ಕೊರಟಗೆರೆ ತಾಲೂಕಿನಲ್ಲಿ ಚುರುಕುಗೊಂಡ ಬಿತ್ತನೆ ಕಾರ್ಯ

| Published : Jul 13 2024, 01:32 AM IST

ಸಾರಾಂಶ

ಸಕ್ತ ಸಾಲಿನಲ್ಲಿ ತಾಲೂಕಿನ ವಾರ್ಷಿಕ ವಾಡಿಕೆ ಮಳೆಯು ಒಟ್ಟು ೭೭೪ ಮೀ.ಮೀ ಇದ್ದು, ಜೂನ್‌ವರೆಗೆ ೨೪೧ ಮೀ.ಮೀ, ಇದ್ದು, ಇಲ್ಲಿಯವರೆಗೂ ೩೨೭ ಮೀ.ಮೀ ಮಳೆಯಾಗಿರುತ್ತದೆ

ಕನ್ನಡಪ್ರಭ ವಾರ್ತೆ ಕೊರಟಗೆರೆ

ಪ್ರಸಕ್ತ ಸಾಲಿನಲ್ಲಿ ತಾಲೂಕಿನ ವಾರ್ಷಿಕ ವಾಡಿಕೆ ಮಳೆಯು ಒಟ್ಟು ೭೭೪ ಮೀ.ಮೀ ಇದ್ದು, ಜೂನ್‌ವರೆಗೆ ೨೪೧ ಮೀ.ಮೀ, ಇದ್ದು, ಇಲ್ಲಿಯವರೆಗೂ ೩೨೭ ಮೀ.ಮೀ ಮಳೆಯಾಗಿರುತ್ತದೆ. ಪ್ರಸಕ್ತ ವರ್ಷದಲ್ಲಿ ಇಲ್ಲಿಯವರೆಗೂ ಶೇ.೩೬ ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ೨೦೨೩-೨೪ ನೇ ಸಾಲಿನಲ್ಲಿ ವಾರ್ಷಿಕ ಮಳೆಯು ೭೭೪ ಮೀ.ಮೀಗೆ ೫೫೮ ಮೀ.ಮೀ ಮಳೆಯಾಗಿದ್ದು, ಶೇ. ೨೮ ರಷ್ಟು ಮಳೆ ಕೊರತೆಯಾಗಿದೆ. ಕಳೆದ ಸಾಲಿನ ಆಗಸ್ಟ್, ಸೆಪ್ಟಂಬರ್‌ನಲ್ಲಿ ಮಳೆಯಾಗದ ಕಾರಣ ಬೆಳೆ ಸಂಪೂರ್ಣ ನಷ್ಟವಾಗಿದ್ದು, ಸುಮಾರು ೧೮೬೦೦ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ೨೮೦೯೬ ರೈತರಿಗೆ ೧೦೨೦.೯೭ ಲಕ್ಷ ರು. ಬರ ಪರಿಹಾರ ಮೊತ್ತ ರೈತರ ಖಾತೆಗೆ ಪಾವತಿಸಲಾಗಿದೆ. ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ತಾಲೂಕಿನಲ್ಲಿ ಮುಂಗಾರು ಕೃಷಿ ಬೆಳೆಗಳ ಒಟ್ಟು ವಿಸ್ತೀರ್ಣ ೩೨೫೫೩ ಹೆಕ್ಟೇರ್‌ ಗುರಿ ಇದ್ದು, ಈಗಾಗಲೇ ತಾಲೂಕಿನಲ್ಲಿ ೧೦೮೨೭ ಹೆಕ್ಟೇರ್ (ಶೇ.೩೩.೨೬) ಪ್ರದೇಶದಲ್ಲಿ ಬಿತ್ತನೆಯಾಗಿದೆ. ತಾಲೂಕು ವ್ಯಾಪ್ತಿಯ ೪ ರೈತ ಸಂಪರ್ಕ ಕೇಂದ್ರಗಳಲ್ಲಿ ರಾಗಿ, ಭತ್ತ, ಮುಸುಕಿನ ಜೋಳ, ಅಲಸಂದೆ, ತೊಗರಿ, ಶೇಂಗಾ ಬಿತ್ತನೆ ಬೀಜಗಳ ಒಟ್ಟು ೧೮೯೨.೪೫ ಕ್ವಿಂಟಲ್ ದಾಸ್ತಾನು ಮಾಡಿದ್ದು, ಈಗಾಗಲೇ ೧೪೮೩.೭೦ ಕ್ವಿಂಟಲ್ ವಿತರಣೆಯಾಗಿದೆ.

ಬಿತ್ತನೆ ಬೀಜಗಳ ವಿತರಣೆ ಕಾರ್ಯ ಮುಂದುವರೆದಿದ್ದು, ಕೊರತೆಯಾಗಿಲ್ಲ. ಕಳೆದ ವರ್ಷ ಒಟ್ಟು ೧೦೦೪ ಕ್ವಿಂಟಲ್ ಮಾತ್ರ ಬಿತ್ತನೆ ಬೀಜ ವಿತರಣೆಯಾಗಿದೆ. ಯುರಿಯಾ-೧೨೭೬.೪೩ ಮೆ.ಟನ್, ಡಿ.ಎ.ಪಿ-೨೫೪.೮೫ ಮೆ,ಟನ್, ಎಂ.ಒ.ಪಿ-೧೦.೫೭ಮೆ.ಟನ್, ಎನ್.ಪಿ.ಕೆ ಕಾಂಪ್ಲೆಕ್ಸ್ ಗೊಬ್ಬರ ೧೦೨೩.೦೧ ಮೆ.ಟನ್, ಇತರೆ ಗೊಬ್ಬರ ೨.೦೦ ಮೆ.ಟನ್ ಒಟ್ಟು ರಸಗೊಬ್ಬರ ೨೫೬೬.೮೬ಮೆ.ಟನ್ ದಾಸ್ತಾನು ಮಾಡಲಾಗಿದೆ.

೨೦೨೩-೨೪ ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ೬೫೭೨ ರೈತರು ನೋಂದಾಯಿಸಿದ್ದು ಒಟ್ಟು ೧೧೬೪ ಲಕ್ಷ ರು, ಬೆಳೆ ವಿಮೆ ಮೊತ್ತ ರೈತರ ಖಾತೆಗೆ ಪಾವತಿಯಾಗಿದೆ. ೨೦೨೪-೨೫ ನೇ ಸಾಲಿನಲ್ಲಿ ೬೦೦೦ ರೈತರು ನೋಂದಾಯಿಸಿದ್ದು, ಗ್ರಾಪಂ ಮಟ್ಟದಲ್ಲಿ ತರಬೇತಿ, ಆಟೋ ಪ್ರಚಾರ ಮಾಡಲಾಗಿದೆ.