ನಮ್ಮೂರು ನಮ್ಮ ಕೆರೆ ಯೋಜನೆ ಅಡಿ ಸುಮಾರು 800 ಕೆರೆ ಅಭಿವೃದ್ಧಿ: ಜಯರಾಮ ನೆಲ್ಲಿತಾಯ

| Published : Jun 27 2024, 01:08 AM IST

ನಮ್ಮೂರು ನಮ್ಮ ಕೆರೆ ಯೋಜನೆ ಅಡಿ ಸುಮಾರು 800 ಕೆರೆ ಅಭಿವೃದ್ಧಿ: ಜಯರಾಮ ನೆಲ್ಲಿತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಕ್ಷೇತ್ರದ ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗ್ಗಡೆಯವರು ಗ್ರಾಮೀಣ ಭಾಗದ ಕೆರೆಗಳ ಪುನಶ್ಚೇತನ ಗೊಳಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಈಗಾಗಲೇ 800 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಜನರು ಗ್ರಾಮದಲ್ಲಿ ದೇವಾಲಯ ನಿರ್ಮಾಣ ಮಾಡುವುದಕ್ಕಿಂತ ಒಂದು ಕೆರೆ ಅಭಿವೃದ್ಧಿ ಪಡಿಸುವುದರಿಂದ ಭವಿಷ್ಯದಲ್ಲಿ ಮುಂದಿನ ಪೀಳಿಗೆಗೆ ನೀರಿನ ಅಭಾವದಿಂದ ಪರಿ ತಪ್ಪಿಸುವುದು ತಪ್ಪುತ್ತದೆ.

ಕನ್ನಡ ಪ್ರಭ ವಾರ್ತೆ ಮದ್ದೂರು

ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗ್ಗಡೆಯವರ ಆಶಯದಂತೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಮ್ಮೂರು ನಮ್ಮ ಕೆರೆ ಯೋಜನೆ ಅಡಿ ಸುಮಾರು 800 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಯೋಜನೆ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತಾಯ ಹೇಳಿದರು.

ತಾಲೂಕಿನ ಕೊಪ್ಪ ಹೋಬಳಿ ಮರಳಿಗ ಗ್ರಾಮದಲ್ಲಿ ಮಂಗಳವಾರ ನಮ್ಮೂರು ನಮ್ಮ ಕೆರೆ ಯೋಜನೆ ಅಡಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಜಲಮೂಲವಾದ ಕೆರೆಗಳನ್ನು ಸಂರಕ್ಷಣೆ ಮಾಡದೆ ನಿರ್ಲಕ್ಷ ವಹಿಸಿದರೆ ಮುಂದಿನ ದಿನಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗುವ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು.

ಶ್ರೀಕ್ಷೇತ್ರದ ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗ್ಗಡೆಯವರು ಗ್ರಾಮೀಣ ಭಾಗದ ಕೆರೆಗಳ ಪುನಶ್ಚೇತನ ಗೊಳಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಈಗಾಗಲೇ 800 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಜನರು ಗ್ರಾಮದಲ್ಲಿ ದೇವಾಲಯ ನಿರ್ಮಾಣ ಮಾಡುವುದಕ್ಕಿಂತ ಒಂದು ಕೆರೆ ಅಭಿವೃದ್ಧಿ ಪಡಿಸುವುದರಿಂದ ಭವಿಷ್ಯದಲ್ಲಿ ಮುಂದಿನ ಪೀಳಿಗೆಗೆ ನೀರಿನ ಅಭಾವದಿಂದ ಪರಿ ತಪ್ಪಿಸುವುದು ತಪ್ಪುತ್ತದೆ ಎಂದು ಅಭಿಪ್ರಾಯಪಟ್ಟರು.

