ಸಾರಾಂಶ
ಡ್ರಗ್ಸ್, ಮದ್ಯಪಾನ, ಧೂಮಪಾನ, ಗಾಂಜಾ, ಮಾಲಿನ್ಯ ಮುಕ್ತ ಸ್ವಚ್ಛ ಶಾಲಾ ಕಾಲೇಜು ಆವರಣ, ಸ್ವಚ್ಛ ವ್ಯಕ್ತಿತ್ವದ ಸಮಾಜಕ್ಕಾಗಿ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದಿಂದ ಜನಜಾಗೃತಿ ತಿರಂಗಾ ಅಭಿಯಾನ ಜರುಗಿತು.
ಕನ್ನಡಪ್ರಭ ವಾರ್ತೆ ಅಥಣಿ
ಡ್ರಗ್ಸ್, ಮದ್ಯಪಾನ, ಧೂಮಪಾನ, ಗಾಂಜಾ, ಮಾಲಿನ್ಯ ಮುಕ್ತ ಸ್ವಚ್ಛ ಶಾಲಾ ಕಾಲೇಜು ಆವರಣ, ಸ್ವಚ್ಛ ವ್ಯಕ್ತಿತ್ವದ ಸಮಾಜಕ್ಕಾಗಿ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದಿಂದ ಜನಜಾಗೃತಿ ತಿರಂಗಾ ಅಭಿಯಾನ ಜರುಗಿತು.ಅಥಣಿ ಪಟ್ಟಣದ ಜಾದವಜಿ ಶಿಕ್ಷಣ ಸಂಸ್ಥೆಯ ಕೆ.ಎ. ಲೋಕಾಪುರ ಮಹಾವಿದ್ಯಾಲಯದಿಂದ ಆರಂಭಗೊಂಡ ಅಭಿಯಾನಕ್ಕೆ ಚಾಲನೆ ನೀಡಿದ ಎಬಿವಿಪಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ ಮಾತನಾಡಿದರು. ಮಹಾವಿದ್ಯಾಲಯದಿಂದ ಆರಂಭವಾದ ತಿರಂಗ ಅಭಿಯಾನದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮುರುಘೇಂದ್ರ ಶಿವಯೋಗಿ ವೃತ್ತದಲ್ಲಿ ಮಾನವ ಸರ್ಪಳಿ ನಿರ್ಮಿಸಿ ಜನಜಾಗೃತಿ ಮೂಡಿಸುವ ಮೂಲಕ ಅಭಿಯಾನ ಸಮಾರೋಪಗೊಂಡಿತು.ಎಬಿವಿಪಿ ಅದ್ಯಕ್ಷ ರಾವಸಾಬ ಅಂಬಿ, ನಗರ ಕಾರ್ಯದರ್ಶಿ ಸುದೀಪ ನಾಯಿಕ, ಹಿರಿಯ ಕಾರ್ಯಕರ್ತ ವಿನಯ ಹೊರಟ್ಟಿ, ಚಿದಾನಂದ ಸಂಭೋಜಿ, ಅಭಯ ಸಗರೆ, ಗೋಪಾಲ ಕಾಂಬಳೆ, ಪ್ರಜ್ವಲ, ಪ್ರಭು ಪಾಟೀಲ, ಪ್ರೀತಮ ಉಪಸ್ಥಿತರಿದ್ದರು.