ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ವಸಂತ ಕುಮಾರ್ ಎನ್ ಹಾಗೂ ಸುಲೋಚನಾ ಕುಮಾರಿ ಬಿ. ಕೆ ದಂಪತಿಗಳ ಪುತ್ರ ಅಭಿರಾಮ್ ವಿ. ಭಟ್ ೫೯೮ ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ರ್‍ಯಾಂಕ್‌ ಪಡೆದಿರುತ್ತಾರೆ.

ಪುತ್ತೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ವಸಂತ ಕುಮಾರ್ ಎನ್ ಹಾಗೂ ಸುಲೋಚನಾ ಕುಮಾರಿ ಬಿ. ಕೆ ದಂಪತಿಗಳ ಪುತ್ರ ಅಭಿರಾಮ್ ವಿ. ಭಟ್ ೫೯೮ ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ರ್‍ಯಾಂಕ್‌ ಪಡೆದಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಕಡೇಶಿವಾಲಯದ ವಸಂತ ಯು ಹಾಗೂ ಚಿತ್ರಾವತಿ ದಂಪತಿಗಳ ಪುತ್ರಿ ಮನ್ಮಿತ, ಹಾಗೂ ಕೊಡಗು ಜಿಲ್ಲೆಯ ಡಿ .ಸಿ ರವಿಕುಮಾರ್ ಹಾಗೂ ಹೆಚ್. ಆರ್ ಪವಿತ್ರ ದಂಪತಿಗಳ ಪುತ್ರಿ ಬಿಂದು ಎಚ್. ಆರ್ ೫೯೬ ಅಂಕಗಳೊಂದಿಗೆ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನಿಗಳಾಗಿದ್ದಾರೆ.

ಕಲಾ ವಿಭಾಗದಲ್ಲಿ ಪುತ್ತೂರು, ನೆಹರು ನಗರದ ಆನಂದ ಗೌಡ ಕೆ ಹಾಗೂ ಪಿ. ದಾಜಮ್ಮ ದಂಪತಿಗಳ ಪುತ್ರಿ ರೂಪಶ್ರೀ ಅವರು ೫೮೪ ಅಂಕಗಳೊಂದಿಗೆ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ರಾಜೇಶ್ ಶೆಟ್ಟಿ ಹಾಗೂ ಸುಮಲತಾ ದಂಪತಿಗಳ ಪುತ್ರಿ ತೀರ್ಥ ಶೆಟ್ಟಿ ೫೯೫, ಬಂಟ್ವಾಳ ತಾಲೂಕಿನ ಸದಾನಂದ ಹಾಗೂ ವನಿತಾ ದಂಪತಿಗಳ ಪುತ್ರಿ ಶ್ರೀಜಾ ೫೯೪, ಬಂಟ್ವಾಳ ತಾಲೂಕಿನ ಸರಪಾಡಿಯ ಪ್ರವೀಣ ಆಳ್ವ ಹಾಗೂ ಸವಿತಾ ಆಳ್ವಾ ದಂಪತಿಗಳ ಪುತ್ರಿ ಪ್ರಾಪ್ತಿ ಆಳ್ವ ೫೯೩, ಸುಳ್ಯ ತಾಲೂಕಿನ ರವಿರಾಜ ಕೆ. ಹಾಗೂ ವಾಣಿಕುಮಾರಿ ಎ. ದಂಪತಿಗಳ ಪುತ್ರಿ ಮಂಗಳಾಮೃತ ಕೆ. ಆರ್ ೫೯೨, ಕಾಸರಗೋಡಿನ ಉದಯ ಶಂಕರ ಭಟ್ ಪಿ .ಕೆ ಹಾಗೂ ಶ್ರೀವಾಣಿ ಪಿ. ದಂಪತಿಗಳ ಪುತ್ರಿ ಪ್ರಸ್ತುತಿ ಪಿ ., ಬೆಂಗಳೂರಿನ ಉಮಾಶಂಕರ್ ಹಾಗೂ ಸುಮಾ ಕೆ.ಡಿ ದಂಪತಿಗಳ ಪುತ್ರಿ ಅದಿತಿ ಯು ೫೯೦ ಅಂಕಗಳನ್ನು ಪಡೆದುಕೊಂಡಿರುತ್ತಾರೆ.

