ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯವು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ (ಎನ್‌ಎಸ್‌ಡಬ್ಲ್ಯು)ನ 5 ವಿಶ್ವವಿದ್ಯಾಲಯಗಳ ಜೊತೆಗೆ ಶೈಕ್ಷಣಿಕ ಹಾಗೂ ಸಂಶೋಧನಾ ಸಹಭಾಗಿತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.
ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯವು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ (ಎನ್‌ಎಸ್‌ಡಬ್ಲ್ಯು)ನ 5 ವಿಶ್ವವಿದ್ಯಾಲಯಗಳ ಜೊತೆಗೆ ಶೈಕ್ಷಣಿಕ ಹಾಗೂ ಸಂಶೋಧನಾ ಸಹಭಾಗಿತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.
ನ್ಯೂ ಸೌತ್ ವೇಲ್ಸ್‌ನ ಪ್ರಮುಖ 5 ವಿಶ್ವವಿದ್ಯಾಲಯಗಳಾದ ದಿ ಯೂನಿವರ್ಸಿಟಿ ಆಫ್ ಸಿಡ್ನಿ, ಯುಎನ್‌ಎಸ್‌ಡಬ್ಲ್ಯು ಸಿಡ್ನಿ, ಮ್ಯಾಕ್ವಾರಿ ವಿಶ್ವವಿದ್ಯಾನಿಲಯ, ದಿ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಸಿಡ್ನಿ ಮತ್ತು ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾನಿಲಯಗಳೊಂದಿಗೆ ಮಾಹೆಯ ಈ ಸಹಯೋಗವು ಶೈಕ್ಷಣಿಕ ಮತ್ತು ಸಂಶೋಧನ ಚಟುವಟಿಕೆಗಳ ಜೊತೆಗೆ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಸಂಶೋಧಕರ ವಿನಿಮಯವನ್ನು ಒಳಗೊಂಡಿವೆ. ನ್ಯೂ ಸೌತ್ ವೇಲ್ಸ್ ಸರ್ಕಾರದ ಸಂಸದ ಮತ್ತು ಆಡಳಿತ ಮುಖ್ಯಸ್ಥ ಕ್ರಿಸ್ ಮಿನ್ಸ್ ಹಾಗೂ ವಿತ್ತ ಪ್ರಮುಖರಾದ ಡೇನಿಯಲ್ ಮೂಕ್‌ಹಿ ಅವರ ನೇತೃತ್ವದಲ್ಲಿ ನಿಯೋಗವು ಭಾರತದೊಂದಿಗೆ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸುವ ಉದ್ದೇಶದಿಂದ ಆಗಮಿಸಿದ್ದ, ಮುಂಬೈನಲ್ಲಿ ಏರ್ಪಡಿಸಿದ್ದ ವಿಶೇಷ ಸಮಾರಂಭದಲ್ಲಿ ಮಾಹೆ ಮತ್ತು ದಿ ಯೂನಿವರ್ಸಿಟಿ ಆಫ್ ಸಿಡ್ನಿ (ಯುಸ್‌ವೈಡಿ) ನಡುವೆ ಶಿಕ್ಷಣ, ಸಂಶೋಧನೆ, ನವೋದ್ಯಮ ಮತ್ತು ಅಂತಾರಾಷ್ಟ್ರೀಯ ಶೈಕ್ಷಣಿಕ ವಿನಿಮಯ ಒಡಂಬಡಿಕೆಗೆ ಸಹಿ ಮಾಡಲಾಯಿತು.ಈ ಒಡಂಬಡಿಕೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿರುವ ಮಾಹೆಯ ಕುಲಪತಿ ಡಾ. ಶರತ್ ರಾವ್ ಅವರು, ‘ಆಸ್ಟ್ರೇಲಿಯಾದ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಮಾಹೆಯ ನಡುವೆ ನಿಕಟ ಸಂಬಂಧ ಬಹುಕಾಲದಿಂದಲೂ ಇದೆ. ಪ್ರಸ್ತುತ ಈಗ ನ್ಯೂ ಸೌತ್ ವೇಲ್ಸ್ ಜೊತೆಗೆ ಗಾಢ. ಸುಸ್ಥಿರ ಸಂಬಂಧವನ್ನು ಬೆಸೆಯಲು ಈ ಒಡಂಬಡಿಕೆಯ ಮೂಲಕ ಅವಕಾಶ ಒದಗಿದೆ. ಮಾಹೆ ಯಾವತ್ತೂ ವಿಶ್ವದ ಯಾವುದೇ ನವಜ್ಞಾನಪರಂಪರೆಗೆ ತನ್ನನ್ನು ತಾನು ತೆರೆದುಕೊಳ್ಳುವಲ್ಲಿ ಮತ್ತು ತನ್ನಲ್ಲಿರುವ ಜ್ಞಾನವನ್ನು ವಿಶ್ವದೊಂದಿಗೆ ಹಂಚಿಕೊಳ್ಳುವಲ್ಲಿ ಸದಾ ಮುಕ್ತವಾಗಿದೆ’ಎಂದರು,