ಸಾರಾಂಶ
ತರೀಕೆರೆಯಿಂದ ಲಿಂಗದಹಳ್ಳಿ ಕಡೆಗೆ ಬರುತ್ತಿದ್ದ ಆಟೋಗೆ ಕಾಡುಹಂದಿಗಳ ಹಿಂಡು ಗುದ್ದಿದ ಪರಿಣಾಮ ಆಟೋ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ತರೀಕೆರೆ: ತರೀಕೆರೆಯಿಂದ ಲಿಂಗದಹಳ್ಳಿ ಕಡೆಗೆ ಬರುತ್ತಿದ್ದ ಆಟೋಗೆ ಕಾಡುಹಂದಿಗಳ ಹಿಂಡು ಗುದ್ದಿದ ಪರಿಣಾಮ ಆಟೋ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ನಾಗೇಶ್ (53) ಮೃತ ದುರ್ಧೈವಿ. ಈತ ಬುಧವಾರ ಬೆಳಿಗ್ಗೆ ಗ್ರಾಮಸ್ಥರೊಬ್ಬರ ಮದುವೆಯ ಅಡಿಗೆಗೆ ಬೇಕಾಗಿದ್ದ ತರಕಾರಿ ಮತ್ತಿತರ ವಸ್ತುಗಳನ್ನು ತುಂಬಿಸಿಕೊಂಡು ಆಟೋದಲ್ಲಿ ಬಳ್ಳಾವರ ಗ್ರಾಮಕ್ಕೆ ವಾಪಾಸ್ ಬರುತ್ತಿದ್ದ ಸಮಯದಲ್ಲಿ ಕಾಡುಹಂದಿಗಳ ಹಿಂಡು ಗುದ್ದಿ ಅಪಘಾತವಾಗಿದೆ.ಮೃತರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.ಆಟೋಕ್ಕೆ ಗುದ್ದಿದ ಕಾಡುಹಂದಿಯೂ ಸಹ ಸ್ಥಳದಲ್ಲೇ ಮೃತಪಟ್ಟಿದೆ, ಈ ಸಂಬಂಧ ಲಿಂಗದಹಳ್ಳಿ ಪೋಲೀಸ್ ಠಾಣೆ ಮತ್ತು ಲಿಂಗದಹಳ್ಳಿ ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ಧಾಖಾಲಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.
19ಕೆಟಿಆರ್.ಕೆ.03ಃ ನಾಗೇಶ್