀಯವಾದಿ ವ್ಯಕ್ತಿಯಾಗಿ ಹೊರಹೊಮ್ಮಿದ್ದರು ಎಂದು ಬಿಜೆಪಿ ಪಕ್ಷದ ವಿಭಾಗೀಯ ಪ್ರಮುಖರಾದ ಈಶ್ವರಸಿಂಗ್‌ ಠಾಕೂರ ಹೇಳಿದರು.

ಬಿಜೆಪಿ ಅಲ್ಪಸಂಖ್ಯಾತರ ಮೊರ್ಚಾದಿಂದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್‌ ಕಲಾಂ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಅಬ್ದುಲ್‌ ಕಲಾಂ ಅವರು ಮಾಜಿ ಪ್ರಧಾನಮಂತ್ರಿ ಅಟಲ್ ಜೀ ಅವರ ನಾಯಕತ್ವದಲ್ಲಿ ಫೋಖ್ರಾನ್ ಸ್ಫೋಟಕದ ಮೂಲಕ ವಿಶ್ವದಲ್ಲಿ ಅಚ್ಚರಿ ಮೂಡಿಸಿದ್ದರು. ಮಿಸೈಲ್‌ ಮ್ಯಾನ್ ಎಂದು ಕರೆಸಿಕೊಂಡಿದ್ದ ವ್ಯಕ್ತಿ ಕಲಾಂ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜಶೇಖರ ನಾಗಮೂರ್ತಿ, ಗುರುನಾಥ ಜ್ಯಾಂತಿಕರ, ರೌಫೋದ್ದಿನ್‌ ಕಛೇರಿವಾಲೇ ಮಾತನಾಡಿದರು. ಸೈಯದ್ ಇಲಿಯಾಸ, ನರೇಂದ್ರ ಹೋಸಮನಿ, ಜಿಲ್ಲಾ ಮೊರ್ಚಾದ ನೂತನ ಅಧ್ಯಕ್ಷರಾದ ಶಫಿಯೋದ್ದಿನ್ ಭಾತಂಬ್ರಾ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಲಾಠೊಡಿ, ಸುಲೆಮಾನ್ ಶೇಖ, ಜಿಲ್ಲಾ ಕಾರ್ಯದರ್ಶಿ ರಾಜಕುಮಾರ ನೆಮ್ತಾಬಾದ, ಸುಭಾಷ ಮಡಿವಾಳ ಭಾಗವಹಿಸಿದರು.

--

ಚಿತ್ರ 27ಬಿಡಿಆರ್52

ಭಾರತೀಯ ಜನತಾ ಪಕ್ಷದ ಅಲ್ಪಸಂಖ್ಯಾತರ ಮೋರ್ಚಾ ವತಿಯಿಂದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ ಕಲಾಂ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.