ಸಾರಾಂಶ
ಶಿರಾ: ತವೆರಾ ಕಾರೊಂದು ನಿಂತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ಬೀಕರ ಅಪಘಾತ ಸಂಭವಿಸಿ ನವ ವಿವಾಹಿತ ಮಹಿಳೆ ಸಾವನ್ನಪ್ಪಿ ೬ ಜನರಿಗೆ ತೀವ್ರ ಗಾಯಗಳಾಗಿರುವ ಘಟನೆ ನಗರದ ಹೊರವಲಯದ ಉಲ್ಲಾಸ್ತೋಪಿನ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಶಿರಾ: ತವೆರಾ ಕಾರೊಂದು ನಿಂತಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ಬೀಕರ ಅಪಘಾತ ಸಂಭವಿಸಿ ನವ ವಿವಾಹಿತ ಮಹಿಳೆ ಸಾವನ್ನಪ್ಪಿ ೬ ಜನರಿಗೆ ತೀವ್ರ ಗಾಯಗಳಾಗಿರುವ ಘಟನೆ ನಗರದ ಹೊರವಲಯದ ಉಲ್ಲಾಸ್ತೋಪಿನ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಮೃತಪಟ್ಟ ಮಹಿಳೆ ಯಲಿಯೂರು ಗ್ರಾಮದ ರೇಖಾ (23) ಎಂದು ತಿಳಿದುಬಂದಿದ್ದು, ಹೆಗ್ಗನಹಳ್ಳಿ ಗ್ರಾಮದ ಕಮಲಮ್ಮ, ಕಾರಿನ ಚಾಲಕ ಮನು, ಸಾಗರ್, ಸರಸ್ವತಮ್ಮ ಗಾಯಗೊಂಡಿದ್ದಾರೆ. ಕಳೆದ 1 ವರ್ಷದ ಹಿಂದೆ ಯಲಿಯೂರು ಗ್ರಾಮದ ಭಾನು ಪ್ರಕಾಶ್ ಎಂಬ ಹುಡುಗನ ಜೊತೆ ರೇಖಾ ಮದುವೆಯಾಗಿದ್ದು, ಭಾನುಪ್ರಕಾಶ್ ಅಯ್ಯಪ್ಪ ದರ್ಶನಕ್ಕೆ ತೆರಳಿದ್ದು, ಇರುಮುಡಿ ಬಳಿಕ ಪೂಜೆ ಸಲ್ಲಿಸಿ ತನ್ನ ಗಂಡನ ಅಣ್ಣ ಸಾಗರ ನೂತನ ಟ್ರ್ಯಾಕ್ಟರ್ ಕೊಂಡಿದ್ದು ಇದರ ಪೂಜಾ ಕಾರ್ಯಕ್ರಮಕ್ಕೆ ಕುನಳ್ಳಿ ಶನಿಮಹಾತ್ಮಾ ದೇವಸ್ಥಾನಕ್ಕೆ ಕುಟುಂಬ ಸಮೇತ ತೆರಳುತ್ತಿದ್ದರು ಎನ್ನಲಾಗಿದೆ.ಶಿರಾ ಮಧುಗಿರಿ ರಸ್ತೆಯ ಉಲ್ಲಾಸ ತೋಪಿನ ಬಳಿ ಇರುವ ಪೆಟ್ರೋಲ್ ಬಂಕ್ ಮುಂದೆ ನಿಂತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ತವೇರ ಕಾಡು ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲೇ ರೇಖಾ ಸಾವನ್ನಪ್ಪಿದ್ದಾಳೆ. ಡ್ರೈವರ್ ಹಾಗೂ ತಾಯಿಯಾದ ಕಮಲಮ್ಮ ತೀವ್ರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಸೇರಿಸಲಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಇನ್ನುಳಿದ ೪ ಜನರಿಗೆ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ರವನಿಸಲಾಗಿದೆ. ಈ ಸಂಬಂಧ ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಫೋಟೊ
ಅಪಘಾತದಿಂದ ನಜ್ಜುಗುಜ್ಜಾಗಿರುವ ತವೇರಾ ಕಾರು