ಸಾರಾಂಶ
ನ್ಯಾಯಾಂಗ ವ್ಯವಸ್ಥೆ, ಸಿವಿಲ್ ನ್ಯಾಯಾಧೀಶರಿಗೆ ಹಾಗೂ ತಾಲೂಕು ವಕೀಲ ಸಂಘದ ಸದಸ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಸುಮಾರು ಒಂಬತ್ತು ಜನರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ದೂರು ಸಲ್ಲಿಸಲಾಯಿತು.
ಕುಷ್ಟಗಿ:
ನ್ಯಾಯಾಂಗ ವ್ಯವಸ್ಥೆ, ಸಿವಿಲ್ ನ್ಯಾಯಾಧೀಶರಿಗೆ ಹಾಗೂ ತಾಲೂಕು ವಕೀಲ ಸಂಘದ ಸದಸ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಸುಮಾರು ಒಂಬತ್ತು ಜನರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪಿಎಸ್‌ಐ ಹನುಮಂತಪ್ಪ ತಳವಾರ ಅವರಿಗೆ ವಕೀಲರ ಸಮೂಹದ ವತಿಯಿಂದ ದೂರು ಸಲ್ಲಿಸಲಾಯಿತು.ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿ, ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದ ನಿವಾಸಿ ಸಂಗಪ್ಪ ಶರಣಪ್ಪ ಬಳೂಟಗಿ ಎಂಬಾತ ತೋಪಲಕಟ್ಟಿ ಹರ ದೇವಾಲಯ ಟ್ರಸ್ಟ್ ಎಂಬ ವಾಟ್ಸಾಪ್ ಗ್ರುಪ್ಪಿನಲ್ಲಿ ಆಡಿಯೋವನ್ನು ಹಾಕಿದ್ದು, ಅದರಲ್ಲಿ ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ಹಾಗೂ ಸಿವಿಲ್ ನ್ಯಾಯಾಧೀಶರು ಹಾಗೂ ವಕೀಲರ ಸಂಘದ ಸದಸ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಕಂಡು ಬಂದಿದೆ. ಕಾರಣ ಆ ಗ್ರುಪ್ಪಿನ ಆಡ್ಮಿನ್‌ಗಳಾದ ಮಂಜು ಬನ್ನಟ್ಟಿ, ನಾಗರಾಜ ಹವಾಲ್ದಾರ್, ಪ್ರಭು ಹುಲಸಗೇರಿ, ಮಹಾಂತೇಶ ಬಿಜಕಲ್, ಮುತ್ತಪ್ಪ ಬನ್ನಿಗೋಳ, ರಮೇಶ ಬನ್ನಿಗೋಳ, ವೀರೇಶ ಕೊನಸಾಗರ, ಶರಣಪ್ಪ ಕಲಕಬಂಡಿ ಸೇರಿದಂತೆ ಇತರರು ಬೇರೆ ಬೇರೆ ವಾಟ್ಸಾಪ್ ಗ್ರುಪ್‌ಗಳಲ್ಲಿ ಈ ಆಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಿಂದಾಗಿ ನಮ್ಮ ನ್ಯಾಯಾಂಗ ವ್ಯವಸ್ಥೆ ಹಾಗೂ ನ್ಯಾಯಾಧೀಶರಿಗೆ, ವಕೀಲರ ಸಮೂಹಕ್ಕೆ ಅವಮಾನವಾಗಿದೆ. ಆದ್ದರಿಂದ ಈ ಒಂಬತ್ತು ಜನರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ವಕೀಲರು ಇದ್ದರು.