ವಾಣಿಜ್ಯ ವಿಭಾಗದಲ್ಲಿ ಪುತ್ತೂರು ತಾಲೂಕಿನ ರವಿ ನಾರಾಯಣ ಎಂ ಹಾಗೂ ಶರಾವತಿ ರವಿ ನಾರಾಯಣ ದಂಪತಿಗಳ ಪುತ್ರಿ ಪ್ರಮಥ ಎಂ. ಭಟ್ ೫೯೪, ಬಂಟ್ವಾಳ ತಾಲೂಕಿನ ಪ್ರಕಾಶ್ ನಾರಾಯಣ ಜೆ ಹಾಗೂ ರಮ್ಯಾ ದಂಪತಿಗಳ ಪುತ್ರಿ) , ಶ್ರೀವಿದ್ಯಾ ಜೆ ೫೯೩, ಬಾಲಕೃಷ್ಣ ನಾಯಕ್ ಬಿ ಹಾಗೂ ರೇವತಿ ಎಂ ದಂಪತಿ ಪುತ್ರಿ ಸುಶ್ಮಿತಾ ಬಿ ೫೯೨, ಪುತ್ತೂರು ತಾಲೂಕಿನ ವೆಂಕಟ ಕೃಷ್ಣ ಎಂ. ಎನ್ ಹಾಗೂ ವೀಣಾ ಸರಸ್ವತಿ ದಂಪತಿಗಳ ಪುತ್ರಿ ಸಹನ ಮಳಿ ೫೯೧ ಅಂಕಗಳನ್ನು ಪಡೆದುಕೊಂಡಿರುತ್ತಾರೆ. ಕಲಾ ವಿಭಾಗದಲ್ಲಿ ಹುಬ್ಬಳ್ಳಿಯ ಸುನಿಲ್ ಚಿಲ್ಲಾಲ್ ಹಾಗೂ ರೇಷ್ಮಾ ಸುನಿಲ್ ಚಿಲ್ಲಾಲ್ ದಂಪತಿಗಳ ಪುತ್ರಿ ಪ್ರೀತಿ ಸುನಿಲ್ ಚಿಲ್ಲಾಲ್ ೫೮೨, ಸುಳ್ಯ ತಾಲೂಕಿನ ಕೆ. ಎನ್ ಜಗದೀಶ ಹಾಗೂ ಶೋಭಾ ಕೆ. ಎಚ್ ದಂಪತಿಗಳ ಪುತ್ರಿ ಬಿಂದು ಕೆ .ಜೆ ೫೮೦ ಮೈಸೂರಿನ ರವಿಕುಮಾರ್ ಹಾಗೂ ಮಂಜುಳ ದಂಪತಿಗಳ ಪುತ್ರ ಕಿರಣ್ ಆರ್ ೫೭೭, ಬಂಟ್ವಾಳ, ಕನ್ಯಾನ ಗ್ರಾಮದ ಗಣರಾಜ ಸಿ. ಎಚ್ ಹಾಗೂ ಸವಿತಾ ದಂಪತಿಗಳ ಪುತ್ರಿ ಶೋಭಿತಾ ಸಿ. ಎಚ್ ೫೭೧ ಅಂಕಗಳನ್ನು ಪಡೆದುಕೊಂಡಿರುತ್ತಾರೆ.ಕಾಲೇಜಿನ ಒಟ್ಟು ೮೨೦ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೪೪೭ ವಿದ್ಯಾರ್ಥಿಗಳು ಅತ್ಯುನ್ನತ

ಶ್ರೇಣಿಯಲ್ಲಿ ಹಾಗೂ ೩೩೦ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇದರೊಂದಿಗೆ ಪುತ್ತೂರಿನಲ್ಲಿ ರಾಜ್ಯಮಟ್ಟದಲ್ಲಿ ಅತ್ಯಧಿಕ ರ್‍ಯಾಂಕ್‌ಗಳನ್ನು ಗಳಿಸಿದ ಏಕೈಕ ವಿದ್ಯಾಸಂಸ್ಥೆ ಎನ್ನುವ ಹೆಗ್ಗಳಿಕೆಗೆ ವಿವೇಕಾನಂದ ಪದವಿಪೂರ್ವ ಕಾಲೇಜು ಪಾತ್ರವಾಗಿದೆ. ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.