ಸಾರಾಂಶ
ಮೂರು ತಿಂಗಳ ಹಿಂದೆ ನೇಮಕ ಮಾಡಿದ್ದ ರಾಜ್ಯ ಸರ್ಕಾರ । ಅಧ್ಯಕ್ಷ, ಮೂವರು ನಿರ್ದೇಶಕರಿಂದ ಹಕ್ಕು ಚಲಾವಣೆ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಕಳೆದ ೧೦ ತಿಂಗಳಿಂದ ಖಾಲಿ ಇದ್ದ ನಗರದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮತ್ತು ನಿರ್ದೇಶಕ ಸ್ಥಾನಗಳಿಗೆ ಕಾಂಗ್ರೆಸ್ ಸರ್ಕಾರವು ಕಳೆದ ಮೂರು ತಿಂಗಳ ಹಿಂದೆಯೇ ನಾಮನಿರ್ದೆಶನ ಮಾಡಿ ಆದೇಶ ಹೊರಡಿಸಿದ್ದರೂ, ಚುನಾವಣೆ ನೀತಿಸಂಹಿತೆ ಕಾರಣ ಅಧಿಕಾರದಿಂದ ದೂರವಿದ್ದು, ಇದೀಗ ಅಧ್ಯಕ್ಷ ಜಿ.ಆರ್.ಮೂರ್ತಿ ಮತ್ತು ಮೂವರು ನಿರ್ದೆಶಕರು ತಮ್ಮ ಅಪಾರ ಬೆಂಬಲಿಗರು, ಸ್ನೇಹಿತರು, ಕಾರ್ಯಕರ್ತರ ಸಮ್ಮುಖದಲ್ಲಿ ಅಧಿಕಾರ ಸ್ವೀಕಾರ ಮಾಡಿದರು.
ಪಟ್ಟಣದ ರಿಲೆಯನ್ಸ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿನ ನಗರ ಯೋಜನಾ ಪ್ರಾಧಿಕಾರದ ಚೇಛೇರಿಯಲ್ಲಿ ಬೆಳಿಗ್ಗೆ ೧೧ ಘಂಟೆಗೆ ಅಧ್ಯಕ್ಷ ಜಿ,ಆರ್.ಮೂರ್ತಿ ಮತ್ತು ನಿರ್ದೇಶಕರಾದ ಎಚ್.ಎ೦.ಪ್ರವೀಣ್, ಡಿ.ಎಲ್.ವಿಜಯ್ ಕುಮಾರ್ ಮತ್ತು ಎ.ಎನ್.ರೋಹಿತ್ ರವರು ಪೂಜೆ ಸಲ್ಲಿಸಿ ಅಧಿಕಾರ ಸ್ವೀಕಾರ ಮಾಡಿದರು.ನೂತನ ಅಧ್ಯಕ್ಷರು ಮತ್ತು ನಿರ್ದೇಶಕರಿಗೆ ಸಂಸದ ಶ್ರೇಯಸ್ ಪಟೇಲ್, ಮಾಜಿ ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ, ಸೇರಿ ಪಕ್ಷದ ನೂರಾರು ಮುಖಂಡರು, ಕಾರ್ಯಕರ್ತರು, ತಾಲೂಕಿನ ವಿವಿಧ ಗ್ರಾಪಂ ಅಧ್ಯಕ್ಷರು, ಸದಸ್ಯರು, ಮಾಜಿ ಅಧ್ಯಕ್ಷರು, ಸದಸ್ಯರು, ತಾಪಂ. ಜಿಪಂ ಮಾಜಿ ಸದಸ್ಯರು, ಸೇರಿ ಪುರಸಭಾ ಸದಸ್ಯರು, ಮಾಜಿ ಸದಸ್ಯರು ಶುಭ ಕೋರಿದರು.
ನೂತನ ಅಧ್ಯಕ್ಷರು ಮತ್ತು ನಿರ್ದೆಶಕರನ್ನು ಅಭಿನಂದಿಸಿ ಮಾತನಾಡಿದ ಎಂ.ಎ.ಗೋಪಾಲಸ್ವಾಮಿ, ಚನ್ನರಾಯಪಟ್ಟಣದ ಪ್ರಾಧಿಕಾರಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿದೆ, ನೂತನ ಸಮಿತಿಯೂ ಪಟ್ಟಣದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯಲಿ. ಹಿಂದೆ ನಿರ್ಮಾಣ ಮಾಡಲಾಗಿರುವ ಬಡಾವಣೆಗಳು ಕಿರಿದಾದ ರಸ್ತೆ, ಮೂಲಭೂತ ಸೌಕರ್ಯಯಗಳಿಂದ ವಂಚಿತವಾಗಿವೆ. ಕಂದಾಯ ನಿವೇಶನ ಮಾಡಿ ಮಾರಾಟ ಮಾಡಿ ಕೆಲವರು ಹಣ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಅವರೆಲ್ಲರಿಗೂ ಕಡಿವಾಣ ಹಾಕುವುದರ ಜತೆಗೆ ಮುಂದೆ ನಿರ್ಮಾಣವಾಗುವ ಬಡಾವಣೆಗಳಲ್ಲಿ ಪ್ರಾಧಿಕಾರದ ಕಾನೂನಿನ್ವಯ ೩೦ ಅಡಿ ರಸ್ತೆ, ಸಿಎ ನಿವೇಶನ, ಉದ್ಯಾನ ಸೇರಿ ಸಮರ್ಪಕ ಅಭಿವೃದ್ಧಿಗೆ ಮುಂದಾಗಬೇಕು ಎಂದು ಹೇಳಿದರು.ಪ್ರಾಧಿಕಾರದ ನೂತನ ಅಧ್ಯಕ್ಷ ಜಿ.ಆರ್.ಮೂರ್ತಿ ಮಾತನಾಡಿ, ತನ್ನನ್ನು ಚನ್ನರಾಯಪಟ್ಟಣ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆ ಮಾಡಿದ ಸಿಎಂ, ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣನವರಿಗೆ ಮತ್ತು ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಮತ್ತು ಮಾಜಿ ಎಂಎಲ್ಲಿ ಗೋಪಾಲಸ್ವಾಮಿಯವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿ, ಪಟ್ಟಣದಲ್ಲಿ ಸುಸಜ್ಜಿತ ಲೇಔಟ್ ನಿರ್ಮಾಣಕ್ಕೆ ಒತ್ತು ನೀಡುವುದು, ಸರ್ಕಾರದ ನಿಯಮಾವಳಿ ಪ್ರಕಾರ ಲೇಔಟ್ ನಿರ್ಮಾಣಕ್ಕೆ ಆದ್ಯತೆ ನೀಡುತ್ತೇನೆ ಎಂದರು.
ಪ್ರಾಧಿಕಾರದಿಂದ ಅನೇಕ ಸಾರ್ವಜನಿಕ ಕೆಲಸಗಳು ಬಾಕಿ ಇದ್ದು, ಶೀಘ್ರ ಪೂರ್ಣಗೊಳಿಸುವುದಾಗಿ ಹೇಳಿದರು.