ಚಿಕ್ಕಬಳ್ಳಾಪುರ: ಟಾಟಾ ಏಸ್ ಮತ್ತು ಕ್ಯಾಂಟರ್ ನಡುವೆ ಭೀಕರ ಅಪಘಾತವಾಗಿ ಟಾಟಾ ಏಸ್‌ನಲ್ಲಿದ್ದ ಆರು ಮಂದಿ ಕೃಷಿ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿರುವ ಘಟನೆ ತಾಲೂಕಿನ ನಾಯನಹಳ್ಳಿ ಗೇಟ್‌ನಲ್ಲಿ ಮಂಗಳವಾರ ಸಂಜೆ ನಡೆದಿದೆ.

ಗಂಭೀರವಾಗಿ ಗಾಯಗೊಂಡ ಅಜ್ಜವಾರ ಗ್ರಾಮದ 6 ಜನ ಕೂಲಿ ಕಾರ್ಮಿಕ ಮಹಿಳೆಯರಾದ ವಿದ್ಯಾ, ಸಾವಿತ್ರಮ್ಮ, ಭಾವನ, ನಾಗಮ್ಮ, ಲಕ್ಶ್ಮಮ್ಮ, ಮುನಿರತನಮ್ಮ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ರೈತರ ತೋಟದಲ್ಲಿ ಆಲೂಗಡ್ಡೆ ಕೀಳಲು ಕರೆದುಕೊಂಡು ಹೊಗಿದ್ದ ಟಾಟಾವೇಎಸ್ ಗಾಡಿ ಮರಳಿ ಕೂಲಿ ಕಾರ್ಮಿಕರನ್ನು ಅವರ ಸ್ವಗ್ರಾಮ ಅಜ್ಜವಾರಕ್ಕೆ ತಲುಪಿಸಲು ವಾಪಸ್ಸು ಬರುವಾಗ ನಾಯನಹಳ್ಳಿ ಗ್ರಾಮದ ಬಳಿ ಚಿಕ್ಕಬಳ್ಳಾಪುರದಿಂದ ಶಿಢ್ಲಘಟ್ಟ ಕಡೆ ತೆರಳುತ್ತಿದ್ದ ಕ್ಯಾಂಟರ್ ನಡುವೆ ಡಿಕ್ಕಿಯಾಗಿದೆ. ಈ ವೇಳೆ ಡಿಕ್ಕಿಯ ರಭಸಕ್ಕೆ ಟಾಟಾ ಏಸ್ ವಾಹನ ನುಜ್ಜು ಗುಜ್ಜಾಗಿ ಟಾಟಾ ಏಸ್ ಗಾಡಿಯಲ್ಲಿದ್ದ ಆರು ಜನ ಮಹಿಳಾ ಕೂಲಿ ಕಾರ್ಮಿಕರಗೆ ಗಂಭೀರ ಗಾಯಗಳಾಗಿದೆ.

ಇತ್ತೀಚಿಗೆ ಒಂದೇ ಬೈಕಲ್ಲಿ 4 ಜನ ಪ್ರಯಾಣ ಮಾಡಿ ಅಪಘಾತಾಕ್ಕೊಳಗಾಗಿ ಜೀವ ಕಳೆದುಕೊಂಡ ಗ್ರಾಮದವರೇ ಇಂದಿನ ಆಪಘಾತದಲ್ಲೂ ಗಾಯಗೊಂಡಿರುವುದು ದುರಂತದ ಸಂಗತಿಯಾಗಿದೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.