ರೈತರು ಕೆರೆ ಹೂಳನ್ನು ತಮ್ಮ ಜಮೀನುಗಳಿಗೆ ಒದಗಿಸಿಕೊಳ್ಳುವುದರಿಂದ ಭೂಮಿ ಫಲವತ್ತತೆ ಹೊಂದಿ ಹೆಚ್ಚು ಬೆಳೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ, ವಕೀಲ ಜಿ.ಎನ್. ಸತ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀವೀರೇಂದ್ರ ಹೆಗಡೆಯವರ ದೂರದೃಷ್ಟಿ ಫಲವಾಗಿ ಕೈಗೊಂಡ ಕೆರೆ ಅಭಿವೃದ್ಧಿ, ಮಹಿಳಾ ಸಬಲೀಕರಣ ಸೇರಿದಂತೆ ಹಲವು ಯೋಜನೆಗಳಿಂದ ಬಹಳಷ್ಟು ಜನರು ಬದುಕು ಕಟ್ಟಿಕೊಡಲು ಸಹಕಾರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯೋಗಾನಂದ, ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕಿ ಚೇತನ, ತಾಲೂಕು ಯೋಜನಾಧಿಕಾರಿ ಯೋಗೇಶ್ ಕನ್ಯಾಡಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಲಕ್ಷ್ಮಿ ಚನ್ನರಾಜು, ಕೆರೆ ಎಂಜಿನಿಯರ್ ಪುಷ್ಪರಾಜ್, ಪಿಡಿಒ ಲತಾಮಣಿ, ಗ್ರಾಪಂ ಸದಸ್ಯ ಸೋಮಶೇಖರ್, ಕೃಷಿ ಮೇಲ್ವಿಚಾರಕ ಪವನ್, ವಲಯ ಮೇಲ್ವಿಚಾರಕ ನಿರಂಜನ್ ಪಾಲ್ಗೊಂಡಿದ್ದರು.ಜು.21ರಂದು ವೀರಶೈವ ಮಹಾಸಭಾದ ಪದಾಧಿಕಾರಿಗಳ ಚುನಾವಣೆ

ಶ್ರೀರಂಗಪಟ್ಟಣ:ತಾಲೂಕು ವೀರಶೈವ ಮಹಾಸಭಾ ಪದಾಧಿಕಾರಿಗಳ ಸ್ಥಾನಕ್ಕೆ ಜುಲೈ 21ರಂದು ಚುನಾವಣೆ ನಡೆಯಲಿದೆ ಎಂದು ಸಹಾಯಕ ಚುನಾವಣಾಧಿಕಾರಿ ಎಸ್.ನಾಗರಾಜ ತಿಳಿಸಿದ್ದಾರೆ.

ಅಖಿಲಭಾರತ ವೀರಶೈವ ಮಹಾಸಭೆ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಅಖಿಲಭಾರತ ವೀರಶೈವ ಮಹಾಸಭೆ (ರಿ), ಬೆಂಗಳೂರು ಅಧಿಸೂಚನೆ ಹೊರಡಿಸಿದ್ದಾರೆ. ಜುಲೈ 21ರ ಭಾನುವಾರ ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ನಂತರ ಅಂದೇ ಮತಗಳ ಎಣಿಕೆ ಕಾರ್ಯ ಮುಗಿಸಿ ಫಲಿತಾಂಶ ಪ್ರಕಟಿಸಲಾಗುವುದು.ಚುನಾವಣೆಯಲ್ಲಿ ಮತ ನೀಡಲು ಹಾಗೂ ಅಭ್ಯರ್ಥಿಗಾಗಿ ನಾಮಪತ್ರ ಸಲ್ಲಿಸಲು ಅಖಿಲ ಭಾರತ ವೀರಶೈವ ಮಹಾಸಭೆಯ (ರಿ), ಬೆಂಗಳೂರು ಇವರಲ್ಲಿ ಸದಸ್ಯತ್ವ ಹೊಂದಿರಬೇಕು. 1 ಅಧ್ಯಕ್ಷ ಸ್ಥಾನ, 7 ಮಹಿಳಾ, 13 ಸಾಮಾನ್ಯ ಪದಾಧಿಕಾರಿಗಳ ಸ್ಥಾನಗಳಿಗೆ ಆಯ್ಕೆ ಮಾಡಬೇಕಿದೆ. ಸದಸ್ಯರೆಲ್ಲರೂ ಸಕ್ರಿಯವಾಗಿ ಮತದಾನದಲ್ಲಿ ಭಾಗವಹಿಸಿ ಆಯ್ಕೆಮಾಡಬೇಕು ಎಂದು ವೀರಶೈವ ಮಹಾಸಭಾದಿಂದ ಕೋರಲಾಗಿದೆ.

ಪಟ್ಟಣದ ಪೋಲೀಸ್ ಕ್ವಾಟ್ರಸ್ ರಸ್ತೆಯ ವಾಟರ್ ಗೇಟ್ ಮುಂಭಾಗದ ಬಸವ ಭವನದಲ್ಲಿ ನಾಮಪತ್ರಗಳನ್ನು ಜೂ.27 ರಿಂದ ಜು.4 ರ ಮಧ್ಯಾಹ್ನ 3 ಗಂಟೆವರೆಗೆ ವಿತರಿಸಲಾಗುವುದು. ನಾಮಪತ್ರಗಳನ್ನು ಜುಲೈ4ರ ವರೆಗೆ ಸ್ವೀಕರಿಸಲಾಗುವುದು. ಜು.5ರಂದು ನಾಮಪತ್ರಗಳ ಪರಿಶೀಲಿಸಿ, ಜು.8 ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.