ಸಾರಾಂಶ
ಕಳೆದ ವಿಧಾನಸಭಾ ಚುನಾವಣೆಯ ಸೋಲನ್ನು ಸವಾಲಾಗಿ ಸ್ವೀಕರಿಸಿ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿ ಎಂದು ರಾಜ್ಯ ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕರೆ ನೀಡಿದರು.
ಹಾರೋಹಳ್ಳಿ: ಕಳೆದ ವಿಧಾನಸಭಾ ಚುನಾವಣೆಯ ಸೋಲನ್ನು ಸವಾಲಾಗಿ ಸ್ವೀಕರಿಸಿ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿ ಎಂದು ರಾಜ್ಯ ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕರೆ ನೀಡಿದರು.
ಹಾರೋಹಳ್ಳಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಹಾರೋಹಳ್ಳಿ ಹಾಗೂ ಮರಳವಾಡಿ ಹೋಬಳಿಯ ಕಾರ್ಯಕರ್ತ ಹಾಗೂ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸೋಲು ಗೆಲುವು ಸಹಜ, ಸೋಲನ್ನು ಸವಾಲಾಗಿ ಸ್ವೀಕರಿಸಿ ರಾಜಕೀಯವಾಗಿ ಮುನ್ನುಗ್ಗಿದಾಗಲೇ ಯಶಸ್ಸುಗಳಿಸಲು ಸಾಧ್ಯ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಹಾಗೂ ಕೋಲಾರ ಲೋಕಸಭಾ ಚುನಾವಣೆಯ ಜವಾಬ್ದಾರಿಯ ಜೊತೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರವನ್ನು ಪಕ್ಷದ ವರಿಷ್ಠರು ನನ್ನ ಹೆಗಲಿಗೆ ಏರಿಸಿದ್ದಾರೆ ಎಂದರು.ಕಾರ್ಯಕರ್ತರು ಧೃತಿಗೆಡದೆ ಧೈರ್ಯವಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಲು ಸಜ್ಜಾಗಬೇಕು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸ್ಥಾನಕ್ಕೆ ಉತ್ತಮ ಅಭ್ಯರ್ಥಿ ಮಂಜುನಾಥ್ ದೊರಕಿದ್ದಾರೆ. ಸೋಲಿನಿಂದ ಪಾಠ ಕಲಿತಿರುವ ನಾವು ಲೋಕಸಭಾ ಚುನಾವಣೆಯನ್ನು ಜಾಗೃತೆಯಿಂದ ಎದುರಿಸಿ ಗೆಲುವು ಸಾಧಿಸಬೇಕು. ನಮ್ಮಲ್ಲಿನ ಎಲ್ಲಾ ಕಹಿ ಘಟನೆಗಳನ್ನು ಮರೆತು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಸಜ್ಜಾಗಬೇಕೆಂದು ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಆತ್ಮಸ್ಥೈರ್ಯ ತುಂಬಿದರು.
ಈ ಭಾಗದ ಕಾಂಗ್ರೆಸ್ ಶಾಸಕರು ಯಾವ ಇದೇ ರೀತಿ ಮಾಡತನಾಡುತ್ತಿದರೆ ಬಹಶಃ ರಾಜಕಾರಣದಲ್ಲಿ ದುರಹಂಕಾರಕ್ಕೆ ಉಳಿಗಾಲವಿಲ್ಲ, ರಾಮನಗರ ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಈಗಾಗಲೇ ಹತಾಶ ಮನೋಭಾವ ಶುರುವಾಗಿದೆ. ಜೆ.ಡಿ.ಎಸ್ ಮತ್ತು ಬಿ.ಜೆಪಿ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್‌ರನ್ನು ನಿಲ್ಲಿಸಿದ್ದು ಕಂಡು ಅವರ ಇಳಗೆ ಎಷ್ಟು ಆಂತಕವಿದೆಯೇ ಅದನ್ನು ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಮರಳವಾಡಿ ಭಾಗದಲ್ಲಿ ಕುಕ್ಕರ್ ತವ ಹಂಚಿಕೆಯಾಗುತ್ತಿದೆ ನೋತಿ ತಿಳಿಯಬಹುದಾಗಿದೆ ಎಂದರು.ಮುಖಂಡರಾದ ರಾಮ, ಲಕ್ಷ್ಮಣ, ಸಿದ್ದರಾಜು, ಗೊಲ್ಲಹಳ್ಳಿ ಸುರೇಶ್, ರುದ್ರಗೌಡ, ಪ್ರದೀಪ್, ಕರಿಯಪ್ಪ, ಅತ್ತಿಗುಪ್ಪೆ ಕೆಂಪಣ್ಣ, ಬನ್ನಿಕುಪ್ಪೆ ರಾಜು, ಗಬ್ಬಾಡಿ ಕಾಡೇಗೌಡ,.ಮೇಡಮಾರನಹಳ್ಳಿ ಕುಮಾರ್, ಕೋಟೆ ರಾಜು, ತಮ್ಮಯ್ಯಣ್ಣ ಉಪಸ್ಥಿತರಿದ್ದರು.