ಸಾರಾಂಶ
ಕೊಪ್ಪಳ: ಪ್ರವಾದಿ ಪೈಗಂಬರ ಹಜರತ್ ಮೊಹಮ್ಮದ್ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿ, ಅವರ ಬಗ್ಗೆ ನಿಂದನೆ ಮಾಡಿದ ಯತಿ ನರಸಿಂಗಾನಂದ ಸ್ವಾಮಿ ವಿರುದ್ಧ ನಗರದಲ್ಲಿ ಶುಕ್ರವಾರ ಮುಸ್ಲಿಮರು ಬೃಹತ್ ಪ್ರತಿಭಟನೆ ಮಾಡಿದರು.
ನಗರದ ಗಡಿಯಾರ ಕಂಬದಿಂದ ಪ್ರಾರಂಭವಾದ ಮೆರವಣಿಗೆ ಜವಾಹರ್ ರಸ್ತೆಯ ಮೂಲಕ ಅಶೋಕ್ ಸರ್ಕಲ್ ವರೆಗೆ ಶಾಂತಿಯುತವಾಗಿ ನಡೆಸಿದರು.ಪ್ರವಾದಿ (ಸ) ಅವರ ಕುರಿತು ನರಸಿಂಗಾನಂದ ಸ್ವಾಮಿ ಅವರ ಹೇಳಿಕೆ ಖಂಡಿಸಿದರಲ್ಲದೆ, ಕೂಡಲೇ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ರೀತಿಯ ಕ್ರಮ ಜರುಗಿಸುವಂತೆ ಮತ್ತು ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ನಗರ ಪೊಲೀಸ್ ಠಾಣೆಯಲ್ಲಿ ನರಸಿಂಗಾನಂದ ಸ್ವಾಮಿ ವಿರುದ್ಧ ದೂರು ಸಲ್ಲಿಸಿ ಪ್ರಕರಣ ದಾಖಲಿಸಿದರು.ಪ್ರತಿಭಟನೆಯಲ್ಲಿ ಮುಸ್ಲಿಂ ಧರ್ಮಗುರುಗಳು, ಮುಫ್ತಿಗಳು ಮೌಲಾನಗಳು, ಸಮಾಜದ ಮುಖಂಡರು, ಸಮಾಜದ ಜನಪ್ರತಿನಿಧಿಗಳು, ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಧರ್ಮಗುರು ಮೌಲಾನ ಮುಫ್ತಿ ಮೊಹಮ್ಮದ್ ನಜೀರ್ ಅಹಮದ್ ಖಾದ್ರಿ ತಸ್ಕಿನಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು,
ಅಶೋಕ್ ಸರ್ಕಲ್ ಬಳಿ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಯಿಂದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.ಪ್ರತಿಭಟನೆಯಲ್ಲಿ ಕೊಪ್ಪಳ ನಗರ ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳಿಂದ ಸಹ ಮುಸ್ಲಿಂ ಸಮಾಜದವರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮುಸ್ಲಿಂ ಧರ್ಮ ಗುರು ನೂರುಲ್ಲಾ ತಹಸೀನ್ ಆಸೀಫ್ ಮೊಯೋದ್ದೀನ್ ಮೌಲನಾ ಅಸಾದುಲ್ಲಾ ಮೌಲಾನ ಮೊಹಮ್ಮದ್ ಅಲಿ ಹಿಮಾಹಿತಿ ಹಿದಾಯತ್ ಅಲಿ, ಹಿರಿಯ ವಕೀಲ ಆಸಿಫ್ ಅಲಿ ಸಮಾಜದ ಮುಖಂಡ ಕೆ.ಎಂ. ಸಯ್ಯದ್, ಪೀರಾಹುಸೇನ್ ಹೊಸಳ್ಳಿ, ಸಮಾಜದ ಮುಖಂಡರಾದ ಬಾಷು ಸಾಬ್ ಖತೀಬ್, ಯುವ ನಾಯಕ ಸಲೀಂ ಮಂಡಲಗೇರಿ, ಸಯ್ಯದ್ ಮೆಹಮೋದ ಹುಸೇನಿ ಬಲ್ಲೆ, ಸಲೀಂ ಅಳವಂಡಿ, ಮೊಹಮ್ಮದ್ ಜಿಲಾನ ಖಲೆದಾರ್ ಮೈ ಲೈಕ, ಶಾಬುದ್ದೀನ್ ಸಾಬ್ ನೂರ್ ಬಾಷಾ, ಜಾಕಿರ್ ಹುಸೈನ್ ಖಿಲ್ಲೇದಾರ್, ಅಬ್ದುಲ್ ಅಜೀಜ್ ಮಾನ್ವಿ ಕರ್, ಸಿರಾಜ್ ಮನಿಯರ್, ಯಲಬುರ್ಗಾ ಪಪಂ ಮಾಜಿ ಅಧ್ಯಕ್ಷ ಅಖ್ತರ್ ಸಾಬ್ ಖಾಜಿ, ಚಾಂದ್ ಪಾಷಾ ಖಿಲ್ಲೇದಾರ್, ಅಫ್ಜಲ್ ಪಟೇಲ್, ಪೀರ ಹುಸೇನ್ ಮುಜಾವರ್, ಮಾನ್ವಿ ಪಾಷಾ, ರಫೀ ಧಾರವಾಡ, ಸಿಎಂ ಮುಸ್ತಫಾ, ಅಕ್ಬರ್ ಪಾಷಾ ಪಲ್ಟನ್ ಹಾಗೂ ಅಂಜುಮನ್ ಕಮಿಟಿಯ ಪದಾಧಿಕಾರಿಗಳು, ಸದ್ಭಾವನಾ ವೇದಿಕೆಯ ಕೆಲವು ಪದಾಧಿಕಾರಿಗಳು, ಪಂಚ ಕಮಿಟಿ, ನೌ ಜವಾನ್ ಕಮಿಟಿ, ಮಸೀದಿ ಕಮಿಟಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.