ಕಲಿಕಾ ಸಾಧನೆಯೇ ಮಕ್ಕಳು ಪೋಷಕರಿಗೆ ನೀಡುವ ಅತ್ಯಮೂಲ್ಯ ಉಡುಗೊರೆ: ಆರ್.ಎಸ್.ಜೀತು.

| Published : Nov 14 2025, 01:00 AM IST

ಕಲಿಕಾ ಸಾಧನೆಯೇ ಮಕ್ಕಳು ಪೋಷಕರಿಗೆ ನೀಡುವ ಅತ್ಯಮೂಲ್ಯ ಉಡುಗೊರೆ: ಆರ್.ಎಸ್.ಜೀತು.
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ ಶಿಕ್ಷಣ ಮಕ್ಕಳ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಓದಿ ಉತ್ತಮ ಸಾಧನೆ ಮಾಡುತ್ತಾರೆ. ಕಲಿಕಾ ಸಾಧನೆಯ್ ಪೋಷಕರಿಗೆ ಮಕ್ಕಳು ನೀಡುವ ಅತ್ಯಮೂಲ್ಯ ಕೊಡುಗೆಯಾಗಿದೆ ಎಂದು ಶೃಂಗೇರಿ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಆರ್.ಎಸ್.ಜೀತು ಹೇಳಿದರು.

ಕನ್ನಡಪ್ರಭ ವಾರ್ತೆ, ಶೃಂಗೇರಿ

ಶಿಕ್ಷಣ ಮಕ್ಕಳ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಓದಿ ಉತ್ತಮ ಸಾಧನೆ ಮಾಡುತ್ತಾರೆ. ಕಲಿಕಾ ಸಾಧನೆಯ್ ಪೋಷಕರಿಗೆ ಮಕ್ಕಳು ನೀಡುವ ಅತ್ಯಮೂಲ್ಯ ಕೊಡುಗೆಯಾಗಿದೆ ಎಂದು ಶೃಂಗೇರಿ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಆರ್.ಎಸ್.ಜೀತು ಹೇಳಿದರು.

ಶೃಂಗೇರಿ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂದಿನ ಸ್ಪರ್ದಾತ್ಮಕ ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಅನಿವಾರ್ಯ. ಉತ್ತಮ ಶಿಕ್ಷಣವೇ ಮಕ್ಕಳಿಗೆ ನಿಜವಾದ ಆಸ್ತಿ. ವಿದ್ಯಾರ್ಥಿಗಳು ತಮ್ಮ ಕಲಿಕೆ ದಿನಗಳಲ್ಲಿ ಸಮಯ ವ್ಯರ್ಥಗೊಳಿಸದೇ ಅಧ್ಯಯನದತ್ತ ಹರಿಸಬೇಕು ಎಂದರು.

ಮಕ್ಕಳಿಗೆ ತಮ್ಮದೇ ಆದ ಹಕ್ಕುಗಳಿವೆ. ಮಕ್ಕಳಲ್ಲಿ ಸಾಮಾನ್ಯ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು. ಮೂಲಭೂತ ಹಕ್ಕುಗಳು, ಕರ್ತವ್ಯಗಳ ಬಗ್ಗೆ, ರ್ಯಾಗಿಂಗ್ ವಿರೋಧಿ ಕಾನೂನು, ಕಡ್ಡಾಯ ಶಿಕ್ಷಣ ಹಕ್ಕು, ಪೋಕ್ಸೋ ಕಾಯ್ದೆ,ರಸ್ತೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕಿದೆ.

ವಿದ್ಯಾರ್ಥಿಗಳು ದೇಶದ ಭವಿಷ್ಯದ ರೂವಾರಿ. ದೇಶದ ನಿಜವಾದ ಭವಿಷ್ಯ ಅಡಗಿರುವುದು ವಿದ್ಯಾರ್ಥಿಗಳ ಕೈಯಲ್ಲಿ.ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಕ್ಕಳ ತಪ್ಪುಗಳನ್ನು ಸರಿಪಡಿಸಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ಮಕ್ಕಳಲ್ಲಿ ಶಿಸ್ತು, ಪ್ರಾಮಾಣಿಕತೆ.ಮಾನವೀಯ,ನೈತಿಕ ಮೌಲ್ಯ ಬೆಳೆಸಬೇಕು ಎಂದರು.

ಶಾಲೆ ಪ್ರಾಂಶುಪಾಲ ವಿರೂಪಾಕ್ಷಿ ಜರಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಕಲಿಕೆ ದಿನಗಳಲ್ಲಿ ತಮಗೆ ಸಿಗುವ ಸೌಲಭ್ಯ ಸಮರ್ಪಕ ಸದ್ಭಳಕೆ ಮಾಡಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಸುರೇಶ್ಪ್ರೀ ಗಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.ಪ್ರೀತಿ ಸ್ವಾಗತಿಸಿದರು.ಸುಕನ್ಯ ಸಾಲಿಯನ್ ನಿರೂಪಿಸಿದರು.ವೀರೇಶ್ ವಂದಿಸಿದರು.ಇದೇ ಸಂದರ್ಭದಲ್ಲಿ ನ್ಯಾ.ಆರ್.ಎಸ್.ಜೀತುರವರನ್ನು ಸನ್ಮಾನಿಸಲಾಯಿತು.

13 ಶ್ರೀ ಚಿತ್ರ 1-ಶೃಂಗೇರಿ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ನ್ಯಾ.ಆರ್.ಎಸ್.ಜೀತು ಉದ್ಘಾಟಿಸಿದರು.