ಅಭಿಷೇಕ್‌ ಆಚಾರ್ಯ ಆತ್ಮಹತ್ಯೆ: ಎಸ್ಪಿ ಭೇಟಿ ಮಾಡಿದ ವಿಶ್ವಕರ್ಮ ಒಕ್ಕೂಟ ನಿಯೋಗ

| Published : Oct 15 2025, 02:08 AM IST

ಅಭಿಷೇಕ್‌ ಆಚಾರ್ಯ ಆತ್ಮಹತ್ಯೆ: ಎಸ್ಪಿ ಭೇಟಿ ಮಾಡಿದ ವಿಶ್ವಕರ್ಮ ಒಕ್ಕೂಟ ನಿಯೋಗ
Share this Article
  • FB
  • TW
  • Linkdin
  • Email

ಸಾರಾಂಶ

ಪರಪ್ಪಾಡಿ ನಿವಾಸಿ ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ನಿಯೋಗ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ಚರ್ಚೆ ನಡೆಸಿತು.

ಕನ್ನಡಪ್ರಭ ವಾರ್ತೆ ಉಡುಪಿ

ನಿಟ್ಟೆ ಗ್ರಾಮದ ಪರಪ್ಪಾಡಿ ನಿವಾಸಿ ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ನಿಯೋಗ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ಚರ್ಚೆ ನಡೆಸಿತು.

ನಿಯೋಗದವರು ಪೊಲೀಸ್ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ, ಅಭಿಷೇಕ್ ಆಚಾರ್ಯ ಅವರು ಸಾವಿನ ಮೊದಲು ಬರೆದಿಟ್ಟಿದ್ದ ಏಳು ಪುಟಗಳ ಡೆತ್ ನೋಟ್‌ನಲ್ಲಿ ನಾಲ್ಕು ಜನರ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದು, ಸೆಕ್ಸ್ ಟ್ರಾಪ್ ಜಾಲದ ಭಯಾನಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಇದು ಸಾಮಾನ್ಯ ಆತ್ಮಹತ್ಯೆ ಪ್ರಕರಣವಲ್ಲ, ಬ್ಲ್ಯಾಕ್‌ಮೇಲ್ ಮತ್ತು ಬೆದರಿಕೆಗಳಿಂದ ನಡೆದ ಆತ್ಮಹತ್ಯೆ ಎಂದು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಉನ್ನತ ಮಟ್ಟದ, ನಿಷ್ಪಕ್ಷಪಾತ ತನಿಖೆ ನಡೆಸಿ, ಡೆತ್ ನೋಟ್‌ನಲ್ಲಿ ಉಲ್ಲೇಖಗೊಂಡಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿಯೋಗ ಆಗ್ರಹಿಸಿತು.

ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಅಲೆವೂರು ಯೋಗೀಶ್ ಆಚಾರ್ಯ, ಮುರಳೀಧರ ಕೆ., ಜನಾರ್ದನ ಎಸ್. ಆಚಾರ್ಯ, ಹರ್ಷವರ್ಧನ್ ನಿಟ್ಟೆ, ಕಾಪು ಯುವ ಸೇವಾ ಬಳಗದ ಅಧ್ಯಕ್ಷ ಬಿಳಿಯರು ಸುಧಾಕರ ಆಚಾರ್ಯ, ಹರೀಶ್ ಆಚಾರ್ಯ ಕಳತ್ತೂರು, ಪ್ರಕಾಶ್ ಆಚಾರ್ಯ ಕಟಪಾಡಿ ಮತ್ತಿತರರು ಇದ್ದರು.