ಉಡುಪಿ: ಎಬಿವಿಪಿಯಿಂದ ವಿವಿಧೆಡೆ ಕಾರ್ಗಿಲ್ ವಿಜಯೋತ್ಸವ ಆಚರಣೆ

| Published : Jul 28 2025, 01:03 AM IST

ಸಾರಾಂಶ

26ನೇ ವರ್ಷದ ಕಾರ್ಗಿಲ್‌ ವಿಜಯೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮವನ್ನು ವಿವಿಧ ಕಡೆಗಳಲ್ಲಿ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ 26ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮವನ್ನು ವಿವಿಧ ಕಡೆಗಳಲ್ಲಿ ಜು. 26 ಮತ್ತು 27 ರಂದು ನಡೆಸಲಾಯಿತು.ಜು. 26 ನೇ ತಾರೀಕು ಬೆಳಗ್ಗೆ 9 ಗಂಟೆಗೆ ಸರಿಯಾಗಿ ಅಜ್ಜರಕಾಡು ಹುತಾತ್ಮ ಯೋಧರ ಯುದ್ಧ ಸ್ಮಾರಕದ ಬಳಿ ಪುಷ್ಪರ್ಚನೆಯನ್ನು ನಡೆಸುವುದರೊಂದಿಗೆ ಕಾರ್ಗಿಲ್ ಯುದ್ಧದಲ್ಲಿ ವೀರಗತಿಯನ್ನು ಹೊಂದಿದ ಸೈನಿಕರನ್ನು ಸ್ಮರಿಸಲಾಯಿತು.ನಂತರ ನಗರದ ವಿವಿಧ ವಿಧ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಹಾಸ್ಟೇಲ್ ಗಳಲ್ಲಿ ಭಾರತ ಮಾತೆಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ಕಾರ್ಗಿಲ್ ಭಾರತಕ್ಕೆ ಕಾರ್ಯತಂತ್ರದ ನಿಟ್ಟಿನಲ್ಲಿ ಎಷ್ಟು ಮಹತ್ವದ್ದಾಗಿತ್ತು ಮತ್ತು ಅಂದಿನ ದಿನಗಳಲ್ಲಿ ಕ್ಯಾಪ್ಟನ್ ವಿಕ್ರಂ ಬಾತ್ರ ಅವರನ್ನು ಸೇರಿದಂತೆ ಅನೇಕ ವೀರ ಯೋಧರು ತಮ್ಮ ಸೇವೆಯನ್ನು ಭಾರತ ಮಾತೆಯ ರಕ್ಷಣೆಗಾಗಿ ಕಾರ್ಗಿಲ್ ಭೂಮಿಯಲ್ಲಿ ನಡೆಸಿದ್ದನ್ನು ಸ್ಮರಿಸಲಾಯಿತು.ವಿವಿಧ ಕಡೆ ನಡೆದ ಈ ಕಾರ್ಯಕ್ರಮದಲ್ಲಿ ನಗರ ಕಾರ್ಯದರ್ಶಿ ಮಾಣಿಕ್ಯ ಭಟ್, ನಗರ ಸಂಪರ್ಕ ಪ್ರಮುಖ್ ಮನೀಶ್, ಹಾಗೂ ಪ್ರಮುಖರಾದ ರಿಷಬ್, ಧನೀಶ್, ರಂಜಿತ್ ಮತ್ತಿತರರಿದ್ದರು.